ಲೇಖಕಿ ಎನ್. ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ

ಮಾನ್ಯರೇ, ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಅರ್ಥಶಾಸ್ತ್ರ ಉಪನ್ಯಾಸಕಿ, ಲೇಖಕಿ ಮತ್ತು ನಿರೂಪಕಿ ಶ್ರೀಮತಿ ಎನ್. ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ ಮಾರ್ಚ್ 23 ಸಂಜೆ 4 ಗಂಟೆಗೆ ಮೈಸೂರಿನ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಲೇಖಕರು ಮತ್ತು ಪತ್ರಕರ್ತರಾದ ಶ್ರೀ ರಾಜು ಅಡಕಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾದ ಕಂಗಳ ಕಂಪನ ಕವನ ಸಂಕಲನ ಕುರಿತು ಡಾ. ಜಯಪ್ಪ ಹೊನ್ನಾಳಿ, ನಾಡಿನ ಸುಪ್ರಸಿದ್ಧ ಕವಿಗಳು ಮಾತನಾಡಲಿದ್ದಾರೆ. ಸವಿಗನ್ನಡ ಪತ್ರಿಕೆಯ ಸಂಪಾದಕರಾದ ಶ್ರೀರಂಗನಾಥ ಮೈಸೂರು ಪ್ರೀತಿ ಯೆಂದರೆ, ಕಥಾ ಸಂಕಲನ ಕುರಿತು ಪರಿಚಯ ಮಾಡಲಿದ್ದಾರೆ. ಬೆನಕ ಬುಕ್ಸ್ ಬ್ಯಾಂಕ್, ಬೆಂಗಳೂರು ಪ್ರಕಾಶಕರಾದ ಶ್ರೀ ಗಣೇಶ್ ಕೋಡೂರು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುತ್ತಾರೆ. ಕವನ ಸಂಕಲನದಲ್ಲಿನ ಕವನಗಳ ಗೀತ ಗಾಯನವನ್ನು ವಿದುಷಿ ಪನ್ನಗ ಎಸ್.ವಿ. ಮತ್ತು ಶ್ರೀ ಹರ್ಷ ಪ್ರಭಾಕರ್ ನಡೆಸಿಕೊಡಲಿದ್ದಾರೆ. ಸ್ವಾಗತ ಮತ್ತು ಪರಿಚಯ ಸದ್ವಿದ್ಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ರಾಮಚಂದ್ರ ಭಟ್ಟ ಅವರದ್ದು. ಈ ಸಂದರ್ಭದಲ್ಲಿ  ಕವಿಗೋಷ್ಠಿಯನ್ನು ಏರ್ಪಡಿಸಲಾಗಿದ್ದು  ಹೊಮ್ಮ ಮಂಜುನಾಥ್, ಡಾ. ನಾರಾಯಣ್ ಹೆಗಡೆ,  ಸೌಗಂಧಿಕಾ ಜೋಯಿಸ್, ಯಶೋಧ ರಾಮಕೃಷ್ಣ,ಶೋಭಾ ನಾರಾಯಣ್, ಕಾಳಿಹುಂಡಿ ಶಿವಕುಮಾರ್, ಪ್ರಸನ್ನ ಹೆಗಡೆ, ವಿಜಯಲಕ್ಷ್ಮಿ ಭಟ್ , ಸುಮಾ ಪಂಚವಳ್ಳಿ,ಅನಂತ ತಾಮ್ಹನ್ಕರ್, ಕೆ ವಿ ವಾಸು, ಬಿ.ಕೆ .ಮೀನಾಕ್ಷಿ, ಎಂ.ಬಿ ಸಂತೋಷ್ ಪಾಲ್ಗೊಳ್ಳಲಿದ್ದಾರೆ. ಚಂದ್ರಕಲಾ ಕುಮಾರ್ ಮತ್ತು ನಾದಶ್ರೀ ಭಟ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ರೂಪಶ್ರೀ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾಗಿದ್ದು, ಪ್ರಸ್ತುತ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಮೈಸೂರಿನಲ್ಲಿ ನೆಲೆಸಿದ್ದಾರೆ .ಈಗಾಗಲೇ ಇವರ ಆರು ಪುಸ್ತಕಗಳು ಪ್ರಕಟವಾಗಿದೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.


One thought on “ಲೇಖಕಿ ಎನ್. ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ

  1. ಕಾದ ಕಂಗಳ ಕಂಪನ ಮತ್ತು ಪ್ರೀತಿಎಂದರೆ ಎರಡು ಕೃತಿ ಗಳನ್ನು ಲೋಕಾರ್ಪಣೆ ಗೊಳಿಸುತ್ತಿರುವ ಕವಯತ್ರಿ ನಿರೂಪಕಿ, ಶ್ರೀಮತಿ ಎನ್ ಆರ್ ರೂಪಶ್ರೀ ಮೇಡಂ ಅವರಿಗೆ ಅಭಿನಂದನೆಗಳು
    ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿ ಯಾಗಲಿ
    ಎ ಎಸ್. ಮಕಾನದಾರ. ಗದಗ

Leave a Reply

Back To Top