ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಹೊಸ ಬಾಳ ಹೊಸ್ತಿಲಿನಲಿ


ಮೂಡುಗೆಂಪಿನಛಾಯೆ ಮೊಗದಲ್ಲಿ ಮೂಡಿರಲು
ಅರುಣರಾಗದಪ್ರಭೆಯುಪ್ರತಿಫಲಿಸಿನಗಲು
ನಾಚಿಹಳುತರಳೆತಾ ನೇಸರನಚುಂಬನಕೆ
ಮೊಗತಿರುವಿ ಚಂದದಲಿಹುಸಿನಗೆಯನೋಟಕೆ..
ಬಿಡಿಸಿದೆನಳಿಬೆರಳು ಎಸಳುರಂಗೋಲಿ
ಮನದಭಾವನೆಗಳ ನವಿರುಸ್ಪರ್ಷದಲಿ
ಧ್ಯಾನಿಸಿ ಹೃದಯವದು ಇನಿಯನೆಚ್ಚರದ ಉಲಿ
ಕಳೆದ ರಾತ್ರಿಯಸಂತಸದ ಅಮಲಿನಲಿ…
ಮಾಣಿಕ್ಯಗೆಂಪು ಸೀರೆ ಮೈ ಆವರಿಸಿ
ಕೆಂಪು ಬಳೆಗಳನಾದ ಕೈಲಿರಿಂಗಣಿಸಿ
ಹಣೆತಿಲಕ ಬೈತಲೆಯಸಿಂಧೂರ ಹೊಳೆದಿದೆ
ಮುಡಿದಮಲ್ಲಿಗೆವೇಣಿ ಸೌಗಂಧಬೀರಿದೆ…
ಒಲವಸೂಸಿವೆ ಎರಳೆಗಂಗಳು ಮಿನುಗಿ
ಕಂಪಿಸಿವೆ ಮೃದುಅಧರಗಳು ರಂಗೇರಿ
ಹೊಸ ಬಾಳ ಹೊಸತಿಲಲಿ ಮುಂಬೆಳಗು ಇಂದು
ಹರಸುತಿದೆ ನೆಮ್ಮದಿಯಭವಿಷ್ಯತ್ತಿಗೆಂದು..!
———————
ಹಮೀದಾಬೇಗಂ ದೇಸಾಯಿ.
ನಿಮ್ಮ ಕವಿತೆ *ಹೊಸಬಾಳ ಹೊಸ್ತಿಲಲಿ*
ಚೆನ್ನಾಗಿದೆ ಮೇಡಂ ಶುಭವಾಗಲಿ ವಂದನೆಗಳು ಮೇಡಂ
*ಶ್ರೀಮತಿ ಸಾವಿತ್ರಿ ಬಿ ಗೌಡ ಹಾಸನ*
ಸ್ಪಂದಿಸಿ, ಮೆಚ್ಚಿದ ತಮಗೆ ಧನ್ಯವಾದ ಮೇಡಂ..
ಹಮೀದಾಬೇಗಂ ದೇಸಾಯಿ.
ಹೊಸ ಬಾಳ ಹೊಸ್ತಿಲಿನಲಿ ಗರಿಗೆದರಿದ ಕನಸುಗಳ ಭಾವ ಸೊಗಸಾಗಿ ಮೂಡಿಬಂದಿದೆ.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದ ತಮಗೆ
ಹಮೀದಾಬೇಗಂ ದೇಸಾಯಿ.