ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಸಮತೆಯ ಶ್ರೇಷ್ಠಸಂತರು,
ಶಿಶುನಾಳ ಶರೀಫರು

ಹಜ್ಜೂಮಾ ಇಮಾಮ್ ಹಜರತ್
ಇವರ ಪುತ್ರರತ್ನರು
ಕರುನಾಡಿನ ಶಿಶುನಾಳ ಸಂತರು
ನಾಡಿನ ಕಬೀರದಾಸರು
ಗುರು ಗೋವಿಂದಭಟ್ಟರ ಪ್ರೀತಿಯ
ಪರಮ ಪಟ್ಟಶಿಷ್ಯರು
ಸಮಾಜದಲ್ಲಿ ಕಂಡ ವಿಷಯಗಳನೆ
ಪದಗಳನಾಗಿಸಿದರು
ಬದಲಾವಣೆಗೆ ಯತ್ನವ ಮಾಡಿದರು
ಪ್ರವೃತ್ತಿಗಳಿಗೆ ನೊಂದರು
ಜಾತಿಭೇದ ಅಳಿಸಿಹಾಕಿ ಭಾವೈಕ್ಯತೆಯ
ಬೀಜ ಬಿತ್ತಿದವರು
ಶಾಲೆಯ ಶಿಕ್ಷಕರಾಗಿ ಮಕ್ಕಳ ಬಾಳು
ಬೆಳಗುವಂತೆ ಮಾಡಿದರು
ಶರಣರ ವಚನಗಳನು ಒಪ್ಪಿದರು
ಮನಸಾರೆ ಅಪ್ಪಿದರು
ಕೈಯಲ್ಲಿ ತಂಬೂರಿ ಮೀಟುತಲಿ ಭಕ್ತಿ
ಮಾರ್ಗತೋರಿಸಿದರು
ತತ್ವಪದಗಳ ರಚಿಸಿ ಕನ್ನಡ ಸಾಹಿತ್ಯ
ಶ್ರೀಮಂತವಾಗಿಸಿದರು
ಆತ್ಮ ಅನಾತ್ಮಗಳನರಿತರು ಜನರಿಗೆ
ಜ್ಞಾನವ ಬೋಧಿಸಿದರು
ಸರಳುಡುಗೆಯ ಸಾದಾ ಮಹಂತರು
ಶರೀಫರಿಗೆ ನಮನಗಳು
ಅನ್ನಪೂರ್ಣ ಸು ಸಕ್ರೋಜಿ ಪುಣೆ
