ಕಾವ್ಯ ಸಂಗಾತಿ
“ಹೋಳಿ ಹಬ್ಬದ ಸೊಗಡು”
ಸುಧಾ ಪಾಟೀಲ್

ನನ್ನದೆನ್ನುವ ಹಾದಿಯ
ತೊರೆದು
ನಮ್ಮದೆಂದು ಅಪ್ಪಿಕೊಂಡಾಗ
ಅವರಿವರೆನ್ನದೆ
ಎಲ್ಲರೂ ನಮ್ಮವರೇ ಆದಾಗ
ಭಿನ್ನ ಭಾವ ಇನ್ನೆಂತು
ಕ್ಲೇಶ ಕಲಹ ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ
ತನು-ಮನವೂ ಶುದ್ದಗೊಂಡು ಸುಂದರ
ಸಂಬಂಧಗಳ ಪರಿಭಾಷೆಯಲ್ಲಿ
ಮುಳುಗಿದಾಗ
ದ್ವೇಷವಿಲ್ಲದ ಮನಮೋಹಕ
ಮಾನವೀಯತೆಯ ಹೊಳಹುಗಳ ಛತ್ರಛಾಯೆಯಲ್ಲಿದ್ದಾಗ
ರಂಗು ರಂಗಿನ
ಉಯ್ಯಾಲೆಯಲ್ಲಿ ಗೆಳೆತನದ
ಮಾಧುರ್ಯ
ಮರುಕಳಿಸಿದಾಗ
ಭೇದ-ಭಾವವಿಲ್ಲದ ಬೆಸುಗೆ
ತನ್ನೆಡೆಗೆ ಕರೆದಾಗ
ಮನದ ಭಾವಗಳು
ಒಮ್ಮೆಲೆ ಚಿಮ್ಮಿದಾಗ
ರಂಗೇರಿತು
ಹೋಳಿ ಹಬ್ಬದ ಸಡಗರದ
ನಲಿವಿಗೆ
ಮನಸು ಮನಸುಗಳ
ಮಿಲನಕೆ
——————————————————————————–
ಸುಧಾ ಪಾಟೀಲ

Nice mam
Savita Deshmukh