ಹೆಣ್ಣೆಂದರೆ…!!

ಹೆಣ್ಣೆಂದರೆ…!!
ಅಂದಿನಿಂದಲೂ ಇಂದಿಗೂ
ಹೊಸಿಲ ದಾಟಲು ಹಲವಾರು
ಲಕ್ಷ್ಮಣ ರೇಖೆಗಳ ತಡೆಗೋಡೆಗಳು
ಅಹಲ್ಯೆ ಯಾದಳು ಕಲ್ಲಾಗಿ
ಭಾವನೆಗಳು ಜಡವಾದವು
ಸೀತೆಯು ಭೂಗರ್ಭ ಸೇರಿದುದು
ತಾಯಿ ಮಡಿಲೇ ನೆಮ್ಮದಿ ತಾಣವೆಂದು
ಮಾಧವಿಯ ಮುಂದಿಟ್ಟು
ತಂದೆಯಾದಿಯಾಗಿ ಎಲ್ಲರೂ
ಸಾಲು ಸುಲಿಗೆ ಮಾಡುವವರಂತೆ
ಮಾರಾಟದ ವಸ್ತವಾಗಿಸಿದರು
ಮಾಧವಿಯ ಮನ ಮಮ್ಮಲ
ಮರುಗಿತು
ಹೊಡೆತಕ್ಕೆ ಸಿಲುಕಿ ತರಗುಟ್ಠಿದಳು
ಅದುಮಿಟ್ಟ ದುಃಖಕ್ಕೆ ಲೆಕ್ಕವುಂಟೆ
ಹರಿಸಿದ ಅಶ್ರುಧಾರೆಗೆ ಕೊನೆಯುಂಟೆ
ತನುಮನಗಳೆರೆಡು ಬೆಂದು ಬಸವಳಿದವು
ದಿಟ್ಟತನದಿಂದ ಕೆಲವರು ಪಡೆದಿಹರು ಸ್ವಾತಂತ್ರ್ಯ
ಉಳಿದವರು ಉಸಿರ ಬಿಗಿಹಿಡಿದು
ಬಿಕ್ಕುತಿಹರು ಬಾಗಿಲ ಮರೆಯಲ್ಲಿ
ನಾರಿ ದೇವತೆ ಸ್ವರೂಪ ಭಾಷಙಗಳಿಗಷ್ಟೇ ಭೂಷಣ
ಅನುಕರಣೆಗೆ ಭಣಭಣ
ಆದರದಿಂದ ಆದರಿಸಿದರೆ
ಅಪರಂಜಿಯಂತವಳು…!
———————–
ಶಾರದಜೈರಾಂ.ಬಿ
.