ಮಹಿಳೆ

ಜವಾಬ್ದಾರಿ ಹೊತ್ತ ಎಲ್ಲ ಪಾತ್ರಕ್ಕೂ ಜೀವ ತುಂಬುವವಳು ಹೆಣ್ಣು
ಜೀವನದ ಪ್ರತಿ ಘಟ್ಟದಲು ಪರಿಪೂರ್ಣ ಕರ್ತವ್ಯ ನಿಭಾಯಿಸುವವಳು ಹೆಣ್ಣು
ಮನೆಯ ನೆಮ್ಮದಿ, ಶಾಂತಿ, ಕೀರ್ತಿ ಕೊನೆವರೆಗೂ ಕಾಪಿಡುವವಳು ಹೆಣ್ಣು
ವೈವಿಧ್ಯಗಳ ನಡುವೆ ಸಮಷ್ಟಿ ಭಾವವ ಬೆಳೆಸುವವಳು ಹೆಣ್ಣು
ಅಹರ್ನಿಶಿ ಹಾಗೇ ಸವಾಲುಗಳ ಎದುರಿಸಿ ಎದೆಗುಂದದೆ ಸಬಲೆಯಾದವಳು ಹೆಣ್ಣು
ದೌರ್ಜನ್ಯ, ಶೋಷಣೆಯ ವಾಸ್ತವದ ಮಧ್ಯೆ ಬದುಕುಳಿದವಳು ಹೆಣ್ಣು
ಅನವರತ ದುಡಿದ ಶ್ರಮಜೀವಿ ನೀನು ಇಲ್ಲದಾಯಿತು ಬಿಡುವು
ಭೇದವಿಲ್ಲದೆ ಅಮಿತ ಮಮತೆಯನ್ನು ಹಂಚಿ ಜತನ ಮಾಡುವವಳು ಹೆಣ್ಣು
ಸಂಪ್ರದಾಯ, ರೀತಿ – ರಿವಾಜುಗಳ ಅನುಸರಿಸಿ ಪಾಲಿಸುವವಳು ಹೆಣ್ಣು
ಅವನಿಯಷ್ಟೇ ತೂಕದವಳು ನೂರುನೋವುಗಳ ಮರೆಮಾಚಿ ಅಂತಃಕರಣ ಮೆರೆಯುವವಳು ಹೆಣ್ಣು
ವಿವಿಧ ಕ್ಷೇತ್ರಗಳಲಿ ಸಹಭಾಗಿಯಾಗಿ ಮೂಢನಂಬಿಕೆ, ಕಟ್ಟಳೆಗಳ ಕಡೆಗಣಿಸಿದವಳು ಹೆಣ್ಣು
ಯಾರ ಮಾತಿಗೂ ಕಿವಿಗೊಡದೆ ಧೈರ್ಯದಿ ಮುನ್ನುಗ್ಗುವವಳು ಹೆಣ್ಣು
ಬದುಕು – ಭವಣೆಯ ಬಂದಿಯಾಗುವುದ ಭೇದಿಸಿ ಇಂದಿರಾಳು ನಿನ್ಸಂತೆ
ನಿಂದಿಸುವ ಸಮಾಜದಿ ಸಮಾನತೆಗೆ ನಿತ್ಯ ಹೋರಾಡುವವಳು ಹೆಣ್ಣು
ಇಂದಿರಾ.ಕೆ