: ಜಾರ್ಖಂಡ್ನಲ್ಲಿರುವ ಉಳಿದ ಸಾಮಾನ್ಯ ಯುವತಿಯರಂತೆಯೇ ನನ್ನ ಬದುಕು ಕೂಡ ಮುಗಿದು ಹೋಗುತ್ತದೆ ಎಂದು ನಾನು ಭಾವಿಸಿದ್ದೆ. ನಾನಿರುವ ಭಾಗದಲ್ಲಿ ಹೆಣ್ಣು ಮಕ್ಕಳ ಓದನ್ನು ಪ್ರೋತ್ಸಾಹಿಸುವುದಿಲ್ಲ… ನಮ್ಮಲ್ಲಿ ತಂದೆ ತಾಯಿಗಳು ಖುದ್ದಾಗಿ ಮಕ್ಕಳಿಗೆ ಶಾಲೆಯನ್ನು ತೊರೆಯುವಂತೆ ಒತ್ತಾಯಿಸುತ್ತಾರೆ . ಹೊಲ ಮನೆಯ ಕೆಲಸಗಳು ಮತ್ತು ಆಡು, ದನ, ಕುರಿಗಳನ್ನು ಕಾಯುವ ಕೆಲಸ ಮಾಡಲು ಒತ್ತಾಯಿಸುತ್ತಾರೆ. ಅವರಲ್ಲಿ ಇರುವ ತೀವ್ರ ಬಡತನ ಪಾಲಕರಲ್ಲಿ ಈ ಅನಿವಾರ್ಯತೆಯನ್ನು ಉಂಟುಮಾಡುತ್ತದೆ ಎಂಬುದು ನಿಜ ಕೂಡ. ಇಂತಹ ಪರಿಸ್ಥಿತಿಯಿಂದ ಆಕೆಯ ಪಾಲಕರು ಕೂಡ ಹೊರತಾಗಿರಲಿಲ್ಲ, ಆದರೂ ಕೂಡ ತನ್ನ ಜಾಣ್ಮೆಯಿಂದ ಆಕೆ ಹಾರ್ವರ್ಡ್ ಯೂನಿವರ್ಸಿಟಿಯ ಸಂಪೂರ್ಣ ಉಚಿತ ಶಿಕ್ಷಣದ ಸ್ಕಾಲರ್ಶಿಪ್ ಅನ್ನು ಪಡೆದಿದ್ದಾಳೆ. ಆಕೆಯೇ ನಮ್ಮ ಇಂದಿನ ಕಥಾನಾಯಕಿ ಸೀಮಾ ಕುಮಾರಿ.

ಸಾಮಾನ್ಯ ಬಾಲಕಿಯರಂತೆ ಆಕೆಯೂ ಕೂಡ ಶಾಲೆಗೆ ಹೋಗುತ್ತಿದ್ದಳು ಆಕೆಯ ಜೀವನದಲ್ಲಿ ಮಹತ್ವದ ತಿರುವು ಬಂದದ್ದು ಆಕೆ ಯುವ (ಯೂಥ್ ಫಾರ್ ಯುನಿಟಿ ಅಂಡ್ ವಾಲಂಟರಿ ಆಕ್ಷನ್) ಸೇರಿದ್ದು.
 ಸೌಲಭ್ಯ ವಂಚಿತ ಯುವ ಜನತೆಗೆ ತಮ್ಮ ಶೈಕ್ಷಣಿಕ ಹಕ್ಕನ್ನು ಸಾಧಿಸಿಕೊಳ್ಳಲು ಇರುವ ಅಭಿವೃದ್ಧಿ ಸಂಸ್ಥೆ  ಯಾದ ಯುವ ದಲ್ಲಿ ಫುಟ್ಬಾಲ್ ಮತ್ತು ಶಿಕ್ಷಣವನ್ನು ಜೊತೆಯಾಗಿ ಕಲಿಸುತ್ತಾರೆ.. ಯುವ ನಾಯಕಿಯಾಗಿ ಫುಟ್ಬಾಲ್ ತರಬೇತುದಾರಳಾಗಿ ಮತ್ತು ನಿರ್ವಾಹಕಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೀಮಾ ತನ್ನ ಕಲಿಕಾ ಕೌಶಲ್ಯಗಳನ್ನು ಬೆಳೆಸಿಕೊಂಡು ಮತ್ತಷ್ಟು ಹೆಚ್ಚಿನ ಸಾಧನೆಗಳ ಎತ್ತರ ಏರಲು ಆರಂಭಿಸಿದಾಗ ಆಕೆಯ ಭವಿಷ್ಯವೇ ಬದಲಾಯಿತು.

