ಜ್ಞಾನ ವಿಜ್ಞಾನ ಸಮಿತಿಯಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆ

ಮಾರ್ಚ್ 8 ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಸನ ಸಹಯೋಗದಲ್ಲಿ 50 ನೇ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಂಕರಿ ಪುರಂ ನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು.
ಕಾರ್ಯದರ್ಶಿ ಚಿನ್ನೇನಳ್ಳಿ ಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿ… ಇಂದಿನ ದಿನಮಾನಗಳಲ್ಲಿ ಮಹಿಳೆ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಳಾಗಿದ್ದಾಳೆ. ದ್ರೌಪದಿ ಮುರ್ಮುನಂತಹ ಸಾಮಾನ್ಯ ಮಹಿಳೆ ಇಂದು ರಾಷ್ಟ್ರಪತಿಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಮಹಿಳೆಯರು ಪುರುಷರ ಸರಿಸಮಾನವಾಗಿ 70.ರಿಂದ ..80 ಅಡಿ ಎತ್ತರದ ಮರದ ಮೇಲೇರಿ ಮೆಣಸನ್ನು ಬಿಡಿಸುವಂತ ಕ್ಲಿಷ್ಟಕರವಾದ ಕೆಲಸ ಮಾಡುತ್ತಿದ್ದು ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಿ ತಮಗೂ ಸರಿಸಮನಾದ ಪಗಾರ ದಕ್ಕಬೇಕೆಂದು ಆಗ್ರಹಿಸುವ ಮಟ್ಟಕ್ಕೆ ಬೆಳೆದು ನಿಂತಿರುವುದು ಸ್ತ್ರೀ ಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಮಮತಾ ಶಿವು ಅವರು ಸ್ತ್ರೀ ಕೇವಲ ವೈಭೋಗದ ವಸ್ತುವಲ್ಲ ಗೌರವದಿಂದ ಕಾಣಬೇಕು ಅಲ್ಲದೆ ವಯೋ ಸಹಜವಾದ ಕೆಲವು ದೈಹಿಕ ಏರುಪೇರುಗಳ ಸಮಯ ಅಂದರೆ ಮುಟ್ಟು ನಿಲ್ಲುವ ಸಮಯದಲ್ಲಿ ದೈಹಿಕ ಯಾತನೆಗಳಿಂದ ಬಳಲುವ ಸಂದರ್ಭದಲ್ಲಿ ಇಡೀ ಕುಟುಂಬ ಅದನ್ನು ಅರ್ಥ ಮಾಡಿಕೊಂಡು ಅವರಿಗೆ ವಿಶ್ರಾಂತಿ ನೀಡುವುದರ ಮೂಲಕ ಅವಳಿಗೆ ಸ್ಪಂದಿಸಬೇಕು, ಎಲ್ಲ ಕ್ಷೇತ್ರಗಳಲ್ಲೂ ಅವಳನ್ನು ಮರ್ಯಾದೆಯಿಂದ ನಡೆಸಿಕೊಂಡಾಗ ಮಾತ್ರ ಸ್ತ್ರೀ ಗೆ ಸಮಾನತೆ ಕೊಟ್ಟಂತೆ ಎಂದರು.
ಕವಿಯತ್ರಿ ಮಾಲಾ ಚೆಲುವನಹಳ್ಳಿಯವರು ಹಳ್ಳಿಯ ಬದುಕಿನಲ್ಲಿ ರೈತಾಪಿ ಕೆಲಸ ಕಾರ್ಯಗಳಲ್ಲಿ ಮುಳುಗಿ ತಮ್ಮ ಲ್ಲಿ ಅಂತರ್ಗತವಾಗಿ ಅಡಗಿದ್ದ ಪ್ರತಿಭೆಗೆ ಅವಕಾಶ ಸಿಗದೇ ಕಮರಿ ಹೋಗಿದ್ದು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಫೇಸ್ಬುಕ್ ಬಳಗಗಳ ಮೂಲಕ ಹೊರಹೊಮ್ಮಲು ಕಾರಣವಾಗಿ ಇಂದು ರೈತಾಪಿ ಕೆಲಸ ಕಾರ್ಯಗಳ ಜೊತೆಗೆ ಸಾಹಿತ್ಯದಲ್ಲಿ ತೊಡಗಿಕೊಂಡು ಮಾನಸಿಕ ತೊಳಲಾಟ, ಜಂಜಾಟಗಳಿಂದ ಮುಕ್ತಿ ಸಿಕ್ಕಿದ್ದು ಮಾನಸಿಕ ನೆಮ್ಮದಿ ಕೊಟ್ಟಿದ್ದು ಇಂದು ಇಂತಹ ದೊಡ್ಡ ವೇದಿಕೆಯಲ್ಲಿ ತನ್ನನ್ನು ಒಬ್ಬ ಅತಿಥಿಯಾಗಿ ಆಮಂತ್ರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾ ಕೊರಗುತ್ತಾ ಕುಳಿತರೆ ಎಲ್ಲವೂ ಅಸಾಧ್ಯ ತಮ್ಮ ಪಾಲಿಗೆ ಬರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಬೆಳೆಯಬೇಕು ಎಂದು ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಕುಮಾರಿ ಮೀನಕ್ಕನವರು ಮಾತನಾಡಿ ಮಹಿಳೆ, ಪುರುಷ ಎಲ್ಲಕ್ಕೂ ಆತ್ಮಒಂದೇ, ದೈಹಿಕ ಆರೋಗ್ಯದಷ್ಟೇ ಮನುಷ್ಯರಿಗೆ ಮಾನಸಿಕ ಆರೋಗ್ಯ, ಶಾಂತಿ, ಸಮಾಧಾನ ಮುಖ್ಯ ಅದಕ್ಕಾಗಿ ನಾವು ಧ್ಯಾನ, ಯೋಗಗಳನ್ನು ಮಾಡುವುದನ್ನು ಅಭ್ಯಾಸ ಮಾಡಬೇಕು ಆಗಷ್ಟೇ ಮನಸ್ಸು ನಿರಾಳವಾಗಿರಲು ಸಾಧ್ಯ ಅದನ್ನು ತಮ್ಮ ಪ್ರಜಾಪಿತ ಬ್ರಹ್ಮ ಕುಮಾರಿ ಸಮಾಜ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ ಎಂದು ಹೇಳಿ ಎಲ್ಲರಿಗೂ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡಿಸಿದರು
ಕಮಲಮ್ಮ,ವಾಣಿ ಮಹೇಶ್, ಡಾ.ಮಂಜುನಾಥ್, ಹೆಚ್. ಎಸ್ ಪ್ರತಿಮಾ ಹಾಗೂ,,ಹೆಚ್, ಆರ್, ಶೇಖರ್, ಸರಳ ಅಕ್ಕ ಅಲ್ಲದೇ ಹಲವಾರು ಮಂದಿ ಭಾಗವಹಿಸಿ ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿ ಕಾರ್ಯಕ್ರಮವನ್ನು ಸುಸಂಪನ್ನಗೊಳಿಸಿದರು


Leave a Reply

Back To Top