ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ʼಜೀವಜಲ ಅಮೃತ
ಸಕಲ ಜೀವರಾಶಿಗಳಿಗೆ
ಅದುವೇ ಬಲʼ


ನೀರು ಒಂದು ಅಮೂಲ್ಯವಾದ ಸಂಪತ್ತು ಆಗಿದ್ದು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳಿಗೂ ಆಧಾರವಾಗಿದೆ ಅಷ್ಟೇ ಅಲ್ಲದೆ ನೀರು ಜೀವಿಗಳನ್ನು ಉಳಿಸುತ್ತದೆ ಹಾಗೂ ಭೂಮಿಯ ಮೇಲೆ ಹೇರಳವಾಗಿ ನೀರು ಸರಬರಾಜು ಇದ್ದರೂ ಅದರಲ್ಲಿ ಒಂದು ಭಾಗ ಮಾತ್ರ ಸಿಹಿ ನೀರು ಕುಡಿಯಲು ಮತ್ತು ಕೃಷಿಗೂ ಸೂಕ್ತವಾಗಿದೆ. ಆದ್ದರಿಂದ ನಾವುಗಳು ನೀರು ಪೊಲಾಗುವುದನ್ನು ತಡೆಯಬೇಕು ಮತ್ತು ಹಲವಾರು ಕೈಗಾರಿಕೆಗಳ ಅತಿಯಾದ ನೀರಿನ ಬಳಕೆಯಿಂದ ನೀರು ಪೊಲುಷಿತ ಆಗಿ ಬಿಡುತ್ತದೆ . ಅಷ್ಟೇ ಅಲ್ಲದೆ ಅನೇಕ ಜಲಚರ ಪ್ರಭೇದಗಳು ತಮ್ಮ ಉಳಿವಿಗಾಗಿ ಆರೋಗ್ಯಕರ ಜಲದ ಮೂಲಗಳನ್ನು ಅವಲಂಬಿಸಿವೆ ಅತಿಯಾದ ನೀರಿನ ಮಾಲಿನ್ಯದಿಂದ ಜೀವಿಗಳಿಗೆ ಹಾನಿ ಉಂಟಾಗುತ್ತದೆ ಇನ್ನು ನೀರು ಕೃಷಿಗೆ ಕೂಡ ಅಷ್ಟೇ ಮುಖ್ಯವಾಗಿ ಬೇಕು ಬೆಳೆಯ ಆಯ್ಕೆ ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆ ಕೂಡ ಅತ್ಯಗತ್ಯ .ಮತ್ತು ನದಿಗಳು ಕೂಡ ಅನೇಕ ಪ್ರದೇಶಗಳ ಜೀವನಾಡಿಯಾಗಿದ್ದು ಕೃಷಿಗೆ ಮತ್ತು ಸಾರಿಗೆ ನೀರನ್ನು ಒದಗಿಸುತ್ತದೆ ಅತಿಯಾದ ನೀರಿನ ಹೊರ ತೆಗೆಯುವಿಕೆಯಿಂದ ನದಿಗಳು ಒಣಗುತ್ತಿವೆ. ಅದರಲ್ಲೂ ಅವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಕೆಲವೊಂದು ಜಲ ಸಂರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಸಂರಕ್ಷಣೆಯನ್ನು ಮತ್ತು ಸೋರುವಿಕೆಯನ್ನು ತಡೆಗಟ್ಟಬಹುದು. ಮತ್ತು ದೈನಂದಿನ ಜೀವನದಲ್ಲಿ ಜವಾಬ್ದಾರಿಯುತ ನೀರಿನ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ನೀರು ವ್ಯರ್ಥವಾಗುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಇನ್ನು ಮುಖ್ಯವಾಗಿ ಶಿಕ್ಷಣದ ಮೂಲಕ ಕೂಡ ನೀರಿನ ಒಂದು ಜವಾಬ್ದಾರಿಯುತ ಕ್ರಮಗಳನ್ನು ಸಮುದಾಯದೊಂದಿಗೆ ಚರ್ಚಿಸಿ ನೀರಿನ ಮಹತ್ವದ ಬಗ್ಗೆ ತಿಳಿಸಬಹುದು ಮತ್ತು ಜಲ ಸಂರಕ್ಷಣೆ ಕೇವಲ ಒಂದು ಆಯ್ಕೆ ಅಲ್ಲ ಅದು ಒಂದು ಅವಶ್ಯಕತೆಯಾಗಿದೆ. ನಮ್ಮ ಭವಿಷ್ಯದ ಜವಾಬ್ದಾರಿಯುತ ನಿರ್ವಹಣೆಗಾಗಿ ನಾವೆಲ್ಲರೂ ನೀರನ್ನು ಸಂರಕ್ಷಿಸುವುದು ಬಹುಮುಖ್ಯವಾಗಿದೆ.
