ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಎಂದರೆ ಅಷ್ಟೆ ಸಾಕೇ..

ಡಾ.ಜಿ.ಎಸ್.ಶಿವರುದ್ರಪ್ಪನವರು ಬರೆದ ಈ ಕವಿತೆ ಮನದಾಳದಲ್ಲಿ ಹುದುಗಿರುವ ಭಾವನಾತ್ಮಕ ಚಿಂತನೆಯನ್ನು ಒರೆಗೆ ಹಚ್ಚುತ್ತದೆ.ಮಹಿಳೆ ಕೇವಲ ಭೂಮಿಗೆ ಭಾರವಲ್ಲ!. ಭೂಮಿ ತೂಕದ ವಸ್ತುವೂ ಅಲ್ಲ!.. ಅವಳೊಂದು ಜೀವಂತಿಕೆಯ ಪ್ರತೀಕ. ಜಗತ್ತಿನ ವಿಚಾರ ವಿಶಾಲವಾದಷ್ಟು ಒಳಮನಸ್ಸು ಕುಬ್ಜವಾಗುತ್ತಿರುವುದನ್ನು ಗಮನಿಸುತ್ತಿದ್ದೆವೆ.ಮನೆ ಮನೆಗಳಲ್ಲಿ ಬದುಕುವ ಚಿತ್ರಣ ಬದಲಾಗಿದೆ.ಮೊದಲಿದ್ದ ಹೆಣ್ಣು ಮಗಳು ಕಾಲ ಬದಲಾದಂತೆ ಅವಳ ಮನಸ್ಥಿತಿ ಕೂಡ ಚೇಂಜ್ ಆಗಿದೆ.ವ್ಯವಹಾರಿಕ ಜನಜೀವನದಲ್ಲಿ ಹಾಸು ಹೊಕ್ಕಾದ ಸಂಪ್ರದಾಯಗಳು ಚಿತ್ರವಿಚಿತ್ರ ಚಿತ್ರಣದಲ್ಲಿ ಮೂಢನಂಬಿಕೆಯ ಪರದೆ ಕೂಡ ಮುಂಚೂಣಿಯಲ್ಲಿದೆ.ಹೆಣ್ಣು’ ಅಬಲೆ’ ಎಂಬ ಪಟ್ಟ..ಕೊಂಚ ನಶಿಸಿದೆ….ಆದರೆ ‘ಸಬಲೆಯ’ ಹಣೆಪಟ್ಟಿ ಹಚ್ಚಿದ ಮೇಲಂತೂ ಹೆಣ್ಣು ನೋವನ್ನು ತನ್ನ ಸೆರಗಿಗೆ ಕಟ್ಟಿಕೊಂಡಂತೆ ನರಕದಲ್ಲೂ ನಗುವನ್ನು ಕಾಣುತ್ತ ಜೀವನ ಸಾಗುವ ಮಹಿಳೆಯರಿಗೆ ಕೊರತೆಯಿಲ್ಲ..

