ಮಹಿಳಾ ದಿನ-ಸವಿತಾ ದೇಶಮುಖ

ನಿಸ್ಸೀಮ – ಸಹನೆ- ಸಂಹಿತೆ
ಕಂದಮ್ಮ -ತನುಜೆ -ವನಿತೆ
ತಂಗಿ -ಅಕ್ಕ- ಅತ್ತಿಗೆ- ಮಾತೆ
ಹೆಂಡತಿ-ನಾದುನಿ -ಓರಗಿತ್ತೆ
ಅನುರಾಗ ಪ್ರಿಯತಮೆ- ಸ್ನೇಹಿತೆ
ಜನ ಜೀವದ ಜೀವ ಸಂಜೀವಿನಿ

ಕಣ್ಮಣಿ ಶಿರೋಮಣಿ ಚಿಂತಾಮಣಿ ..!!೧!!

ಹಾಡಿ ಹೊಗಳಿ ಆರಾಧಿಸುವರು
ನಿನ್ನ ಪೂಜಿಸಿ ಓಲೈಸುವರು
ಎಲ್ಲ ಮನ ಮನೆಗಳ ಶೋಭಿತೆ
ಎಲ್ಲ ಹೃದಯವಿಂದಾರೆನ್ನುವರು
ನೀ ಇಲ್ಲದ ಒಂದು ಕ್ಷಣ ಸಾಗದು
ನೀ ಶಕ್ತಿ-ಯುಕ್ತಿ ಪವನವೇ ಗೆಲ್ಲುವ

ಸ್ಥೈರ್ಯ ಧೈರ್ಯದ ಸಾಕಾರವೂ‌…!!೨!!

ಎಂತೆಲ್ಲಾ ಹಾಡಿ ಹೊಗಳಿ ನಿನ್ನ
ಬಂಧನದಿ ಬಂಧಿಸುವರೇಕೆ?
ಹುಟ್ಟುವ ಮುನ್ನ ಚಿವುಟುವರೆಕೇ?
ಹುಟ್ಟಿದರೆ ಕಡೆ ಗಣಿಸುವರೆಕೇ?
ಕೊಟ್ಟ ಕುಲಕ್ಕೆ ಹೊರತಾಗುವುದೆಕೇ?
ಮೌನವಾಗಿ ನಿನ್ನ ಸುಡುವರೆಕೇ?

ನಿನ್ನ ಭಾವನೆಯ ಹಿಚುವರೆಕೇ?….!!೩!!

ಬಂಧು ಸಲಾಕೆಯಲಿ ದಬ್ಬುವರೆಕೇ?
ನಿನ್ನೆ ಆಸೆಗಳ ಗಲ್ಲಿಗೇರಿಸುವರೆಕೇ?
ಪ್ರಶ್ನಿಸಿದರೆ ಗಯ್ಯಾಳಿ ಆಗುವುದೇಕೇ?
ನಿನ್ನ ಪಂಜರ ಬಂಧ- ನಿರ್ವಾಣಕ್ಕೆ
ಬುದ್ದ -ಬಸವ- ಸಿದ್ದರು ಸ್ವರ್ಗಸೆರಿದರೂ

ನೀ ಕಾಣದಾದೇ ಸೌಖ್ಯದ ಶಿಖರ ….!!೪!!

ಉಕ್ಕಿಸಿ ಕಣ್ಣೀರ ಕೋಡಿ ಹರಿಸುತ .
ಮತ್ತೆ ಸಾಗುವೆ ಬಾಳ ಸಮರಸದಿ
ನೀನಾದೆ ನಿಂದೆ ನಿಸ್ಸೀಮ ಸಹನೆ- ಚಿಂತಾಮಣಿ…
—————————————————–

Leave a Reply

Back To Top