ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಬದುಕು

ಹೊಂದಾಣಿಕೆಯಿಂದ ನಡೆಸುವುದು
ಸಂಸಾರದ ಎರಡು ಕಣ್ಣೆನ್ನುವುದು
ಗಂಡ ಹೆಂಡತಿ ಕೂಡಿ ಬಾಳುವುದು
ಬದುಕಿನ ನೊಗ ಎಳೆವುದು
ಹೇಗೆ ಬರುವುದೋ ಹಾಗೆ ಸ್ವೀಕರಿಸಿ
ಪಾಲಿಗೆ ಬಂದದ್ದು ಪಂಚಾಮೃತ ಎನಿಸಿ
ದೇವರು ನೀಡಿದ್ದು ಇದೇ ಎಂದು ಸಮಾಲೋಚಿಸಿ
ಬಾಳುವುದೇ ಒಂದು ಕಲೆಯೆಂದು ತಿಳಿಸಿ
ಬದುಕು ಜಟಕಾ ಬಂಡಿಯು
ವಿಧಿ ಅದರ ಸಾಹೇಬಅನ್ನೋ ನುಡಿಯು
ಕವಿ ಮನದಲ್ಲಿ ಹೊರ ಬಂದ ಕಲೆಯು
ನುಡಿದಂತೆ ನಡೆದಿರುವುದೇ ಉದಾಹರಣೆಯು
ಈಗೆಲ್ಲ ಸರಿ ಸಮಾನದ ಜೀವನ ವಿರಬೇಕು
ಗಂಡು ಹೆಣ್ಣು ಇಬ್ಬರೂ ದುಡಿಯಲೇ ಬೇಕು
ಆಗಲೇ ತೊತ್ತಿನ ಚೀಲ ತುಂಬುವುದು ಗೊತ್ತಿರಬೇಕು
ಇದೇ ಅನುಭವದ ಮೂಸೆಯಿಂದ ಬಂದಿರುವ ಮಾತು ಎನಬೇಕು

ಡಾ. ಲೀಲಾ ಗುರುರಾಜ್, ಮಳೆಬಿಲ್ಲು
ಡಾ. ಲೀಲಾ ಗುರುರಾಜ್, ಮಳೆಬಿಲ್ಲು