 ನಮ್ಮ ತಲೆ ಇರುವುದು ಕೇವಲ ಕೊಡವನ್ನು ಹೊರಲು ಅಲ್ಲ ಜವಾಬ್ದಾರಿಗಳನ್ನು ಹೊತ್ತು ಪೂರೈಸಲು, ನಮ್ಮ ಹೆಗಲು ಇರುವುದು ಒಬ್ಬರಿಗೊಬ್ಬರು ಸಂತೈಸಲು, ಒಬ್ಬರಿಗೊಬ್ಬರು ಹೆಗಲೆಣೆಯಾಗಿ ಸಾಗಲು ಮೊಣಕಾಲಿರುವುದು ನೋವನ್ನು ಅನುಭವಿಸಲು ಅಲ್ಲ ಫುಟ್ಬಾಲ್ ನ್ನು ಮೊಣ ಕಾಲಿನ ಮೇಲೆ ಪುಟಿಸಿ ಕಾಲಿನಿಂದ ಜೋರಾಗಿ ಒದೆಯಲು. ಎಂಬ ಮುಖ ಪುಸ್ತಕದ ಜಾಹೀರಾತು ಹೇಳುವುದು ಕೂಡ ಇದೇ ವಿಷಯವನ್ನು.

ಇದಕ್ಕೂ ಮುನ್ನ ನಾನು ಕನಸು ಕಾಣಲು ಕೂಡ ಹೆದರುತ್ತಿದ್ದೆ…’ ಯುವಾ’ಗೆ ಕಾಲಿಟ್ಟ ನಂತರ  ನನ್ನ ಅಗೋಚರ ಕನಸಿನ ಹಕ್ಕಿಗೆ ರೆಕ್ಕೆ ಬಂದಂತಾಯ್ತು.
ಪ್ರಸ್ತುತ ವರ್ಷ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರೈಸುವ ಸೀಮಾಳ ಪಯಣ ಉಳಿದೆಲ್ಲ ಯುವತಿಯರಿಗೆ ಮಾರ್ಗದರ್ಶಿಯಾಗುತ್ತದೆ. ನಮ್ಮ ಜೀವನವನ್ನು ನಾವು ಹೀಗೆಯೇ ಇರಬಹುದು ಎಂದು ಊಹಿಸಲು ಸಾಧ್ಯವಿಲ್ಲ…. ನಮ್ಮ ಬದುಕನ್ನು ಈಗಾಗಲೇ ನಮ್ಮ ಪಾಲಕರು ಮತ್ತು ನಮ್ಮ ಹಣೆ ಬರಹ ನಿರ್ಧರಿಸಿದೆ ಎಂದು ಹೆಣ್ಣು ಮಕ್ಕಳು ಭಾವಿಸಬೇಕಾಗಿಲ್ಲ ಅವಕಾಶಗಳು ದೊರೆತಾಗ ಅವುಗಳನ್ನು ಉಪಯೋಗಿಸಿಕೊಳ್ಳುವುದನ್ನು, ಬಳಸಿ ಬೆಳೆಯುವುದನ್ನು  ಕಲಿಯಲೇಬೇಕು ಎಂದು ನಾವು ಸೀಮಾ ಕುಮಾರಿಯ ಸೀಮಾಕುಮಾರಿಯ ಜೀವನದಿಂದ ಅರಿಯಬಹುದು.

