ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು.

ಕವನವೆಂದರೆ  ಹೀಗಿರಬೇಕು
ಜನಮನದಲಿ ಉಳಿಯುವಂತಿರಬೇಕು
ಸದಾ  ಕಾಡುವಂತಿರಬೇಕು
ಮನಸು ಕದಡಿ ವಿಚಾರ
ಮಾಡುವಂತಿರಬೇಕು
ನಿದ್ದೆಗಣ್ಣಲ್ಲೂ ಮೆಲುಕು
ಹಾಕುವಂತಿರಬೇಕು
ಕುಂತಾಗ ನಿಂತಾಗ
ನೆನಪಾಗುವಂತಿರಬೇಕು
ಭಾವಗಳ ಸ್ಪರ್ಶಿಸಿ  
ಹೃದಯವ ತಲುಪುವಂತಿರಬೇಕು
ಹೋದಲ್ಲಿ  ಬಂದಲ್ಲಿ
ಗುನುಗುವoತಿರಬೇಕು
ಸದಾ  ನೆರಳಿನoತೆ
ಹಿಂಬಾಲಿಸುವಂತಿರಬೇಕು
ನಮ್ಮನ್ನು  ಗಟ್ಟಿಯಾಗಿ
ಅಪ್ಪಿಕೊಂಡು  ಅಗಲದಂತೆ
ಜೊತೆಯಾಗುವಂತಿರಬೇಕು 


11 thoughts on “ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು.

  1. ನಿದ್ದೆಗಣ್ಣಲ್ಲೂ ಮೆಲುಕು ಹಾಕುವ ಅರ್ಥ ಪೂರ್ಣ ಕವನ

  2. ಹೃದಯ ವೀಣೆಯ ತಂತಿ ಮೀಟಿದ ಸುಂದರ ಕವನ

Leave a Reply

Back To Top