ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ಹಚ್ಚಿ ಹೋದ ಬಣ್ಣಗಳನ್ನೆಲ್ಲ
ಕವಿತೆಗಳಲ್ಲಿ ಬಿಚ್ಚುತ್ತಿದ್ದೇನೆ!
ಜಗಕೆಲ್ಲ ಹಂಚುತ್ತಿದ್ದೇನೆ
*
ಬಣ್ಣಗಳು
ಮಾಸಬಹುದು ಅಳಿಸಬಹುದು
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ!
*
ಕವಿತೆಗೆ ಕಳೆ ಬಂದದ್ದೇ
ನಿನ್ನ ಬಣ್ಣ ತುಂಬಿದ ನಗುವಿನ ಮಾತುಗಳಿಂದ!


*
ಮೈಮನದಿ ಬಣ್ಣ
ನೀ ಎದೆಗೆ ಒರಗಿದಾಗೆಲ್ಲ!
ಕಣ್ಗಳಲಿ ಓಕುಳಿ
ನೀ ನನ್ನ ಕವಿತೆ ಗುನುಗಿದಾಗೆಲ್ಲ!
*
ಬಾ ಇಂದು ಹೋಳಿ
ಜೀಕೋಣ ಒಲವ ಬಾನ ಬಣ್ಣಗಳ ಜೋಕಾಲಿ!
ಹಾಡೋಣ ಪ್ರೀತಿಯ ಅಮನೆಯಲ್ಲಿ ಕವ್ವಾಲಿ!

———————————————————————————————————–

About The Author

1 thought on “ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು.”

Leave a Reply

You cannot copy content of this page

Scroll to Top