ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ.ಪೂನಾ
ʼಶಿವನೆ ನಿನಗೆ ಮೂರು ಕಣ್ಣುʼ

ಶಿವನೆ ನಿನಗೆ ಮೂರು ಕಣ್ಣು .
ನಾವು ಹುಟ್ಟು ಕುರುಡರು.
ತೆರೆದು ತೋರಿಸು ಜಗದ ಕಣ್ಣು.
ಶಾಂತಿ ಪ್ರೀತಿಯ ಬೆಳಕನು .
ಪ್ರಾಣಿ ಪಕ್ಷಿ ಹಸಿರು ಹೂವು
ನೀನು ನೀಡಿದ ಕರುಣೆಯು .
ಗಾಳಿ ನೀರು ಸೂರ್ಯ ನೆಲವು.
ನೀನು ಕೊಟ್ಟ ಒಲುಮೆಯು .
ಜಾತಿ ಧರ್ಮ ಗಡಿ ಭಾಷೆ
ಕೊಲೆ ರಕ್ತದೋಕುಳಿ .
ಉಚ್ಚ ನೀಚ ಬಡವ ಬಲ್ಲಿದ
ಏಕೆ ಮೇಲು ಕೀಳುತನವು ?
ಮನುಜರೊಳಗೆ ಏಕೆ ಗೋಡೆ?
ಕಾಣಬೇಕಿದೆ ಸಮತೆಯು .
ಶತಮಾನದ ನೊಂದ ಒಡಲು.
ಕುದಿಯುತಿದಿದೆ ದಟ್ಟ ಕಡಲು.
ಬಿರುಕುಗೊಂಡಿದೆ ಬಾಳು ಸಡಿಲು
ಬೇಕು ನಿನ್ನ ಮಧುರ ಮಡಿಲು
ಯುದ್ಧ ಸಮರ ಬೇಡ ನಮಗೆ
ನಾವು ಶಾಂತಿ ಪ್ರೀಯರು
ವಿಶ್ವ ಪಥಕೆ ದಾರಿ ತೋರು
ನಾವು ಹುಟ್ಟು ಕುರುಡರು.
ಡಾ.ಶಶಿಕಾಂತ.ಪಟ್ಟಣ.ಪೂನಾ

ನಿಮ್ಮ ದೃಷ್ಟಿಯಲ್ಲಿ ಶಿವ ಅಂದರೆ ಯಾರು ?