ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಮುಖಾಮುಖಿ


ನಾನೆಷ್ಟು ನಿಕಟವಾಗಿ
ನಿನ್ನೊಂದಿಗೆ ವ್ಯವಹರಿಸಿದ್ದೆ
ಆದರೂ ಇಂದಿಗೂ
ನಿನ್ನ ಪೂರ್ಣ ಪರಿಚಯವಾಗಿಲ್ಲ
ಮಾತಿಲ್ಲ ಕತೆಯಿಲ್ಲ
ಇದೇ ವ್ಯಥೆ ನನಗೆ
ನೀನಿದ್ದು ಇಲ್ಲವಾಗುವ
ಹತ್ತಿರ ಇದ್ದು ದೂರವಾಗುವ
ಅತಿಶಯ ಅಥ೯ವಾಗಿಲ್ಲ
ಒಮ್ಮೆಯಾದರೂ
ಮುಖಾಮುಖಿಯಾಗು ಎಂದರೆ ಮುಖವೇ
ಇಲ್ಲವೇ ನಿನಗೆ
ಬರೆಯದೇ ಬರಿದಾಗಿ ಯೇ
ಉಳಿಯಿತು ನನ್ನ ದಿನಚರಿ
ಪುಟ ಪುಟಗಳಲ್ಲಿ ನಿನ್ನದೇ
ನೆನಪಿನ ಅಕ್ಕರೆಯ
ಅಕ್ಷರಗಳು
ಕಣ್ಣ ತಿವಿದು ಪರಿಹಾಸ ಮಾಡುತ್ತಿವೆ
ಅಭಿಸಾರ ಕರೆವ
ದಾರಿ ದೀಪಗಳಾಗುತ್ತವೆ ಕಾಣದ ಆ ಅಕ್ಷರಗಳಲ್ಲಿ
ಬರೆಯಲಾಗದ ಪದಗಳು ಒತ್ತಿ ಒತ್ತಿ ಕಾಡುತ್ತಿವೆ.
————————————————————————————

ಗೊರೂರು ಅನಂತರಾಜು