ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ʼಓ ಜೀವ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆʼ

ಓ ಜೀವ ಓ ಜೀವಾ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ!!
ಈ ಕಣ್ಣಲಿ ತುಂಬಿದ ಹನಿಗಳು ಸಾರಿ ಹೇಳಿವೆ
ಈ ಹುಟ್ಟು ಜನುಮಕೆ ನೀನು ನನ್ನವನೆಂದು!
ಆ ಹನಿಗಳು ಮತ್ತೆ ಹೇಳುತ ನನ್ನನ್ನು ಕೆಣಕಿವೆ
ಇನ್ನು ಪೂರ್ತಿ ನೀನು ನನ್ನ ಸ್ವತ್ತಲ್ಲವೆಂದು!!
ಓ ಜೀವ ಓ ಜೀವಾ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ!!
ನಿನ್ನ ನಿಷ್ಟುರ ಮಾತುಗಳು ಈ ಹೃದಯಕ್ಕೆ ಚುಚ್ಚಿದೆ
ಕುಗ್ಗದೆ ಹೃದಯವಿನ್ನು ನಿನ್ನನ್ನೆ ಹುಡುಕತಲಿದೆ!
ಮರೆಯಲಾಗದ ನೆನಪುಗಳು ಸದಾ ಕಾಡಿದೆ
ನಿನ್ನ ಹುಡುಕಾಟದಲ್ಲಿ ನನ್ನನೇ ನಾ ಮರೆತು ಹೋದೆ!!
ಓ ಜೀವ ಓ ಜೀವಾ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ!!
ನನ್ನ ಮನಸು ದಿನವೆಲ್ಲಾ ನಿನ್ನೆ ನೆನೆಯುತ ಕೊರಗಿದೆ
ಆ ಕೊರಗು ನನ್ನನ್ನು ಪ್ರತಿ ಕ್ಷಣ ಕ್ಷಣವು ಕೊಂದಿದೆ!
ಇಲ್ಲಿ ಮೋಡವು ನನ್ನ ಕಂಡು ದುಃಖ ಪಡುತ್ತಿದೆ
ಅವನ ಕೈಯ ಬಿಡಬೇಡ ಈ ನಿನ್ನ ಜೀವ ಎನ್ನುತ್ತಿದೆ!!
ಓ ಜೀವ ಓ ಜೀವಾ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ!!
ನಿನ್ನೆಲ್ಲ ತಪ್ಪನು ಮನ್ನಿಸಿ ನಿನ್ನ ಅಪ್ಪಿಕೊಳ್ಳುವ ಆಸೆಯಾಗಿದೆ
ನನ್ನ ನಿನ್ನ ಪ್ರೀತಿ ಒಂದಾಗಲು ಮತ್ತೆ ಹಂಬಲಿಸುತಲಿದೆ!
ಮನಸೇಕೋ ನೀನೆ ಬೇಕೆಂದು ಹಠವ ಮಾಡಿ ಕೂತಿದೆ
ನೀರ ಮೇಲೆ ಗುಳ್ಳೆಯಂತೆ ಜೀವನ ಕರಗಿ ನಿನ್ನ ನೆರಳಿಗೆ ಕಾದಿದೆ!!
ಓ ಜೀವ ಓ ಜೀವಾ ನೀ ನನ್ನ ಬಿಟ್ಟು ಎಲ್ಲಿ ದೂರ ಹೋದೆ!!
ಕಾವ್ಯ ಪ್ರಸಾದ್