ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುರುವಿನ ಕರುಣದಿಂದ ಲಿಂಗವ ಕಂಡೆ ಜಂಗಮನ ಕಂಡೆ
 ಗುರುವಿನ ಕರುಣದಿಂದ ಪಾದೋದಕವ ಕಂಡೆ ಪ್ರಸಾದವ ಕಂಡೆ
 ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ *ಕಂಡೆ
 ಚೆನ್ನಮಲ್ಲಿಕಾರ್ಜುನಯ್ಯ
 ನಾ ಹುಟ್ಟಲೊಡನೆ ಶ್ರೀಗುರು ವಿಭೂತಿಯ ಪಟ್ಟವ ಕಟ್ಟಿ
 ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು.

ಅಕ್ಕಮಹಾದೇವಿಯವರು ಈ ಒಂದು ವಚನದಲ್ಲಿ ಅಷ್ಟಾವರಣದ  ಬಗ್ಗೆ  ಹೇಳಿದ್ದು ಕಂಡು ಬರುತ್ತದೆ
ಒಬ್ಬ ವ್ಯಕ್ತಿಯ ಬದುಕು ಪವಿತ್ರವಾಗಬೇಕಾದರೆ ಆಂತರಿಕ ಹಾಗೂ ಬಾಹ್ಯ ಮನಗಳೆರಡೂ ಪವಿತ್ರ ಹಾಗೂ ಶುದ್ಧವಾಗಿದ್ದು ನಿರ್ಮಲ ಭಾವ ಪವಿತ್ರವಾದ ಭಕ್ತಿಯಿಂದ ತಾನೇ ದೇವರಾಗುವ ಬಗೆಯನ್ನು ನಾವು ಶರಣರಲ್ಲಿ ಕಾಣಬಹುದು .ಅದನ್ನೇ ಅಕ್ಕಮಹಾದೇವಿಯವರು

ಗುರು
ಲಿಂಗ
ಜಂಗಮ
ಪಾದೋದಕ
ಪ್ರಸಾದವನ್ನು ನಾನು
ಸಜ್ಜನ ಸದ್ಭಕ್ತರ ಒಳ್ಳೆಯ ಗೋಷ್ಠಿಯಿಂದ ಕಂಡೆ ಎನ್ನುವರು .

ನಮಗೆ ನಿಮಗೆ ಗೊತ್ತಿರುವ ಹಾಗೆ
ಗುರುವಿನ ಮಹತ್ವತೆ ಎಲ್ಲರಿಗೂ ಗೊತ್ತು
ಇಲ್ಲಿ ಗುರು ಎಂದರೆ ಅರಿವು ಜ್ಞಾನ ಎಂದರ್ಥ.

ಗುರು ಎಂದರೆ ದೊಡ್ಡದು ಎನ್ನುವ ಅರ್ಥವನ್ನೂ ಕಾಣಬಹುದು .
ಗುರು ನಮಗೆ ಜ್ಞಾನವನ್ನು ಹಾಗೂ ದೀಕ್ಷೆಯನ್ನು ನೀಡುವವ. ಈ ಅರಿವನ್ನು ನಾವು ಮನನ ಮಾಡಿಕೊಳ್ಳದಿದ್ದರೆ , ಗುರು ಹಾಗೂ ಶಿಷ್ಯರಿಬ್ಬರೂ ಭ್ರಷ್ಟರಾಗುತ್ತಾರೆ.
ನನ್ನರಿವಿನ ಜ್ಞಾನಿ ನೀನು ಚೆನ್ನಮಲ್ಲಿಕಾರ್ಜುನಾ ನಿನ್ನಿಂದಲೇ ನನಗೆ ಅರಿವಾಗಿ ಲಿಂಗವನ್ನು ಕಂಡೆ .

 ಗುರುವಿನ ಕರುಣದಿಂದ ಲಿಂಗವ ಕಂಡೆ ಜಂಗಮವ ಕಂಡೆ

ಗುರುವನ್ನು ತನ್ನ ಅರಿವಿಗೆ ಸಮೀಕರಿಸಿ ಹೇಳುವ ಅಕ್ಕಳು  ಚೆನ್ನಮಲ್ಲಿಕಾರ್ಜುನನೇ  ಲಿಂಗವಾಗಿ ಭಾವಿಸಿ , ಶರಣ ಸತಿ ಲಿಂಗ ಪತಿ ಎನ್ನುವ ಭಕ್ತಿಯ ಮಹಿಮೆಯನ್ನು ಕೊಂಡಾಡುವ ಅಕ್ಕ .ಚೆನ್ನಮಲ್ಲಿಕಾರ್ಜುನಾ ನಿನ್ನಿಂದಲೇ ಜಂಗಮವ ಕಂಡೆ ಎನ್ನುವರು
ಅರಿವೇ ಜಂಗಮವೆಂದು ತೋರಿಸುವವನು ಗುರು .ಅಂಗಕ್ಕೆ ಲಿಂಗ ಕೊಡುವವ’ಮನಕ್ಕೆ ಅರಿವನ್ನು ಮೂಡಿಸುವವ

‘ಕಾಯದ ಕರ್ಮ ಕಳೆದು ಅಕಾಯ ಚರಿತ ಜೀವನ ಭವವನ್ನು ಕಳೆಯುವುದು .
ಇಲ್ಲಿ ಶರಣರೆಂದರೆ ಲಿಂಗ ‘
ಲಿಂಗ ವೆಂದರೆ ಶರಣ .