ಮನುಷ್ಯ ಬದುಕಲು ಅವಶ್ಯವಾಗಿ ಬೇಕಾಗಿರುವ ಅಂಶಗಳಲ್ಲಿ ಜೀವ ಜಲ ಅಮೃತವು ಕೂಡ ಒಂದು
ಒಂದು ದಿನ ಉಪವಾಸ ಬೇಕಾದರೂ ಇರಬಹುದು ಆದರೆ ನೀರು ಕುಡಿಯದೇ ಇರಲು ಸಾಧ್ಯವಿಲ್ಲ ಹಾಗೆಯೇ ಪ್ರತಿಯೊಬ್ಬ ಮನುಷ್ಯರು ನಿತ್ಯ ಬದುಕಿಗೆ ಬಳಸಿಕೊಳ್ಳಲು ಕೂಡ ಬೇಕು ನೀರು
ಇಷ್ಟು ಮುಖ್ಯವಾದ ಒಂದು ಜಲವನ್ನು ನಾವು ಸಂರಕ್ಷಿಸುವ ಬಗೆಯನ್ನು ಅರಿತರೆ ಬತ್ತುವುದಿಲ್ಲ ಜಲ .
ನೀರು ಉಳಿಸಿ ಜೀವ ಉಳಿಸಿ ಎನ್ನುವಂತೆ
ಪ್ರತಿಯೊಬ್ಬರೂ ಕೂಡ ಜಲ ಸಂರಕ್ಷಣೆಯ ನಿಯಮಗಳನ್ನು ಅರಿತರೆ ನೀರು ವ್ಯರ್ಥವಾಗುವುದಿಲ್ಲ ಮುಂದಿನ ಪೀಳಿಗೆಗೆ ಉಳಿತಾಯವಾಗುತ್ತದೆ ಅಷ್ಟೇ ಅಲ್ಲದೆ ಭೂಗರ್ಭದಲ್ಲಿ ನೀರಿನ ಮಟ್ಟವು ಕೂಡ ಸುರಕ್ಷಿತವಾಗಿ ಇರುತ್ತದೆ.
ಬಿಸಿಲ ತಾಪಕ್ಕೆ ನದಿ ಕೆರೆ ಕಾಲುವೆಗಳಲ್ಲಿ ನೀರು ಆವಿಯಾಗಿ ಮೋಡ ಸೇರುತ್ತದೆ.
ಮತ್ತು ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಮಳೆಗಾಲದಲ್ಲಿ ಮೋಡವು ತಂಪಾಗಿ ಸುರಕ್ಷಿತವಾದ ಮಳೆಗಾಲವು ಪ್ರಾರಂಭವಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಮನೆಗೊಂದು ಮರ ಊರಿಗೊಂದು ವನ ಎನ್ನುವಂತೆ ಗಿಡ ಮರವನ್ನು ಬೆಳಸಿ ಪೋಷಿಸಿದರೆ ಉತ್ತಮ ಪರಿಸರವನ್ನು ನಿರ್ವಹಣೆ ಮಾಡಬಹುದು ಹಾಗೂ ಅವುಗಳ ನಿರ್ವಹಣೆ ಕೂಡ ತುಂಬಾ ಮಹತ್ವವಾದದ್ದು.

ಮನುಕುಲದ ಒಳಿತಗಾಗಿ ಹಸಿರಿನ ಆರೈಕೆ ಜೊತೆಗೆ ನೀರಿನ ಸಂರಕ್ಷಣೆ ಕೂಡ ಬೇಕು. ಮನುಷ್ಯ ತಾನು ಕೆಲಸದಲ್ಲಿ ಎಷ್ಟೇ ಒತ್ತಡದಲ್ಲಿದ್ದರೂ ಕೂಡ ಪ್ರಾಣಿ ಪಕ್ಷಿಗಳಿಗೆ ಒಂದಿಷ್ಟು ನೀರು ಕಾಳುಗಳನ್ನು ಹಾಕುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಇದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲದೆ ಪಕ್ಷಿ ಸಂಕುಲಗಳನ್ನುಉಳಿಸಿದಂತಾಗುತ್ತದೆ.
ಹಾಗಾಗಿ ವಿಶ್ವಸಂಸ್ಥೆಯು 1993 ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆರಂಭಿಸಿತು.
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಜೀವ ಜಲ ಅಮೃತ ಅದುವೇ ಜೀವಿಗಳಿಗೆ ಬಲ.
ನಾಗರತ್ನ ಹೆಚ್ ಗಂಗಾವತಿ.
Nice writing ri madm