ರತ್ನರಾಯಮಲ್ಲ ಅವರ ಹೊಸ ಗಜಲ್

ಅಸಹಾಯಕತೆ ಹತ್ತಿರ ಸುಳಿಯದಷ್ಟು ಬೆಳೆಯಬೇಕು ನಾವು
ಯಾವುದೆ ವಿಚಾರಗಳಿಗೂ ಕದಡದಷ್ಟು ಬೆಳೆಯಬೇಕು ನಾವು

ಬದುಕಿನ ಕಾಡಿನಲ್ಲಿ ಉಳಿಯಲು ಹೋರಾಟ ಮಾಡಲೇಬೇಕು
ಇತಿಹಾಸದಲ್ಲಿ ಹೆಜ್ಜೆ ಗುರುತು ಅಳಿಸದಷ್ಟು ಬೆಳೆಯಬೇಕು ನಾವು

ಮನುಕುಲದ ರಕ್ತದಲ್ಲಿಯೆ ರಾಜಕೀಯ ನಡೆ ಬೆರೆತು ಹೋಗಿದೆ
ತುಳಿಯುವ ಕಾಲುಗಳಿಗೆ ನಿಲುಕದಷ್ಟು ಬೆಳೆಯಬೇಕು ನಾವು

ಕಾಲದೊಂದಿಗೆ ಮನಸು ಮಾಗಲು ಸಮಾಜವನ್ನು ಪ್ರೀತಿಸಬೇಕು
ನೋವಿನ ಸರಮಾಲೆಗಳಿಗೆ ನರಳದಷ್ಟು ಬೆಳೆಯಬೇಕು ನಾವು

ಮಲ್ಲಿಗೆಯ ಸುಮ ಅರಳಲು ನೆರಳಿನೊಂದಿಗೆ ಬಿಸಿಲೂ ಬೇಕು
ಇತರರ ಸಂಭ್ರಮ ಕಂಡು ಕೊರಗದಷ್ಟು ಬೆಳೆಯಬೇಕು ನಾವು


Leave a Reply

Back To Top