ಉತ್ತಮ ನಡೆ _ನುಡಿ  ಜ್ಞಾನ ಕ್ರಿಯೆಯ ಮಾರ್ಗ ‘ಆಚಾರ _ವಿಚಾರ ವನ್ನು ತನ್ನಲ್ಲಿ ಮೈಗೂಡಿಸಿಕೊಂಡು ಚೈತನ್ಯ ಸ್ವರೂಪವಾದ ಆಧ್ಯಾತ್ಮಿಕತೆಯ ಸನ್ಮಾರ್ಗವನ್ನು ಕರುಣಿಸುವವನೇ ಗುರು .ಇಂಥಹ ಕರುಣಾ ಮಯಿ ಎನ್ನ ಚನ್ನಮಲ್ಲಿಕಾರ್ಜುನಾ ನೀನೇ ನನಗೆ ಚೈತನ್ಯ ಸ್ವರೂಪ ನೀನೇ ನನಗೆ ಮಾರ್ಗಿ ‘ ನೀನೇ ನನಗೆ ಶಕ್ತಿ ಯುಕ್ತಿ ಎಲ್ಲವೂ ಆಗಿ ನಿಲ್ಲುವ ಜಂಗಮ ಸ್ವರೂಪಿ ಲಿಂಗವೇ ನೀನು.ಪರಬ್ರಹ್ಮ ಸ್ವರೂಪಿಯೇ ನೀನು .

ಇಲ್ಲಿ ಜಂಗಮನು ಜ್ಞಾನದ ಪ್ರತೀಕ .
ಗುರುವಿನಿಂದ ಲಿಂಗ ‘ಲಿಂಗದಿಂದ ಜಂಗಮ.ಜಂಗಮವು ವಿಶ್ವ ಚೈತನ್ಯ ‘ ಅದರ ಶುದ್ಧಭಾವದಿಂದಲೇ ಮನುಷ್ಯನ ಮನದಲ್ಲಿ ಪ್ರಸಾದವು ಸಿದ್ದಿಸುವುದು .

 ಗುರುವಿನ ಕರುಣದಿಂದ ಪಾದೋದಕವ ಕಂಡೆ ಪ್ರಸಾದವ ಕಂಡೆ

ಅರಿವಿನ ಜ್ಞಾನದ ಸಂಕೇತವಾದ ಲಿಂಗವು ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿ ಇದ್ದ ಹಾಗೆ .ಆದ್ದರಿಂದ ಇಲ್ಲಿಇಲ್ಲಿ ಪ್ರಸಾದವೆಂದರೆ ಲಿಂಗದಿಂದ ಬಂದ ಪ್ರಸಾದ ಅಂದರೆ ಪರಮಾತ್ಮ. ಗುರು’ ಲಿಂಗ’ ಜಂಗಮ ದಿಂದಲೇ ಪ್ರಸಾದವ ಕಂಡೆ ಎನ್ನುವರು .ಗುರುಪ್ರಸಾದ ಲಿಂಗ ಪ್ರಸಾದ ಜಂಗಮ ಪ್ರಸಾದಗಳನ್ನು ಅನುಭವಿಸುತ್ತಾ ಬಾಹ್ಯ ದಲ್ಲಿ ಭಕ್ತನಾಗಿ ಆಂತರಿಕವಾಗಿ ತನು ಮನ ಭಾವ ದಿಂದ ಸಮರಸಗೊಳಿಸಿಕೊಳ್ಳುವ ವಿಧಾನ.

 ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ

ನನ್ನ ಗುರು ಚೆನ್ನಮಲ್ಲಿಕಾರ್ಜುನನ ದಯೆಯಿಂದ ಒಳ್ಳೆಯ ಸದ್ಭಕ್ತರ ಒಳ್ಳೆಯ ಗೋಷ್ಠಿಯನ್ನು ಕಂಡು ಸುಖಿ ಆದೆ ಪರಮಾತ್ಮ.

ಹೇ ಚೆನ್ನಮಲ್ಲಿಕಾರ್ಜುನಾ ನಾನು ಹುಟ್ಟಿದ ಮೇಲೆಯೇ ನನಗೆ
 ಶ್ರೀಗುರುವಿನ ಪಟ್ಟವಾದ ವಿಭೂತಿ ಯ ಪಟ್ಟ ಕಟ್ಟಿ ಕೊಂಡು ಲಿಂಗವನ್ನು ಆಯತ ಸ್ವಾಯತ ಹಾಗೂ ಸನ್ನಹಿತ ಮಾಡಿಕೊಂಡು ಧನ್ಯವಾದೆ ಮಹಾತ್ಮ .


About The Author

Leave a Reply

You cannot copy content of this page

Scroll to Top