ಪ್ರಿಯ ಕವಿಗಳೆ,
ಕವಿತೆ ಬರೆಯುವವರಸಂಖ್ಯೆ ಜಾಸ್ತಿಯಾಗಿದೆ, ಎಲ್ಲರೂ ಕವಿತೆ ಬರೆಯುವವರೇ ಆಗಿದ್ದಾರೆ ಅನ್ನೋ ಒಂದು ದೂರನ್ನು ಬಹಳಜನ ಅದರಲ್ಲು ಈಗಾಗಲೇ ಕವಿಗಳೆಂದು ಗುರುತಿಸಿಕೊಂಡಿರುವವರು ಹೇಳುತ್ತಲೇ ಇದ್ದಾರೆ. ದಯವಿಟ್ಟು ಇವರ ಮಾತುಗಳಿಗೆಕಿವಿಕೊಡಬೇಡಿ. ನಿಮ್ಮ ಪಾಡಿಗೆ ನೀವುಕವಿತೆ ಬರೆಯುತ್ತ ಹೋಗಿ….ನೀವುಬರೆದ ಕವಿತೆ ಚೆನ್ನಾಗಿದ್ದರೆ ನಾಲ್ಕು ಜನರಾದರು ಓದುತ್ತಾರೆ.ಚೆನ್ನಾಗಿರದಿದ್ದರೆ ನೋಡಿ ಮುಂದಕ್ಕೆ ಹೋಗ್ತಾರೆ,ನೀವದಕ್ಕೆ ತಲೆಕೆಡಿಸಿಕೊಳ್ಳಬೇಡಿ.ಅಷ್ಟಕ್ಕೂ ನೀವೇನು ಜ್ಞಾನಪೀಠ ಪ್ರಶಸ್ತಿ ಪಡೆಯಲೇನು ಕವಿತೆ ಬರೆಯುತ್ತಿಲ್ಲವಲ್ಲ.
ಯಾವ ಕವಿ ಓದಲಿ ಬಿಡಲಿ-ಯಾವ ಪತ್ರಿಕೆ ಪ್ರಕಟಿಸಲಿಬಿಡಲಿ, ಕವಿತೆ ಬರೆಯುವ ಖುಶಿ ನಿಮಗಿದೆಯಾದರೆ ಬರೆಯುತ್ತ ಹೋಗಿ. ಯಾವತ್ತಾದರು ಒಂದು ದಿನ ಕವಿತೆ ನಿಮ್ಮ ಕೈಹಿಡಿಯಬಹುದು-ಹಿಡಿಯದಿದ್ದರೂ ಕೊರಗುವ ಅಗತ್ಯವಿಲ್ಲ.
ಇನ್ನು ನನ್ನ ಅನುಭವದಿಂದ ಕೆಲಕಿವಿಮಾತುಗಳನ್ನು ಹೇಳುತ್ತೇನೆ, ಕೇಳಿ.ಕವಿತೆ ಬರೆಯಲು ಇಂತಹುದೇ ವಸ್ತು ಬೇಕೆಂದೇನು ಇಲ್ಲ..ಬಟ್ಟೆಗೆ ಹಾಕುವ ಪಿನ್ನಿಂದ ಹಿಡಿದು ಕಿತ್ತು ಹೋಗಿರುವ ಚಪ್ಪಲಿಯವರೆಗು,ನಿಮ್ಮಕವಿತೆಯ ವಸ್ತು ಯಾವುದಾದರೂ ಆಗಿರಬಹುದು. ವಸ್ತುವಿಗಿಂತ ಕವಿತೆ ಕಟ್ಟುವ ರೀತಿ ಮುಖ್ಯ. ಇನ್ನೊಬ್ಬರನ್ನು ಕಾಪಿ ಮಾಡಲು ಅವರ ಶೈಲಿಯನ್ನು ಅಳವಡಿಸಿಕೊಳ್ಳುವ ಅನಗತ್ಯ ಸರ್ಕಸ್ ಮಾಡಬೇಡಿ.ಕವಿತೆ ಹಠ ಹಿಡಿದು ಬರೆಸಿಕೊಳ್ಳುವ ಪ್ರಕಾರವಲ್ಲ-ಬರೆಯಲೇಬೇಕೆಂಬ ತುಡಿತ ನಿಮ್ಮೊಳಗೆ ಬಂದಾಗಲಷ್ಟೇ ಬರೆಯಿರಿ.ಬರೆದಿದ್ದನ್ನು ತಕ್ಷಣವೇ ಪ್ರಕಟಿಸಬೇಡಿ.ಅದನ್ನೇ ಮತ್ತೆ ಮತ್ತೆನೀವೇಓದಿಕೊಂಡು ನೋಡಿ. ಏನು ತಪ್ಪಾಗಿರಬಹುದು?ಎಲ್ಲಿ ತಿದ್ದಬೇಕಿದೆಎನ್ನುವುದು ನಿಮಗೇಅರ್ಥವಾಗುತ್ತದೆ.ನಂತರವಷ್ಟೆ ಪ್ರಕಟಿಸಿ. ಇನ್ನುನಿಮ್ಮ ಶಬ್ದಭಂಡಾರ ಹೆಚ್ಚಿಸಿಕೊಳ್ಳಲು, ಕಾವ್ಯದ ಆಳ-ಅಗಲಗಳನ್ನು ಅರ್ಥ ಮಾಡಿಕೊಳ್ಳಲುಹಿರಿಯ ಕವಿಗಳನ್ನ ಹೆಚ್ಚು ಓದಿ. ಬೇರೆಯವರ ಕವಿತೆಗಳನ್ನು ಓದಿ,ನಿಮಗಿಷ್ಟವಾದರೆ ಅವರೊಟ್ಟಿಗೆಕವಿತೆಯ ಬಗ್ಗ ಚರ್ಚಿಸಿ ನಿಮ್ಮ ಕಾವ್ಯದ ಅರಿವನ್ನು ಹೆಚ್ಚಿಸಿಕೊಳ್ಳಿ…ಒಟ್ಟಿನಲ್ಲಿ ಹೆಚ್ಚು ಓದಿ…..
ಇಷ್ಟೆಲ್ಲ ಹೇಳಿದ ಮೇಲೊಂದು ಕೊನೆಯಮಾತನ್ನೂ ಹೇಳಿ ಬಿಡುತ್ತೇನೆ- ಕವಿತೆ ತೀರಾ ಸುಲಭದ ಮಾತಲ್ಲ. ತೀರಾ ಹಗುರವಾಗಿ ತೆಗೆದುಕೊಳ್ಳಬೇಡಿ.ಸ್ವಲ್ಪ ಗಾಂಭೀರ್ಯವೂ ಇರಲಿ
ಕವಿತೆ fashion ಆಗದೆ passion ಆಗಲಿ.
ಕವಿತೆ ನಿಮ್ಮ ಕೈಹಿಡಿಯಲಿ
@ ಮುವತ್ತು ವರ್ಷಗಳಿಂದ ಅವಳನ್ನು ಕವಿತೆಯನ್ನುಒಲಿಸಿಕೊಳ್ಳಲು ಇನ್ನಿರದ ಪ್ರಯತ್ನ ಮಾಡುತ್ತಲೇ ಇರುವ ನಿಮ್ಮ ಗೆಳೆಯ.
ಕು.ಸ.ಮಧುಸೂದನ್ ರಂಗೇನಹಳ್ಳಿ