ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮೊಳಗಿನ
ಬಸವಪ್ರಜ್ಞೆಗೆ
ಏನಾಗಿದೆ..?

“ನಹಿ ಜ್ಞಾನೇನ ಸದೃಶಂ..”
“ಜ್ಞಾನವಂತ ಎಲ್ಲೆಡೆಯೂ ಪೂಜಿಸಲ್ಪಡುತ್ತಾನೆ..”
“…ವಿದ್ಯೆ ಇಲ್ಲದವನು ಮುಖವು ಹಾಳೂರು ಹದ್ದಿನಂತಿಕ್ಕು” – ಸರ್ವಜ್ಞ
ಒಂದು ಕಾಲದಲ್ಲಿ ಜ್ಞಾನಿಗಳು, ಕಲಾವಿದರು, ಕವಿಗಳು, ಸಾಹಿತಿಗಳು.. ಹೀಗೆ ಸೃಜನಶೀಲ ಮತ್ತು ಸೃಜನೇತರ ವ್ಯಕ್ತಿಗಳನ್ನು ಸಮಾಜವು ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಿತ್ತು. ಅವರ ಕೃತಿಗಳನ್ನು ಓದುವುದು. ಅವರ ಹಾಡುಗಳನ್ನು ಕೇಳುವುದು. ನೃತ್ಯವನ್ನು ವೀಕ್ಷಿಸುವುದು ಸರ್ವೇಸಾಮಾನ್ಯವಾಗಿತ್ತು. ಅವರ ಜ್ಞಾನದ ಪ್ರತಿಯೊಂದು ಕಣಕಣಗಳು ಸಮಾಜದಲ್ಲಿ ಪ್ರತಿಯೊಬ್ಬರು ಸ್ವೀಕರಿಸುತ್ತಿದ್ದರು ಮತ್ತು ಅವರ ಅನುಭವದ ಮೂಸೆಯಿಂದ ಬಂದ ಕೃತಿಗಳನ್ನು ಯಾವುದೇ ರೀತಿಯ ಪೂರ್ವ,ನಿರ್ಧಾರವಿಲ್ಲದೆ ಕೊಂಡು ಓದುತ್ತಿದ್ದರು.
ಆದರೆ.. ಇಂದು ಏನಾಗಿದೆ..? ಪ್ರತಿಯೊಂದು ಕೂಡ ಅಡ್ಡಗೋಡೆಗಳಿಂದ ನೋಡುವ ದೃಷ್ಟಿಕೋನ ಬಂದಿದೆ. ಸಾಹಿತ್ಯ ಅದರಲ್ಲಿಯೂ ಕೂಡ ಸೃಜನಶೀಲ ವಲಯದಲ್ಲಿಯೂ ಕೂಡ ಧರ್ಮ, ಜಾತಿಗಳೇ ಪ್ರಧಾನ ಸ್ಥಾನವಹಿಸಿ ವಿಜೃಂಭಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ..! ಒಂದು ಆರೋಗ್ಯಕರ ಸಮಾಜವೆಂದರೆ ಸಣ್ಣ ಸಣ್ಣ ಜಾತಿ, ಸಮುದಾಯಗಳಿಂದ ಹಿಡಿದು ಪ್ರತಿಯೊಂದು ಎಲ್ಲಾ ಸಮುದಾಯದ ವ್ಯಕ್ತಿಗಳನ್ನು ಅವರ ಜಾತಿಯ ಹಿನ್ನೆಲೆಯಿಂದ ಗುರುತಿಸಬಾರದು. ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳಿಂದ ಗುರುತಿಸಬೇಕು. ಅವರ ಜ್ಞಾನ, ಕಲೆಗಳಿಗೆ ಯಾವ ಅಡ್ಡಗೋಡೆಗಳನ್ನು ಪರಿಗಣಿಸಬಾರದು. ಇವತ್ತು ಪ್ರತಿಯೊಂದು ರಂಗದಲ್ಲಿಯೂ ಕೂಡ ಧರ್ಮವನ್ನು ನೋಡುತ್ತೇವೆ, ಜಾತಿಯನ್ನು ಪರಿಗಣಿಸುತ್ತೇವೆ.
