ಕಾವ್ಯ ಸಂಗಾತಿ
ರುಕ್ಮಿಣಿ ಯಮನಪ್ಪಅಗಸರ
ʼನಾನು ಹೆಣ್ಣಂತೆ…ʼ

ನಾನು ಹೆಣ್ಣಂತೆ…!
ಒಂದಿಷ್ಟು ಬಾಗಬೇಕಂತೆ ಮತ್ತಷ್ಟು ಮಾಗಬೇಕಂತೆ ಬಾಗಿ, ಮಾಗಿ, ಪರಿಪಕ್ವಗೊಂಡು ಪರರಿಗೆ ಸಿಹಿಯ ನಾ ನೀಡಬೇಕಂತೆ
ನಾನು ಹೆಣ್ಣಂತೆ…!
ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ
ನಾನು ಹೆಣ್ಣಂತೆ…!
ಒಂದಿಷ್ಟು ತಾಳ ಬೇಕಂತೆ ಮತ್ತಷ್ಟು ಬಾಳ ಬೇಕಂತೆ ತಾಳಿ, ಬಾಳಿ, ಮಣ್ಣಲ್ಲಿ ಮಣ್ಣಾದರು ಮತ್ತೊಬ್ಬರಿಗೆ ನೆರಳು ನಾನಾಗಬೇಕಂತೆ
ನಾನು ಹೆಣ್ಣಂತೆ…!
ಒಂದಿಷ್ಟು ಸುಖ ನನ್ನಿಂದಲೆಯಂತೆ, ಮತ್ತಷ್ಟು ಸೃಷ್ಟಿಯು ನಾನಂತೆ, ಎಲ್ಲವೂ ನಿನ್ನಿಂದಲೇ ಎನ್ನುವ ಆಡಂಬರದ ಭಾವಕ್ಕೆ ನನ್ನ ಹುಸಿಯ ನಗುವೊಂದೇ ಸೂಕ್ತವಂತೆ…
ರುಕ್ಮಿಣಿ ಯಮನಪ್ಪಅಗಸರ

Super poem