ಕಾವ್ಯ ಸಂಗಾತಿ
ನಿಶ್ಚಿತ.ಎಸ್ (S.N)
ಭಾರವಾಗಿದೆ ಮನಸು

ಭಾವಯಾನದ ಈ ಜೀವನವು…
ಭಾವಲೋಕದ ಸುಜೀನವು…
ಭಾವಿಸಲಾಗದೆ ಈ ಹೃದಯವು…
ಆವರಿಸಿದೆ ಮಾತಿಗೆ ಮೌನವು…
ಯಾಕೋ ಭಾರವಾಗಿದೆ ಮನಸು?
ಬದಲಾಗಿದೆ ನೋವು-ನಲಿವು…
ಕಾದುಕೂತಿದೆ ನವ ಜೀವನವು…
ಅನುಸರಿಸಬೇಕು ಅದ ಮನವು…
ಕಾಡುತಿದೆ ನೂರು ಭಯವು…
ಯಾಕೋ ಭಾರವಾಗಿದೆ ಮನಸು?
ಪಯಣದಿ ಅಡಗಿದೆ ಒಲವು…
ಆದರೂ ಇದೆ ಕೊಂಚ ಭಯವು…
ಸಾಗಲಿದೆ ಹೊಸ ಭಾವವು…
ಕಾಣುತಲಿ ನವ ಉದ್ಯೋಗವು…
ಯಾಕೋ ಭಾರವಾಗಿದೆ ಮನಸು?
ಸಾಗಲಿದೆ ಸಂಸಾರದ ರಥವು…
ಮೂಡಬೇಕು ಇಬ್ಬರಲ್ಲೂ ಅರಿವು..
ರಥಕ್ಕೆ ಮುಖ್ಯ ಎರಡು ಚಕ್ರವೂ…
ಆಗ ಸರಾಗ ಜೀವನವು…
ಯಾಕೋ ಭಾರವಾಗಿದೆ ಮನಸು?
ಭಾರವಾದರೂ ಈ ಮನಸ್ಸು… ಹಗುರ ಮಾಡುವರು ನೀಡಿ ಒಲವನು…
ಅವರಿರಲು ಇನ್ನಿಲ್ಲ ಯಾವ ಭಯವೂ…
ನಡೆಯುತ್ತಿರುವೆ ನಂಬಿಕೆಯ ಹಾದಿಯಲ್ಲಿ…
ಕೈ ಹಿಡಿದು ನಡೆಸಿ ನನ್ನ ಜೊತೆಯಲ್ಲಿ…

ನಿಶ್ಚಿತ.ಎಸ್ (S.N)
——————————-