ಸವಿತಾ ದೇಶಮುಖ ಅವರ ಕವಿತೆ-ತೂಗುತಿಹಳು ತೊಟ್ಟಿಲ

ತೂಗುತಿಹಳು ತೊಟ್ಟಿಲ- ಜನನಿ…,
ಹಸುಳೆಯ ಮಮತೆಯ ಸಿರಿಯಾಗಿ
ಮಮ ತಾಯಿತನದ ಸಾರಾಗಿ
ಮಮಕಾರದ ಮೇರುಗಾಗಿ
ತೂಗುತಿಹಳು – “ಒಲುಮೆ”ಯ ತೊಟ್ಟಿಲ…

ಮಗು ಬೆಳೆದು ಹೆಮ್ಮರವಾಗಿ
ತಾಯ- ಮನೆತನದ ನೆರಳಾಗಿ
ಭವ್ಯ ಜಯದ ಜೀವನ ಗಾನವಾಗಿ
ಅಪ್ರತಿಮ ವ್ಯಕ್ತಿತ್ವದ ಧಣಿಯಾಗಿ
ಚಿಗುರುವ-“ಆಶಯ”ದ ತೊಟ್ಟಿಲ ತೂಗುತಿಹಳು…

ಕೈಯ-ಅಮೃತ ತುತ್ತ ಉಣ ಬಡಿಸುತ್ತ
ಬರಹ ಕಲಿಸಿ,ನಿಲಲು -ಓಡಲು ಕಲಿಸುತ
ಸೌಮ್ಯಸಾಮ್ಯ ಮೂರ್ತಿ ನಿರ್ಮಿಸುತ
ಸ್ಥೈರ್ಯದ ನಡೆ ,ಧೈರ್ಯ ತುಂಬುತ
“ಆತ್ಮವಿಕಸನ”ದ- ತೊಟ್ಟಿಲ ತೂಗುತಿಹಳು…

ಮಗು-ನಡೆವ ದಾರಿ ದಿವಿಗೆಯಾಗಿ
ಬಲು ದಿಟ್ಟತನದ ಘನತೆಯಾಗಿ
ಸತ್ ಕಾಯಕದ ಬೀಜ ಅಂಕುರವಾಗಿ
ಕಾರುಣ್ಯದ ತತ್ವ ಬೋಧಿಸುತ
“ಆಚಾರ”ದ -ತೊಟ್ಟಿಲ ತೂಗುತಿಹಳು …

ಸದಾ- ಕರ್ಮದ ಪಥದತ್ತ ಕೈ ಹಿಡಿದು
ನಡೆಸುತ್ತಾ,ನ್ಯಾಯ ನಿಷ್ಠುರ್ರಹುತ
ಕಷ್ಟದವರ ಕಂಬನಿ ವರಿಸುವದು,
ಸಂಸ್ಕೃತಿ-ಧರ್ಮದ ನಿಜ ಗುರಿಯ
ಬಿತ್ತರಿಸಿ,”ಕಾಯಕ”-ತೊಟ್ಟಿಲ ತೂಗುತಿಹಳು…

ಅನ್ಯಾಯ ಮೆಟ್ಟಿ ನಿಲ್ಲಲು
ನೈತಿಕ ಹೊಂಬೆಳಕು ಬೆಳಕಿಸಲು
ದುಷ್ಟ ಶಿಷ್ಟರ ಬಡೆದು ಓಡಿಸಲು
ಸನ್ನಿತವಾದರೆ ಖಡ್ಡ್ಗವ ಹಿಡಿಯಲು
ಹಿಂದೆಟು ಹಾಕದಂತ ಪರುಷದ
“ವೀರತ್ವದ” -ತೊಟ್ಟಿಲ ತೂತಿಗಳು …..

ನೀತಿ- ಧರ್ಮ- ಸ್ವಾಭಿಮಾನದ ಬದುಕಿನ
ತೊಟ್ಟಿಲ ತೂಗುತಿಹಾಳು …..


4 thoughts on “ಸವಿತಾ ದೇಶಮುಖ ಅವರ ಕವಿತೆ-ತೂಗುತಿಹಳು ತೊಟ್ಟಿಲ

Leave a Reply

Back To Top