ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು

ಸ್ವಚ್ಛಂದ ಗಾಳಿ ಹಚ್ಚಹಸಿರಿನ ಪರಿಸರ
ಜುಳುಜುಳು ಹರಿಯುವ ನದಿದಡದಲಿ
ದಟ್ಟಾಗಿ ಬೆಳೆದ ಗಿಡದಲಿ
ಗುಬ್ಬಿ ಹುಡುಕುವ ಗೂಡು
ಕಾಣದೇ ತಡವರಿಸಿ ಕೂಗಿಕರೆಯುತಿದೆ

ಲೌಕಿಕ ಸುಖಸಂಪತ್ತಿಗೆ
ಮಹಡಿ ಅಂತಸ್ತಿನ ಮನೆಗಳು
ಮೊಜುಮಸ್ತಿಗೆ ಕಾರು ಮೋಟಾರುಗಳು
ಫೋನ್ ಕರೆಗಾಗಿ ಟಾವರಗಳ ಹಾವಳಿಗಳು
ಹೆದರಿ ಬೆದರಿ ಗುಬ್ಬಿ ಹುಡುಕುತಿದೆ ಗೂಡು

ಗೂಡು ಅಲ್ಲ ಅದು ಭೌತಿಕದಬಲೆ
ಅದರಲ್ಲಿದೆ ಆದ್ಯಾತ್ಮಕತೆ ಸೆಲೆ
ಕಟ್ಟಬೇಕಿದೆ ಗೂಡನು ಅಸ್ಮಿತೆ ನಾಡಲಿ
ಬದುಕಬೇಕಿತೆ ಶರಣತತ್ವದ ಗೂಡಲಿ
ಕಟ್ಟೋಣ ಬನ್ನಿ ಗುಬ್ಬಿ ಹುಡುಕುವ ಗೂಡನು


2 thoughts on “ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು

  1. ಅತ್ಯಂತ ಭಾವನಾತ್ಮಕವಾದ ಕವಿತೆ ಮೇಡಂ ಧನ್ಯವಾದಗಳು

Leave a Reply

Back To Top