ನಿಜ, ಪ್ರತಿಯೊಬ್ಬರಲ್ಲಿಯೂ ಜಾತಿ ಪ್ರಜ್ಞೆಯಿರುತ್ತದೆ. ಆದರೆ ಅದಕ್ಕೊಂದು ಚೌಕಟ್ಟಿರುತ್ತದೆ. ಜಾತಿ ಪ್ರಜ್ಞೆ ಕೇವಲ ಮನೆಯೊಳಗಿದ್ದರೆ ಮಾತ್ರ ಅದು ಒಳಿತು. ಜಾತಿ ಪ್ರಜ್ಞೆಯು ಸಾಮೂದಾಯಿಕ ಪ್ರಜ್ಞೆಯಾಗಬಾರದು. ಅದರಲ್ಲೂ ವಿಶೇಷವಾಗಿ ಸಾಹಿತ್ಯದಂತಹ ರಂಗದಲ್ಲಿ ಜಾತಿಯು ಸುಳಿದು ಬಹಳ ದಿನಗಳಾದವು. “ಜ್ಞಾನಕ್ಕೆ ಜಾತಿ ಇಲ್ಲ..” ಎನ್ನುವ ಮಾತು ನಾವೆಲ್ಲ ಮರೆತುಬಿಟ್ಟಿದ್ದೇವೆ. ಜಾತಿ, ಧರ್ಮ, ಭಾಷೆ, ದೇಶ ಎಲ್ಲಾ ಗಡಿಗಳನ್ನು ಮೀರಿದ್ದು ಜ್ಞಾನ..! ಹಾಗಾಗಿ ಜ್ಞಾನವನ್ನು ಪಡೆದುಕೊಂಡ ವ್ಯಕ್ತಿ ಎಲ್ಲಾ ಕಾಲಘಟ್ಟದಲ್ಲಿಯೂ ಪೂಜಿಸಲ್ಪಡುತ್ತಾನೆ. ಪಂಪನಂತಹ ಬಹು ದೊಡ್ಡ ಕವಿ, ವಿದ್ವಾಂಸ ಆತನ ಮೊದಲ ನುಡಿಯೇ, “ಮಾನವ ಕುಲಂ ತಾನೊಂದೇ ವಲಂ” ಎನ್ನುವ ಬಹುದೊಡ್ಡ ಜೀವವಿಮಾಂಸೆಯ ಮಾನವ ಪ್ರಜ್ಞೆಯನ್ನು ಬಹು ಎಚ್ಚರಿಕೆಯಿಂದ ಬಿಟ್ಟು ಹೋಗಿದ್ದಾರೆ.
ಆದರೆ ಇವತ್ತು ಏನಾಗಿದೆ..? ನನಗೆ ಸಭೆ ಸಮಾರಂಭಗಳಲ್ಲಿ ಮುಖ್ಯ ಅತಿಥಿ ಮಾಡಲಿಲ್ಲ. ಕವಿಗೋಷ್ಠಿಗೆ ಪರಿಗಣಿಸಲಿಲ್ಲ. ನನ್ನ ಪುಸ್ತಕವನ್ನು ಪ್ರಕಟಿಸಲಿಲ್ಲ. ನನ್ನ ಸಾಧನೆಗಳನ್ನು ಗುರುತಿಸಲಿಲ್ಲ ..ಎನ್ನುತ್ತಲೇ ಯಾವತ್ತೋ ನಮ್ಮ ವ್ಯಕ್ತಿತ್ವವನ್ನು ಅಡ್ಡಗೋಡೆಗೆ ಹಾಕಿಕೊಂಡುಬಿಟ್ಟಿದ್ದೇವೆ..! ಆಗ ನಾವು ಇನ್ನೂ ಸಣ್ಣವರಾಗುತ್ತೇವೆ. ಸೃಜನಶೀಲ ವ್ಯಕ್ತಿಯಾದವನು ಹುದ್ದೆ, ಅವಕಾಶ ಎಲ್ಲವನ್ನು ಮೀರಿ ಜ್ಞಾನದಿಂದಲೇ ಬೆಳೆಯಬೇಕು ಅಂದಾಗ ಮಾತ್ರ ಜ್ಞಾನ ಪೂಜಿಸಲ್ಪಡುತ್ತದೆ.