ಹಿಂದಿನಿಂದಲೂ,ಅಬಲರನ್ನು ಸಬಲರು ದುರ್ಬಳಕೆ ಮಾಡುವುದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಸಹಜವಾಗಿ ನಡೆದುಕೊಂಡು ಬಂದಿದೆ. ಲೈಂಗಿಕ ದೌರ್ಜನ್ಯಕ್ಕೂ ಹಲವು ಪ್ರಾಣಿಗಳು ಒಳಗಾಗುವುದನ್ನು ಕಂಡಾಗೆಲ್ಲ ಕರುಳು ಚುರ್ ಅನ್ನುತ್ತದೆ. ದೈವ ಸೃಷ್ಟಿಯಲ್ಲಿ ಗಂಡಸರಿಗೆ ಗರ್ಭ ಧರಿಸುವ ಅವಕಾಶವಿಲ್ಲ,ಇದ್ದರೂ ಅಲ್ಲೊ ಇಲ್ಲೊ ಅಪರೂಪದ ಅಪವಾದಯೆಂಬಂತೆ ಉದಾ.ಗಳು ಇವೆ.ಆದರೆ, ಹೆಂಗಸರು ಮಕ್ಕಳನ್ನು ಹೆತ್ತು, ಹೊತ್ತು ಬೆಳೆಸುವ ಕರ್ತವ್ಯ ಪ್ರಕೃತಿದತ್ತವಾಗಿಯೇ ಬಂದಿದೆ. ಹೆಣ್ಣು ಮಕ್ಕಳಿಗೆ ಸಹಜವಾಗಿಯೇ ತಾಳ್ಮೆ, ಪ್ರೀತಿ, ಅಕ್ಕರೆ ಗಂಡಸರಿಗಿಂತ ಜಾಸ್ತಿ ಇರುತ್ತದೆ.ಆದಿಮಾನವರು ಬೇಟೆಯಾಡಿ ಮಾಂಸವನ್ನು ಮನೆಗೆ ತಂದರೆ, ಹೆಂಗಸರು ಮನೆಯಲ್ಲೆ ಇದ್ದು ಅಡಿಗೆ ಮಾಡಿ ಮಕ್ಕಳನ್ನು ಸಲಹಿ ಬೆಳೆಸುತ್ತಿದ್ದರು. ಕಾಲ ಕಳೆದಂತೆ ಹೆಂಗಸರೂ ಈಗ, ಗಂಡಸರಂತೆ ದುಡಿಯಲು ಪ್ರಾರಂಭಿಸಿದರೂ, ಗರ್ಭ ಧರಿಸಿ ಹೆರುವ ಕೆಲಸ ಅವರಿಂದ ದೂರ ಆಗಲಿಲ್ಲ. ಇದಕ್ಕೆ ಯಾರನ್ನೂ ದೂರುವಂತಿಲ್ಲ. ಇದನ್ನು ವರವೆಂದು ಸ್ವೀಕರಿಸಿದ್ದೆವೆ.ಹೆಣ್ಣು ತಾಯಿಯಾದ ಮೇಲೆ ಅವಳ ಜೀವನ ಪರಿಪೂರ್ಣತೆಯನ್ನು ಪಡೆಯುತ್ತದೆ.ಮಕ್ಕಳು ಹೆತ್ತವರು ಮಾತ್ರ ತಂದೆತಾಯಿಗಳು ಅಂತ ಅಲ್ಲ, ಮಕ್ಕಳನ್ನು ದತ್ತು ಪಡೆದು ಸಲಹುವರು ಕೂಡ ಹೆತ್ತವರಿಗೆ ಸಮಾನ!.

ಎಲ್ಲವೂಸರಿ,ಹೆಣ್ಣಾದರೇನು,ಗಂಡಾದರೇನು,ಮಕ್ಕಳು ಎಂಬ ಭಾವ ಈಗೀಗ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಆದರೆ ಎಷ್ಟೋ ಕಡೆ ಹೆಣ್ಣು ಹೆತ್ತರೆ ಶಾಪ ಎಂಬಂತೆ ಕನಿಷ್ಠ ಪದ್ದತಿಗಳು,ಭ್ರೂಣ ಹತ್ಯೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವ್ಯಾಹತವಾಗಿ ನಡೆಯುತ್ತಿದೆ… ಅದರ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.ಹೆಣ್ಣನ್ನು ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ.ಎಷ್ಟೇ ಸಾಧನೆ ಮಾಡಿದರೂ,ಅವಳನ್ನು ಪೂಜಿಸು ಕೆಲಸ ಕೆಲವೇ ಕೆಲವು ಕಡೆ ನಡೆಯುತ್ತಿದೆ..ಒಂದು ಹೆಣ್ಣೆಂದು ತಿಳಿದವರು ನಾವು.”ಯತ್ರ್ ನಾರ್ಯಸ್ತು ಪೂಜ್ಯಂತೆ ತತ್ರ್ ರಮಂತೇ ದೇವತಾ:” ಎಂಬ ವಾಕ್ಯ ಹೆಣ್ಣಿನ ಶ್ರೇಷ್ಠತೆಯ ಬಗ್ಗೆ ಮನವರಿಕೆ ಮಾಡಿದೆ. “ಹೆಣ್ಣು ಮನೆಗೆ ಕನ್ನಡಿ ಇದ್ದ ಹಾಗೆ…ಪ್ರತಿ ಸಹೋದರರು ತಮ್ಮ ಮನೆಯ ತಂದೆ ತಾಯಿ ಅಕ್ಕ,ತಂಗಿಯರನ್ನು ಗೌರವಿಸುವ ಕೆಲಸ ಅವ್ಯಾಹತವಾಗಿ ನಡೆಯಬೇಕಿದೆ.ಸ್ತ್ರೀ ಎಂದರೆ ಅಷ್ಟೆ ಸಾಕೇ? ಮತ್ತೇನು ಹೇಳಲು ಸಾಧ್ಯವಿಲ್ಲ.

