
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ನಯವಂಚಕ ಜಿಗಣೆ

ನಮ್ಮ ಡಾಕ್ಟ್ರು ವೈದ್ಯ ಪರೀಕ್ಷೆಗೆಂದು ನಮ್ಮ (ಹೀರುವ) ರಕ್ತ ಪಡೆದುಕೊಳ್ಳುವದಕೋಸ್ಕರ, ಖಾಲಿ ಸಿರಿಂಜ್ ಒಂದನ್ನು ಎತ್ತಿ ಸಿದ್ಧಮಾಡಿಕೊಂಡು, ಅದಕ್ಕೊಂದು ಚೂಪನೆ ಸೂಜಿ ಮುಂದುರುಕಿ ರೋಗಿಯ ಕೈ ಮುಂದೆಳೆದು ಕಚಕ್ ಎಂದು ಚುಚ್ಚಿ ಕಣ್ಣೆದುರೆ ರಕ್ತ ಹೀರುತ್ತಿರಬೇಕಾದರೆ, ಆಗುವ ಕುಟುಕ ನೋವುಗಳಿಗೆ ಪಾರವೇ ಇರುವುದಿಲ್ಲ.
ವೈದ್ಯನೆನೋ ಹೀಗೆ ಕಣ್ಮುಂದೆ ಮಾಡುವ ನೋವು ಕ್ಷಣಿಕವಾಗಿ, ಆರೋಗ್ಯ ಮಾತ್ರ ಶಾಶ್ವತವಾಗಿ ಸಿಕ್ಕುತ್ತದೆ ಎಂಬ ಹಿನ್ನೆಲೆಯ ಕಾರಣದಿಂದೇನೋ ಕಣ್ಮುಚ್ಚಿ ಮೈ ಬಿಗಿದುಕೊಂಡು ಹೀರುವ ಸೂಜಿಗೆ ರಕ್ತ ನೀಡುತ್ತೇವೆ.
ಆದರೆ ನಾವು ತೆರೆದ ಕಣ್ಣೆನಿಂದ ಕಿಕ್ಕಿಸುತ್ತಿದ್ದರೂ ಜುರು ಜುರನೇ ನಮ್ಮ ಕಾಲುಗಳಲ್ಲಿನ ರಕ್ತ ಹೀರುವ ಜಿಗಣೆ ಮಾತ್ರ ಕಾಣುವುದೇ ಇಲ್ಲ.ಸ್ಪರ್ಶ ನೋವುಗಳಂತೂ ಅನುಭವಕ್ಕೆ ಬರುವುದಿಲ್ಲ.ಯಥೇಚ್ಛ ವಾಸಿಗಳೆನಿಸಿರುವ ಜಿಗಣೆಗಳು ನಮ್ಮ ಕಾಲುಗಳಿಗೆ ಎಲ್ಲೆಂದರಲ್ಲಿ ಜಿಗುಟಿಕೊಂಡು ರಕ್ತ ಕಾರಿಸುತ್ತಿದ್ದರೆ ಎಳ್ಳಷ್ಟು ಅರಿವೇ ಇರುವುದಿಲ್ಲ.
ಹೆಚ್ಚು ನೋವಿನ ಶಸ್ತ್ರ ಚಿಕಿತ್ಸೆಯಂತಹ ಸಂದರ್ಭಗಳೇನಾದರೂ ಇದ್ದರೆ ವೈದ್ಯರು ಸ್ಥಾನಿಕ ಅರವಳಿಕೆ ನೀಡುವಂತೆ ಈ ಜಿಗಣಗಳು ಕೂಡ ತಮ್ಮ ಕಾರಸ್ಥಾನ ಶೋಷಿತನ ಎಚ್ಚರಿಕೆಗೆ ಬಾರದಂತೆ ನೋಡಿಕೊಳ್ಳುತ್ತವೆ……ಜಿಗಣೆಗಳ ಜೊಲ್ಲಿನಲ್ಲಿ ಅರವಳಿಕೆ ರಾಸಾಯನಿಕವಿದ್ದು ಅದು ತನ್ನ ಕೃತ್ಯ ಕ್ಷೇತ್ರದ ಸುತ್ತಲೂ ದ್ರವ್ಯದ ಸ್ರವಿಕೆಯನ್ನು ಉಂಟುಮಾಡುತ್ತದೆ,ಮಾತ್ರವಲ್ಲದೆ ಸ್ರವಿಸಲ್ಪಡುವ ಪದಾರ್ಥ ರಕ್ತ ನಾಳಗಳನ್ನು ಹಿಗ್ಗಿಸಿ ಸರಾಗವಾಗಿ ರಕ್ತವು ನಾಳಗಳ ಮುಖಾಂತರ ಹರಿದಿಳೆಯುವಂತೆಯೂ ಮಾಡುತ್ತದೆ.ಇಷ್ಟ ಅಲ್ಲ, ಮತ್ತೊಂದು ಬಗೆಯ ರಸವು ಹೊರಬರುವ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ.
̲———————
ಶಿವಾನಂದ ಕಲ್ಯಾಣಿ