ನಮ್ಮ ಎಚ್ಚರಿಕೆಯನ್ನು ನಾವು ತಪ್ಪಿದರೆ, ಪ್ರಜ್ಞೆಯಿಲ್ಲವಾದರೆ, ಮುಂದೆ ನಮ್ಮನ್ನು ಅತ್ಯಂತ ಪ್ರೀತಿಯಿಂದ ಹೊಗಳುತ್ತಲೇ ಬೆನ್ನಹಿಂದೆ ನಮಗೆ ಕುಟುಕುತ್ತಾರೆ. ಬೈಯ್ಯುತ್ತಾರೆ. ತಿರಸ್ಕರಿಸುತ್ತಾರೆ. ಜೀವಂತವಿದ್ದಾಗಲೇ ತಿರಸ್ಕೃತಗೊಂಡ ವ್ಯಕ್ತಿ ಇನ್ನು ಮುಂದಿನ ದಿನಗಳಲ್ಲಿ ಹೇಗೆ ತಾನೇ ಜ್ಞಾನದಿಂದ ಪೂಜಿಸಲ್ಪಡುತ್ತಾನೆ…? ಆ ಪ್ರಜ್ಞೆ ನಮ್ಮೊಳಗೆ ಸದಾವಿರಬೇಕು. ಯಾವತ್ತು ನಮ್ಮೊಳಗೆ ಅಂತ:ಶಕ್ತಿಯ ಪ್ರಜ್ಞೆ ಕುಂದುತ್ತಾ ಹೋಗುತ್ತದೆಯೋ ಕಳೆದುಕೊಳ್ಳುತ್ತೇವೆಯೋ ಆಗ ನಮ್ಮನ್ನು ಯಾರೂ ನಾಶ ಮಾಡಲಾರರು ನಮ್ಮನ್ನು ನಾವೇ ನಾಶ ಮಾಡಿಕೊಳ್ಳುತ್ತೇವೆ..!
ಹಾಗಂತ ಅವಕಾಶ ಸಿಕ್ಕಾಗ ಭಾಗವಹಿಸಬಾರದು ಎನ್ನುವ ಮಾತಾಗಲಿ, ಅವಕಾಶವನ್ನು ಕೇಳುವುದು ತಪ್ಪು ಎಂದಾಗಲಿ ನಾನು ಹೇಳುತ್ತಿಲ್ಲ. ಸಿಕ್ಕ ಅವಕಾಶವನ್ನು ಅಥವಾ ಸೃಷ್ಟಿಸಿಕೊಂಡ ಅವಕಾಶವನ್ನು ಅತ್ಯಂತ ಅಚ್ಚುಕಟ್ಟಾಗಿ ಅದನ್ನು ನಿರ್ವಹಿಸಿ, ಸಮಾಜಕ್ಕೆ ನಮ್ಮದೆಯಾದ ಕೊಡುಗೆಯನ್ನು ನೀಡಿದ್ದೆಯಾದರೆ ಸಮಾಜ ನಮ್ಮನ್ನು ಗುರುತಿಸುತ್ತದೆ. “ನನ್ನನ್ನು ಗುರುತಿಸಿಲ್ಲವಲ್ಲ” ಎನ್ನುವ ಒಂದೇ ಒಂದು ಕಾರಣಕ್ಕೆ ಹಠಮಾರಿತನ ಧೋರಣೆಯಿಂದ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಳ್ಳುವ ಧಾಷ್ಟ್ಯತನ ಒಳ್ಳೆಯದಲ್ಲ. “ನಾನು ಪ್ರಬಲನಾಗಿದ್ದೇನೆ.” ಎನ್ನುವ ಅಹಂಕಾರ ಅದು ಬಹಳ ದಿನ ಉಳಿಯುವದಿಲ್ಲ. ಹಾಗಾದರೆ ಧಾಷ್ಟ್ಯದಿಂದ ಬಲಿಷ್ಠಗೊಂಡ ವ್ಯಕ್ತಿ ಬೆಳೆಯುತ್ತಲೇ ಹೋದರೆ ಜ್ಞಾನವನ್ನು ಹೊಂದಿರುವ ಕವಿಗಳು, ಬುದ್ದಿವಂತರು, ಸಂಕೋಚದ ಸ್ವಭಾವದ ಪ್ರತಿಭಾನ್ವಿತರು ಬೆಳೆಯುವದಾದರೂ ಹೇಗೆ…? ಅವರಿಗೆ ಅವಕಾಶ ಸಿಗುವುದಾದರೂ ಯಾವಾಗ..?