ಎಲ್ಲ ಗೊತ್ತಿದೆ,ಆದರೂ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ!. ಇದು ಸಮಾಜದ ಯಾವ ಮುಖವನ್ನು ತೋರಿಸುತ್ತದೆ ಎಂಬ ಚಿಂತನೆ ಅನಿವಾರ್ಯ!. ಎಲ್ಲದ್ದಕ್ಕೂ ತಂದೆ ತಾಯಿಯರನ್ನು ಬೊಟ್ಟು ಮಾಡಿ ತೋರಿಸುವ ಕೆಲಸ ಯಥೇಚ್ಛವಾಗಿ ಕಾಣುತ್ತದೆ.ಮುಗ್ದ ಹೆಣ್ಣುಮಕ್ಕಳು ಬಲಿಯಾಗುತ್ತಿರುವುದು ದುರಂತವೇ ಸರಿ!. ಅನ್ಯಾಯವಾಗಿ ಬಲಿಯಾದ ಹೆಣ್ಣು ಮಗಳ ಬಗ್ಗೆ ಧ್ವನಿಯೆತ್ತಿದವರ ಧ್ವನಿ ಅಡಗಿಸುವ ಹುನ್ನಾರ ನಡೆದಷ್ಟು ಅಪರಾಧಿ ತಾನು ನಿರಪರಾಧಿಯೆಂದೆ ತಲೆಯೆತ್ತಿ ತಿರುಗಲು ಅವಕಾಶ ನೀಡುತ್ತಿರುವ ಸಮಾಜ ಘಾತುಕರ ದಂಡಿಗೆ ಯಾವ ಶಿಕ್ಷೆ?.. ಸಾಕ್ಷಿಗಳು ಇದ್ದರೂ ನೇಣಿಗೆ ಏರಿಸದ ಅಸಾಯಕ ಸ್ಥಿತಿ ಎದುರಾಗಿದ್ದು ಹತ್ತು ಹಲವು ಅಸತ್ಯಗಳಿಂದ..ಅನ್ಯಾಯವಾಗಿ ಬಲಿಯಾದ ಬಾಲಕಿಯರಿಗೆ ನ್ಯಾಯ ದೊರಕುವುದೆಂತು?.. ಸಾಕ್ಷಿಗಳೇ ಮೌನ ತಾಳಿದಾಗ,,ಬಡಪಾಯಿಗಳಿಗೆ ನ್ಯಾಯ ಕೊಡಿಸುವವರಾರು?…
ಕಠಿಣ ಶಿಕ್ಷೆ ಮಾದರಿಯಾಗದ ಹೊರತು ನ್ಯಾಯವನ್ನು ನಿರೀಕ್ಷೆ ಮಾಡಲು ಅಸಾಧ್ಯ!.ಕೆಲ ಹೆಣ್ಣು, ಗಂಡು ಮಕ್ಕಳು ನೀಚ ಮಟ್ಟಕ್ಕೆ ಇಳಿದು ಸಂಬಂಧ ಗಳಿಗೆ ಬೆಲೆಯೆ ಇಲ್ಲದಂತೆ ಮಾಡಿದ್ದಾರೆ.ಅಂತವರಿಂದ ಉಳಿದವರಿಗೆ ಹಾನಿ..ಇಂತಹ ಕಸಗಳನ್ನು ಸ್ವಚ್ಚಮಾಡುವುದು ಅನಿವಾರ್ಯ!.

ಇದನ್ನು ಓದಿದ್ದೆ,ಅಯ್ಯೋ ಅನ್ನಿಸಿತು!..ಮನಸ್ಸು ಭಾರವಾಯಿತು!.ತಲೆತಗ್ಗಿಸುವಂರಹ ಪ್ರಕರಣಗಳು ಅದರಲ್ಲೂ  ಅತ್ಯಾಚಾರವು ಭಾರತದಲ್ಲಿ ಮಹಿಳೆಯರ ಮೇಲಿನ ನಾಲ್ಕನೇ ಅತಿ ಸಾಮಾನ್ಯ ಅಪರಾಧವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2021 ರ ವಾರ್ಷಿಕ ವರದಿಯ ಪ್ರಕಾರ, ದೇಶಾದ್ಯಂತ 31,677 ಅತ್ಯಾಚಾರ ಪ್ರಕರಣಗಳು ಅಥವಾ ಪ್ರತಿದಿನ ಸರಾಸರಿ 86 ಪ್ರಕರಣಗಳು ದಾಖಲಾಗಿವೆ, 2020 ರಿಂದ 28,046 ಪ್ರಕರಣಗಳೊಂದಿಗೆ ಏರಿಕೆಯಾಗಿದೆ, ಆದರೆ 2019 ರಲ್ಲಿ , 32,033 ಪ್ರಕರಣಗಳು ದಾಖಲಾಗಿವೆ..ಇದು ಕೇವಲ ಆಗಿಂದು 2024 ರ ಅಂಕಿ ಅಂಶಗಳ ನಿಖರತೆಯನ್ನು ನೆನೆದರೆ ಭಯವಾಗುತ್ತದೆ..ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸು ರಾಮ ರಾಜ್ಯ!.. ಇದು ನೆರವೇರುವ ಯಾವ ಸೂಚನೆಯೂ ಕಾಣದು!.

