ಕಾವ್ಯ ಸಂಗಾತಿ
ವ್ಯಾಸ ಜೋಶಿ
ಹಾಯ್ಕುಗಳು


ಅವಳೆಂದಳು
ತಾಳಿ; ಕಟ್ಟೇ ಬಿಟ್ಟನು
ಪ್ರಿಯತಮನು.
ಜಂಗಮವಾಣಿ,
ಮೇಘದೂತ ; ಈಗಿನ
ಪ್ರೇಮಿಗಳಿಗೆ.
ಸೂರ್ಯೋದಯಕೆ
ಮಂಜು ಕರಗಿದಂತೆ
ನಿನ್ನಾಗಮನ.
ಯಾರು ಗೆದ್ದರೂ
ಸೋತವರಿಗೆ ಖುಷಿ,
ದಾಂಪತ್ಯದಲಿ.
ಪ್ರೇಮದ ಲಗ್ನ
ಹಿರಿಯರ ಮಾತು-ಕತೆ
ನೆಪ ಮಾತ್ರಕೆ.
ಹೊಸ ಜೋಡಿಗೆ
ಪ್ರೀತಿಯ ಹೆಚ್ಚಿಸಿದ್ದು,
ಹುಸಿ ಮುನಿಸು.
————————————————————-
ವ್ಯಾಸ ಜೋಶಿ
