ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
“ನಿನ್ನೊಲುಮೆಯಿಂದಲಿ”


ನಿನ್ನೊಲುಮೆಯಿಂದಲಿ ಪ್ರೀತಿಸಿದೆನು
ಭಾವ ರಾಗ ಲಯದೊಂದಿಗೆ ಹಾಡುವೆನು
ತಾಳ ಗೆಜ್ಜೆ ನಾದದೊಂದಿಗೆ ಕುಣಿವೆನು
ಸರಸ ಸಲ್ಲಾಪದಿಂದ ನುಡಿ ಮುತ್ತು ಆಡುವೆನು
ನೀನೆನಗೆ ಮೋಹಕ ತಾರೆಯು
ಆಗಸದ ಚಂದ್ರನ ಹುಣ್ಣಿಮೆಯು
ದಿನಕರನು ಉದಯಿಸಿದಂತೆ ಬರುವೆಯು
ಉಷೆಯಂತೆ ಸಂಧ್ಯಾ ಸಮಯದಿ ಜಾರುವೆಯು
ಎಂದು ಸೇರುವೆಯೋ ಕಾದಿರುವೆ
ನನ್ನ ಮನೆ ಮನವ ಬೆಳಕಾಗಿಸುವೆ
ಹೃದಯ ಮಂದಿರದಲಿ ಬಂದಿಯಾಗಿರುವೆ
ಬಾಳ ಪಯಣದಲಿ ಜೊತೆಗಾತಿ ಯಾಗಿರುವೆ

ಡಾ. ಲೀಲಾ ಗುರುರಾಜ್