ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್

ಬಾರದಿಹ ಬಂಧಗಳು ಏಸೋ ಇವೆ ಎದೆಯೊಳಗೆ
ಸೇರದಿಹ ತಾಣಗಳು ಏಸೋ ಇವೆ ಎದೆಯೊಳಗೆ
ಬದುಕೆಂದರೆ ಅಂದಕೊಂಡದದೆಲ್ಲ ಆಗುವ ಚಿತ್ರವಲ್ಲ
ಕೈಗೆಟಕಿಯೂ ಸಿಗದ ನಂಟುಗಳು ಏಸೋ ಇವೆ ಎದೆಯೊಳಗೆ
ಉರಿದುಕರಕಲಾದ ನೆನಣಪುಗಳು ಮತ್ತೆ ಚಿಗುರುತ್ತವೆ
ಕೈಗೂಡದ ಹುಚ್ಚು ಹಳವಂಡಗಳು ಏಸೋ ಇವೆ ಎದೆಯೊಳಗೆ
ಯಾರೋ ಎಸೆದಕಲ್ಲಿಗೆ ಒಡೆದು ಹೋದ ಮನವೆಂಬ ಗಾಜು
ಛಿದ್ರ ಚೆಲ್ಲಾಪಿಲ್ಲಿ ತುಣುಕುಗಳು ಏಸೊಇವೆ ಎದೆಯೊಳಗೆ
ನೆನಪುಗಳ ಹಂಗಿನರಮನೆಯೊಳಗೆ ಹೂತುಹೋಗುವೆವು ಜೋಗಿ
ಚಿಗುರಿದ ಹೊಸ ಕನಸುಗಳು ಏಸೋ ಇವೆ ಎದೆಯೊಳಗೆ
ವೈ.ಎಂ.ಯಾಕೊಳ್ಳಿ

ಅತ್ಯಂತ ಅರ್ಥಪೂರ್ಣವಾದ ಕವಿತೆ ಭಾವಪೂರ್ಣ ಅಭಿವ್ಯಕ್ತಿ