ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಕವಿಯ ಕಾವ್ಯದಂಗಳ

ಕಾವ್ಯವೊಂದು ಅಧ್ಭುತ ಜಗದ ಶ್ರವಣ
ಸಂಭ್ರಮಿಸುವ ಧಿಗ್ಭ್ರಮಿಸುವ ಸ್ಫುರಣ
ಕಣ್ಣಿಗೆ ಕಂಗೊಳಿಸುವ ದೃಷ್ಯಗಳಾಭರಣ
ಸೌಗಂಧ ಶ್ರೀಗಂಧ ಪರಿಸರದ ಅನಾವರಣ
ಸಂಪ್ರೀತಿ ಸಂತೃಪ್ತಿ ತಂದ ಹೃದಯದಂಗಣ
ಕವಿಯಲ್ಲಿ ಸಂಚರಿತ ಸ್ಪೂರಣದ ಹೂರಣ
ಕಾವ್ಯ ಜೀವನದ ಅನುಭವಗಳ ಹಂದರ
ಕೆದಕಿ ಸೇಖರಿದ ಬಿತ್ತಣಿಕೆಯ ಸಂಚಾರ
ಬರವಣಿಗೆಯಲ್ಲಿ ಹರಿದ ಶಬ್ದಗಳ ಶರ
ಕವಿಯ ವರ್ಣನೆಯಲ್ಲಿ ಅರಳಿದ ಅಕ್ಷರ
ಓದುಗರ ಹೃದಯ ತಟ್ಟುವ ಭ್ರಮರ
ಕನ್ನಡಮ್ಮ ಹಾರೈಸುತ ನೀಡಿಹಳು ವರ
ಕವಿಯ ಕಲ್ಪನೆಯ ಶರಧಿಯ ಆಳ
ಅರಳಿ ಪುಟಿಪುಟಿದೆಳುವ ಸ್ವರತಾಳ
ಕಾವ್ಯ ಲಹರಿ ಸ್ಪಂದನೆಯ ಮಿಡಿತದಾಳ
ಮನದಿಂದ ಮನಕ್ಕೆ ಪೋಣಿಪುದು ಸರಳ
ವಿಶ್ವ ಕಾವ್ಯ ದಿನದೊಂದು ಈ ನನ್ನ ಕವನ
ತಲುಪಲಿ ಕವಿಗಳ ಕಾವ್ಯದ ಪ್ರಾಂಗಣ
—————————–

ಸುಲೋಚನಾ ಮಾಲಿಪಾಟೀಲ