ಒಟ್ಟಾರೆಯಾಗಿ ಹೇಳುವುದಾದರೆ, ಹೆಣ್ಣು ಗಂಡು ಪ್ರಪಂಚದ ಜೀವನಾಡಿ.ಇವರಿಬ್ಬರೂ ಬೇಕು!. ಆದರೆ ಸಮಾನತೆಯ ಹೆಸರಲ್ಲಿ ಹೆಣ್ಣು ಸಬಲೆಯಾದಳೆಂಬ ಚಿಂತನೆಯನ್ನು ಒರಗೆ ಹಚ್ಚಬೇಕಿದೆ!.ಸಂಬಳ ತಂದರೆ ಮುಗಿತು!. ಸಂಬಳದ ವಾರಸುದಾರ ಯಾರೆಂಬ ಪ್ರಶ್ನೆ?.  ಎಷ್ಟೋ ದುಡಿಯುವ ಹೆಂಗಸರಿಗೆ ತಮ್ಮ ದುಡಿಮೆಯ ಲೆಕ್ಕಕೂಡ ಗೊತ್ತಿಲ್ಲ..ಎಷ್ಟೋ ಹೆಣ್ಣು ಮಕ್ಕಳು ಸಂಬಳದ ಖಾತೆನಂ ಕೂಡ ಗೊತ್ತಿಲ್ಲ. ಅವರ ಖರ್ಚಿಗೆ ಗಂಡ ದುಡ್ಡುಕೊಟ್ಟರೆ ಮುಗಿತು..ಅದರಲ್ಲೇ ಖುಷಿ ಪಡುವವವರಿಗೇನು ಕಡಿಮೆಯಿಲ್ಲ.ಹೆಣ್ಣು ಮಕ್ಕಳ ಸಂರಕ್ಷಣೆ ಮಾಡುವ ಸಹೋದರರ ದಂಡಿದೆ…ಕಾಯಿದೆ ಕಾನೂನುಗಳಿವೆ…ಹೆತ್ತವರಿದ್ದಾರೆ. ಎಲ್ಲ ಇದ್ದು ನಮ್ಮವರಿಂದ ನಾವು ಸುರಕ್ಷಿತರಿಲ್ಲ ಎಂಬ ಅಳುಕನ್ನು ಕಿತ್ತೊಗೆಯಬೇಕಿದೆ…ಸಮಾಜದ ಸ್ವಾಸ್ಥ್ಯ ಸಕಾರಾತ್ಮಕವಾಗಿ ಬೆಳೆಯಬೇಕಿದೆ.ಜಗತ್ತಿನಾದ್ಯಂತ ಬದಲಾವಣೆಯ ಗಾಳಿ ಬೀಸಬೇಕಿದೆ..ಹೆಣ್ಣು ಗಂಡು ಜಗದ ಕಣ್ಣುಗಳು ಎಂಬುದನ್ನು ಸಾರಿ ಸಾರಿ ಹೇಳಬೇಕಿದೆ.. ಎಲ್ಲ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು


3 thoughts on “

  1. ಮಹಿಳಾ ದಿನಾಚರಣೆಯ ನಿಮಿತ್ತ ಬರೆದಂತಹ ಲೇಖನ ಅತ್ಯಂತ ಸೂಕ್ತ ಹಾಗೂ ಪ್ರಸ್ತುತ nice ⭐⭐⭐⭐⭐

  2. ಅತೀ ಸುಂದರ ಮೌಲ್ಯಯುತ ಲೇಖನ. …ಮತ್ತ ಮತ್ತೆ ಓದಬೇಕೆಂಬ ಭಾವ ……..ತುಂಬ ಧನ್ಯವಾದಗಳು.

Leave a Reply

Back To Top