“ಭೂ-ತಾಯಿ” ನಾಗರತ್ನ ಗಂಗಾವತಿ ಅವರ ಬರಹ

ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲುಎನ್ನುವ ಗಾದೆ ಮಾತಿನಂತೆ ತಾಯಿಯು ಉತ್ತಮ ದಿವ್ಯ ಶಕ್ತಿ ಇದ್ದಂತೆ. ಸಹನೆ ತಾಳ್ಮೆ ಇವಳ‌ ಗುಣವು ಇವಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ.

ಜಗತ್ತಿನಲ್ಲಿ ನಿಸ್ವಾರ್ಥ ಜೀವಿ ಎಂದರೆ ಅದು ತಾಯಿ ಮಾತ್ರ ಮಕ್ಕಳ ಲಾಲನೆ ಪಾಲಿಗೆ ಸಂಸಾರದ ಜವಾಬ್ದಾರಿ. ಅವಳಿಗೆ ಬದುಕೆಂಬ ಹಡಗಿನಲ್ಲಿ ಎಲ್ಲರನ್ನ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಮನಸ್ಸು ಅವಳದು ಯಾರಿಗೂ ನೋವು ಆಗದಂತೆ ಆಗಯ ಗುಣ ಹೊಂದಿದವಳು. ಅಷ್ಟೇ ಅಲ್ಲದೆ ಮಗುವಿನ ಬೆಳವಣಿಗೆಯ ಪ್ರತಿ ಹಂತದಲ್ಲೂ ತಾಯಿ ಉತ್ತಮವಾದ ಜವಾಬ್ದಾರಿಯೊಂದಿಗೆ ತನ್ನ ಕಾರ್ಯವನ್ನ ನಿರ್ವಹಿಸುತ್ತಾಳೆ.

ಮಕ್ಕಳಿಗೆ ಭರವಸೆಯ ಬೆಳಕಾಗಿ ಇರುವವಳು ಅಂದರೆ ಅದು ತಾಯಿ ಮಾತ್ರ. ಒಂದು ಊರಿನಲ್ಲಿ ಒಬ್ಬ ತಾಯಿ ತಾಯಿ ಇರುತ್ತಾರೆ ಅವಳು ಕೂಲಿ ಮಾಡಿ ಇಬ್ಬರು ಮಕ್ಕಳನ್ನು ಓದಿಸಿ ಅವರನ್ನು ಉತ್ತಮ ಹಂತಕ್ಕೆ ತಲುಪುವಂತೆ ಮಾಡುತ್ತಾಳೆ.ಮಕ್ಕಳು ಉತ್ತಮ ಹಂತದಲ್ಲಿ ಇದ್ದಾಗ ಹಿರಿಯರ ಕಡೆಗೆ ಗಮನ ಕೊಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಒಂದು ದಿವಸ ತಾಯಿ ಅನಾರೋಗ್ಯದಿಂದ ಬಳಲುತ್ತಾ ಇರುವ ಸಮಯದಲ್ಲಿ ಮಕ್ಕಳನ್ನು ನೆನೆದು ಕಂಬನಿ ಹಾಕುತ್ತಾಳೆ .ನನ್ನೊಂದಿಗೆ  ಮಾತನಾಡುವ ಒಬ್ಬರು ಕೂಡ ಜೊತೆಗೆ ಇಲ್ಲವಲ್ಲ ಎಂದು ಅವಳು ಸದಾ ನೋವು ಕಾಡುತ್ತಿರುತ್ತದೆ .ಆದರೂ ಸಮಾಧಾನದಿಂದ  ಬದುಕು ಸಾಗಿಸುತ್ತಾ ಇರುತ್ತಾಳೆ.

ತಂದೆ ತಾಯಿಗಳು ವಯಸ್ಸಾದ ಸಂದರ್ಭದಲ್ಲಿ ಚಿಕ್ಕ ಮಕ್ಕಳಂತೆ ಅವರನ್ನು ಮಕ್ಕಳಾದ ನಾವುಕೂಡ ಪಾಲನೆ ಮಾಡುವುದು ನಮ್ಮ ಜವಾಬ್ದಾರಿಯು ಅಷ್ಟೇ ಮುಖ್ಯ.ಹೋದ ಜೀವ ಮರಳಿ ಬರುವುದಿಲ್ಲ ಇರುವಾಗ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯ ಆಗಿರಬೇಕು.ಬದುಕಿರುವಾಗಲೇ ತಂದೆ ತಾಯಿಗಳ ಇಚ್ಛೆಯನ್ನು ಪೂರೈಸಲು ಖುಷಿ ಖುಷಿಯಿಂದ ಇರಲು ಮಕ್ಕಳಾದ ನಾವು ಅರಿಯಬೇಕು.

