ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಣ್ಣದ ಹನಿಗಳು

೧
ಬಣ್ಣದೋಕುಳಿ
ಹಬ್ಬದಲಿ ನೂರಾರು
ಕಣ್ಚಿತ್ರಗಳು
೨
ಹೋಳಿ ಹಬ್ಬದ
ಹುಚ್ಚಾಟಕೆ ಬಣ್ಣವು
ಮೆರಗಿತ್ತಿತು
೩
ಪೋಲಿ ಹಬ್ಬದ
ಹೋಳಿ, ಓಣಿಗೆಲ್ಲ
ರಂಗಿನ ಗುಲ್ಲು
೪
ಮೋಜು ಮಸ್ತಿಯ
ಈ ಬಣ್ಣದ ಹಬ್ಬಕೆ
ವರ್ಣ ಮೆರುಗು
೫
ಕಾಮ ದಹನ,
ರತಿಯ ರೋದನಕೆ
ತಾಳ್ಮೆಯೇ ಸಾಕ್ಷಿ

ಎಸ್ಕೆ ಕೊನೆಸಾಗರ ಹುನಗುಂದ