ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಬಣ್ಣಗಳ ಬೆಡಗು

ಹೋಳಿ ಹಬ್ಬದ ಆಚರಣೆಯು
ರಂಗುಗಳ ತುಂಬಿ ಬಂದಿದೆಯು
ಹುಣ್ಣಿಮೆ ಬೆಳದಿಂಗಳಿದೆಯು
ಬಣ್ಣದ ರಂಗನ್ನು ಸೆಳೆದಿದೆಯು
ಶಿವನ ವೈರಾಗ್ಯ ಮುರಿಯಲು
ಮನ್ಮಥ ಹೂ ಬಾಣ ಬಿಡಲು
ಕ್ರೋಧಾಗ್ನಿಯಿಂದ ದಹಿಸಲು
ತ್ರಿನೇತ್ರದ ಜ್ವಾಲೆ ಸುಟ್ಟಿರಲು
ಭಸ್ಮವಾಗಿ ಹೋದ ಮದನನು
ರತಿ ಪ್ರಲಾಪದಿ ಬೇಡಲು ಶಿವನು
ಮಂದಹಾಸ ತನುವಿನಿಂದ ಉಕ್ಕಲು
ವರ್ಷಕ್ಕೊಮ್ಮೆ ಅವರ ಸಮಾಗಮ ಎನ್ನಲು
ವಿವಿಧ ಬಣ್ಣಗಳ ನೀರನ್ನು ತಯಾರಿಸೋಣ
ಎಲ್ಲರಿಗೂ ಖುಷಿಯಿಂದ ಹೋಳಿಯ ಎರಚೋಣ
ಕಾಮನ ರಂಗನ್ನು ಮೂಡಿಸೋಣ
ಸಂತೋಷದಿಂದ ಹಬ್ಬವ ಆಚರಿಸೋಣ
ಡಾ. ಲೀಲಾ ಗುರುರಾಜ್,