 ಎಲ್ಲರಿಗೂ ಎಲ್ಲಾ ಸಮಯದಲ್ಲಿಯೂ ಅವಕಾಶ ಸಿಗುವುದಿಲ್ಲ ನಿಜ ಆದರೆ ಸಿಕ್ಕ ಅವಕಾಶವನ್ನು  ಸಮರ್ಥವಾಗಿ ಬಾಚಿ ಬಳಸಿಕೊಳ್ಳುವ ಮೂಲಕ  ಬದುಕಿನಲ್ಲಿ ಯಶಸ್ಸನ್ನು ಹೊಂದಬೇಕು.
 ಪ್ರಸ್ತುತ ವರ್ಷದ ಮಹಿಳಾ ದಿನಾಚರಣೆಯ ಘೋಷ ವಾಕ್ಯ ‘ಸೀಜ ದ ಆಪರ್ಚುನಿಟಿ’  ಹೇಳುವುದು ಕೂಡ ಇದನ್ನೇ.
 ಇಂದು ಮಹಿಳೆಯರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಔದ್ಯೋಗಿಕವಾಗಿ  ಎಲ್ಲ ರಂಗಗಳಲ್ಲಿಯೂ ವಿಪುಲ ಅವಕಾಶಗಳಿವೆ. ಪ್ರಪಂಚದ 300ಕ್ಕೂ ಹೆಚ್ಚು ಬಹು ರಾಷ್ಟ್ರೀಯ ಕಂಪನಿಗಳಲ್ಲಿ 30% ಕಾರ್ಯ ನಿರ್ವಾಹಕ ಅಧಿಕಾರಿಗಳು ಹೆಣ್ಣು ಮಕ್ಕಳು, 19% ನಷ್ಟು ಹೆಣ್ಣು ಮಕ್ಕಳು ವಿವಿಧ ಕಂಪನಿಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕಿಯರಾಗಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ,ಉದ್ಯಮದಲ್ಲಿ, ಗೃಹ ಉದ್ಯಮಗಳಲ್ಲಿ, ಶಾಲೆ ಕಾಲೇಜುಗಳಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ರಂಗದಲ್ಲಿ ಮಹಿಳಾ ವೈದ್ಯರಿಗೆ ಇರುವಷ್ಟು ಅವಕಾಶಗಳು ಬೇರೆ ಯಾರಿಗೂ ಇಲ್ಲ, ಆದರೆ ಎಷ್ಟೋ ಜನರಿಗೆ ತಮಗೆ ಇರುವ ಅವಕಾಶಗಳ ಅರಿವು ಇಲ್ಲ.

 ಗಂಡು ಮಕ್ಕಳಿಗೆ ಸರಿ ಸಮಾನವಾಗಿ ಹೆಣ್ಣು ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಅವರ ಮಾನಸಿಕ ದೈಹಿಕ ಮತ್ತು
 ಭಾವನಾತ್ಮಕ ಬೆಳವಣಿಗೆ ಅತ್ಯಂತ ಮುಖ್ಯವಾದದ್ದು. ಛಲ ಮತ್ತು ಶ್ರದ್ಧೆ ನಮ್ಮಲ್ಲಿದ್ದರೆ ನಾವು ಕೂಡ ಒಂದು ದಿನ ಸೀಮಾ ಕುಮಾರಿಯಂತೆ ಆಗಲು ಸಾಧ್ಯ ಎಂದು ನಮ್ಮ ಯುವಜನತೆ ಅರಿತುಕೊಳ್ಳಬೇಕು.
 ಏನಂತೀರಾ ಸ್ನೇಹಿತರೆ?


Leave a Reply

Back To Top