“ಕಿತ್ತುಕೊಳ್ಳುವುದಕ್ಕಿಂತ ಕೊಟ್ಟು ನೋಡು ಅದು ತುಂಬಾ ಶ್ರೇಷ್ಠವಾದದ್ದು” ಎನ್ನುವ ಹಿರಿಯರ ಮಾತು. “ನೀನು ಕೊಟ್ಟಷ್ಟು ಪಡೆದುಕೊಳ್ಳುತ್ತೀಯ” ಎನ್ನುವ ಬಹು ದೊಡ್ಡ ಫಿಲಾಸಫಿ ಬೇರೆಯವರಿಗೆ ಹೇಳುವುದಕ್ಕಿಂತ ನಾವೇ ಅನುಸರಿಸಬೇಕು. ಇಂತಹ ವಿಶಾಲವಾದ ಮನೋಭಾವ ಇಂದಿನ ಹಿರಿಯರಲ್ಲಿ ಬಹುತೇಕ ಎಲ್ಲಾ ಸಂದರ್ಭಗಳಲ್ಲಿಯೂ ಇರುತ್ತಿತ್ತು. ವ್ಯಕ್ತಿಯ ವ್ಯಕ್ತಿತ್ವದಿಂದಾದ ಜ್ಞಾನ ಪರಿಗಣಿಸುತ್ತಿದ್ದರು. ಇವತ್ತು ಅದರಿಂದ ಹೊರತಾಗಿದ್ದೇವೆ ಎನ್ನುವುದನ್ನು ನೆನಪಿಸಿಕೊಂಡರೆ ವಿಷಾದವಾಗುತ್ತದೆ. ಎಲ್ಲವನ್ನು ಅಡ್ಡಗೋಡೆಗಳನ್ನು ಕಟ್ಟುತ್ತಾ ಹೋದರೆ ನಾವು ಬಯಲು ಬಯಲಾಗಿ ಬೆಳೆಯುವುದಾದರೂ ಯಾವಾಗ..? ನಾವು ಬಯಲು ಬಯಲಾಗಿ ಜಂಗಮರಾಗಬೇಕೆ ಹೊರತು ಸ್ಥಾವರವಾಗಬಾರದು. ಸ್ಥಾವರ ಯಾವತ್ತೂ ಬೆಳೆಯುವುದಿಲ್ಲ. ಜಂಗಮ ಮಾತ್ರ ಬೆಳೆಯುತ್ತಾನೆ. ಜಂಗಮನಾಗಲಾರದವನು ಜಗತ್ತಿಗೆ ಏನು ಕೊಟ್ಟಾನು..? ಜಗತ್ತಿಗೆ ಕೊಡಲಾಗದವನು ಜಗತ್ತಿನಿಂದ ಪಡೆದುಕೊಳ್ಳುವದಾದರೂ ಏನು..? ಈ ಮಾತುಗಳು ನನ್ನನ್ನು ಸೇರಿ ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ. ತಾಂತ್ರಿಕ ಮತ್ತು ಯಾಂತ್ರಿಕ ಯುಗಗಳಲ್ಲಿ ಸಂಬಂಧಗಳು ಹಳಸುತ್ತಿರುವ ಈ ಸಂದರ್ಭದಲ್ಲಿ ಮತ್ತೆ ನಾವು ವ್ಯಕ್ತಿಯನ್ನು ಪೂಜಿಸುವುದಕ್ಕಿಂತ ಮನುಷ್ಯತ್ವವನ್ನು ಕಟ್ಟಬೇಕಾಗಿದೆ. ಸಣ್ಣ ಸಣ್ಣ ಇಚ್ಛೆಗಳು, ಹಠಮಾರಿತನಗಳು ನಮ್ಮ ವ್ಯಕ್ತಿತ್ವವನ್ನು ಕುಗ್ಗಿಸುತ್ತವೆ. ಸೃಜನಶೀಲ ಬರಹಗಾರರವರು ಇದನ್ನು ಎಚ್ಚರಿಕೆಯಿಂದಲೇ ಅರಿಸಿಕೊಳ್ಳಬೇಕು. ಆ ಎಚ್ಚರಿಕೆ ನಮ್ಮೊಳಗಿಲ್ಲದೆ ಹೋದರೆ ನಾವು ಎಲ್ಲರಿಗೂ ನಗೆ ಪಾಟಲಿಗಾಗುತ್ತೇವೆ.