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎನ್ನುವಂತೆ ತಾಯಿ ಪ್ರೀತಿಯ ಮುಂದೆ ಮತ್ಯಾವ ಪ್ರೀತಿಯು ನಿಸ್ವಾರ್ಥವಾಗಿ ಸಿಗದು.ಯಾರೇ ನೋಯಿಸಿದರು ಆದರೆ ತಾಯಿ ಮಾತ್ರ ಮಕ್ಕಳ ಮನಸ್ಸನ್ನು ಅರಿತು ಅವರ ಇಚ್ಛೆಯಂತೆ ಅವಳು ಮಕ್ಕಳ ಬದುಕಿಗೆ ಆಧಾರವಾಗಿರುತ್ತಾಳೆ.ಹೆಣ್ಣು ಸಂಸಾರದ ಕಣ್ಣು ಎನ್ನುವಂತೆಸಂಸಾರದಲ್ಲಿ ಎಲ್ಲರಿಗೂ ಹೊಂದಿಕೊಂಡು. ಎಲ್ಲರನ್ನ ಪೋಷಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾಳೆ. ಅದೆಷ್ಟು ನೋವು ಮನಸ್ಸಿನಲ್ಲಿ ಇದ್ದರೂ ನಗುಮುಖದಿ  ನಡೆಯುತ್ತಾಳೆ.

ತಾಯಿಯು ಮಕ್ಕಳನ್ನು ಪ್ರತಿ ಕ್ಷಣದಲ್ಲೂ ಅರ್ಥೈಸಿಕೊಳ್ಳುವ ಬಹುದೊಡ್ಡ ಗುಣದವಳು.ಸಮಾಜದ ಬಹುದೊಡ್ಡ ದುರಂತ ಸಂಗತಿ ಎಂದರೆ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳು ಕಾರಣ ಕೆಲವರುತಂದೆ ತಾಯಿಯನ್ನು ಅರಿತುಕೊಂಡು ಜೊತೆಯಲ್ಲೇ ಇಟ್ಟುಕೊಂಡು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳದೆ ಇರುವುದು.
ನಮ್ಮನ್ನು ಸಾಕಿ ಸಲುಹಿ ಈ ಒಂದು ಹಂತಕ್ಕೆ ಬರುವಂತೆ ನೋಡಿಕೊಂಡ ತಂದೆ ತಾಯಿಗಳನ್ನು ಯಾವ ಮಕ್ಕಳು ಕೂಡ ನಿರ್ಲಕ್ಷಿಸದೆ ಜವಾಬ್ದಾರಿಯಿಂದ ಪ್ರೀತಿಯ ಮಾತುಗಳಿಂದ ಅವರನ್ನು ನೋಡಿಕೊಂಡರೆ ಭಗವಂತ ಮೆಚ್ಚಿ ನಮ್ಮ ಬದುಕನ್ನು ಬಂಗಾರವಾಗಿಸುತ್ತಾನೆ ಎಂಬುವುದರಲ್ಲಿ ಎರಡು ಮಾತಿಲ್ಲ ಕಂಡ ಕಂಡ ದೇವರಿಗೆ ಕೈ ಮುಗಿಯುವ ಬದಲು ಹೆತ್ತ ತಂದೆ ತಾಯಿಗಳನ್ನ ಗೌರವಿಸುವುದು ಬಹು ಮುಖ್ಯವಾಗಿದೆ.

ಎಲ್ಲರೂ ಹಾಗೆ ಇರುವುದಿಲ್ಲ ಆದರೆ ಕೆಲವರು ಇನ್ನೂ ಬದಲಾಗಬೇಕಿದೆ ಅವರ ಮನಗಳು ಏಕೆಂದರೆ ನಾವು ಈ ಭೂಮಿಗೆ ಬಂದ  ಮೊದಲ ದಿನವೇ ನೋಡುವುದೇ ತಾಯಿಯ ಮುಖವನ್ನು ಹಾಗೆ 9 ತಿಂಗಳು ಹೊತ್ತು  ಹೆತ್ತು ಪ್ರೀತಿಯಿಂದ ಸಾಕಿದವಳನ್ನು ಗೌರವಿಸುವುದು ಅತ್ಯಂತ ಬಹುಮುಖ್ಯ.ಮೊದಲು ತಂದೆ ತಾಯಿಗಳನ್ನು ಗೌರವಿಸಿ ಸುಂದರ ಸಮಾಜವನ್ನುನಿರ್ಮಿಸೋಣ.


Leave a Reply

Back To Top