ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ʼಜೀವನಮುಕ್ತಿʼ


ನೀನು ಮರೆಯಾಗಿ
ಹೋದೆ ಎಂದು
ಬಳಲಲಿಲ್ಲ ನಾನು
ನಿನ್ನ ನೆನಪಲಿ
ನಿನ್ನ ನೆನಹುವಿನಲಿ
ನೂಕುತ್ತಿರುವೆ ಬದುಕು
ನಿನ್ನ ಶಕ್ತಿ
ಕೈ ಹಿಡಿದು ನಡೆದೇವು
ಮೂರು ದಶಕದ ಜೀವನ
ನಿನಗೆ ನಾನು ನನಗೆ ನೀನು
ಮರೆತು ಹೋದ ಪಯಣ
ನಿನ್ನ ಉಸಿರಲಿ ನಾನು ಬೆರೆತ
ನನ್ನ ಜೀವಕೆ ಸ್ಫೂರ್ತಿ
ಇರಲಿ ಸ್ನೇಹ ಪ್ರೀತಿ ಜೀವ ಮುಕ್ತಿ
——————————————————-

ದೀಪಾ ಪೂಜಾರಿ ಕುಶಾಲನಗರ
Excellent Poem Madam