ನಮ್ಮೊಳಗಿನ ‘ಬಸವ ಪ್ರಜ್ಞೆ’ ಏನಾಗಿದೆ…? ನಮ್ಮ ಬಸವ ಮಹಾರಾಜರ ಬಳಿ ಹಣಕಾಸಿನ ಮಂತ್ರಿಯಾಗಿದ್ದರು. ಬಹುದೊಡ್ಡ ಹುದ್ದೆ. ಪ್ರತಿಷ್ಠೆ ಎಲ್ಲವೂ ಇತ್ತು ಆದರೆ ಆತನೊಳಗೊಬ್ಬ ತಾಯ್ತನವಿತ್ತು. ಸಮಾಜದಿಂದ ನಿಕೃಷ್ಟವೆಂದು ಕರೆಯುವ ಸಣ್ಣ ಸಣ್ಣ ಸಮುದಾಯಗಳನ್ನು ಅಪ್ಪಿಕೊಂಡಿದ್ದನು. ಅಂದಿನ ಕಾಲಘಟ್ಟದಲ್ಲಿ ಮಹಿಳೆ ಎಂದರೆ ಮೂಗುಮುರಿಯುತ್ತಿದ್ದ ವಿಷಮ ಘಟ್ಟದಲ್ಲಿ ಆತ ಮಹಿಳೆಯರಿಗೂ ಅವಕಾಶ ಕೊಟ್ಟ ಮಹಾ ಮಾನವತಾವಾದಿ. ಬಸವ ಎಲ್ಲರನ್ನು ಅಪ್ಪಿಕೊಂಡ. ಒಪ್ಪಿಕೊಂಡ. ಬೆಳೆಸಿದ. ಸಂತೈಸಿದ. ಪ್ರೀತಿಯಿಂದ ನೇವರಿಸಿದ. ಎಲ್ಲರೊಳಗೊಬ್ಬನಾದ. “ಎನಗಿಂತ ಕಿರಿಯನಿಲ್ಲ ; ಶಿವ ಭಕ್ತರಿಗಿಂತ ಹಿರಿಯರಿಲ್ಲ..” ಎನ್ನುವ ಬಹುದೊಡ್ಡ ತಾತ್ವಿಕ ಚಿಂತನೆಯನ್ನು ನಮಗೆ ಕೊಟ್ಟ. ಬಸವನ ಹಾದಿಗೆ ಇಂದೇಕೋ ಅಡ್ಡಗೋಡೆಗಳ ಕಟ್ಟಿ, ಯಾರು ನಡೆದಾಡಲಾಗುತ್ತಿಲ್ಲ. ಬಸವನು ನಮ್ಮೊಳಗೆ ಇಳಿಯಬೇಕೆಂದರೆ ಬಸವ ಪ್ರಜ್ಞೆಯನ್ನು ಅನುಸರಿಸಬೇಕು. ‘ಬಸವ ಪ್ರಜ್ಞೆ’ ಇಲ್ಲದ ವ್ಯಕ್ತಿ ಎಂತಹ ಬಹುದೊಡ್ಡ ವಿದ್ವಾಂಸನಾದರೂ ವ್ಯರ್ಥ…!!

ಅಬ್ಬಾ…!!! ಭಾರಿ ಸುಂದರ, ಜವಬ್ದಾರಿಯುತ ಅರ್ಥಪೂರ್ಣ ಸಮಯೋಚಿತ ಲೇಖನ. ಪ್ರಸ್ತುತ ವಿದ್ಯಮಾನಗಳನ್ನು ಬಿಂಬಿಸುವ ಮಾತುಗಳು.
ಅಭಿನಂದನೆಗಳು.