ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ʼಮನದಿಂಗಿತʼ


ಬೊಗಸೆಯಷ್ಟಲ್ಲದಿದ್ದರೂ ಸರಿ
ಹಿಡಿಯಷ್ಟಾದರೂ ಭಕ್ತಿ ಭಾವನೆ ಕೊಡು
ಹಗಲಿರುಳಲ್ಲದಿದ್ದರೂ, ಹಗಲಿನ ತುಸು ಹೊತ್ತಾದರೂ ನಿನ್ನೆನಹು ಕೊಡು
ಸಂಸಾರದ ನೊಗವು ಬಲು ಭಾರ
ಹೊತ್ತು ಸಾಗಲು ಈ ಹೆಗಲಿಗಾಸರೆ ಕೊಡು
ದಣಿವಾರಿಸಿಕೊಳ್ಳಲು ಬಿಡದ ಬದುಕಿದಾದರೂ
ನಿನ್ನ ಪಾದಗಳಲಿರಲು ಕೆಲ ಕ್ಷಣಗಳ ಕೊಡು
ಝಗಮಗಿಸುವ ಜಗ ಮೈಮರೆಸುವುದಾದರೂ
ನಿನ್ನ ಕಾಣಬೇಕೆಂಬ ಮನದಿಂಗಿತ ಕೊಡು
ಬದುಕಿಗಾಗಿ ಮಿಡಿಯುವ ಮನಸಿದಾದರೂ
ನಿನ್ನಯ ನಾಮ ಜಪಿಸುವ ಹವ್ಯಾಸ ಕೊಡು
ನಿನ್ನ ಕಾಣದ ಕಣ್ಣು ,
ಭಜನೆ ಆಲಿಸದ ಕಿವಿ ,
ನಿನ್ನ ಭಜಿಸದ ತುಟಿ ,
ನಿನ್ನ ನಮಿಸದ ಕೈ ,
ನಿನ್ನ ನೆನೆಯದ ಮನ ,
ನಿನಗರ್ಪಿಸದ ತನು ,
ಇದ್ದರೇನು?
ಇರದಿದ್ದರೇನು ?? ,
ಇರದಿದ್ದರೇನು ?
ಇದ್ದರೇನು?? ….
——————————————-
ವಾಣಿ ಯಡಹಳ್ಳಿಮಠ
ದಣಿವಾರಿಸಿಕೊಳ್ಳಲು ಬಿಡದ ಬದುಕಿಗಾದರೂ, wow, what a line maam
Thank you so much