ಧಾರಾವಾಹಿ-72
ಒಬ್ಬ ಅಮ್ಮನಕಥೆ
ಶಾಲೆಗೆ ಮಕ್ಕಳ ಕಳಿಸಲೊಪ್ಪದ
ಕಾರ್ಮಿಕರ ಅಜ್ಞಾನ

ಮಾಲೀಕರು ಮಕ್ಕಳಿಗೆ ತಿಂಡಿತಿನಿಸು ಹಾಗೂ ಹಣ್ಣು ಹಂಪಲುಗಳನ್ನು ತಂದಿದ್ದರು. ಮಾಲಿಯನ್ನು ಕರೆದು….” ಜೀಪಿನಲ್ಲಿ ಒಂದು ಮೂಟೆ ಗೋಧಿಯ ತರಿ ಇದೆ ಅದನ್ನು ತೆಗೆದುಕೊಂಡು ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಉಪ್ಪಿಟ್ಟು ಮಾಡಿ ದಿನವೂ ಕೊಡುವುದು ನಿನ್ನ ಹಾಗೂ ನಿನ್ನ ಪತ್ನಿಯ ಜವಾಬ್ದಾರಿ….ಮಧ್ಯಾಹ್ನ ಒಂದು ಗಂಟೆಯ ಒಳಗೆ ಮಕ್ಕಳಿಗೆ ಉಪ್ಪಿಟ್ಟನ್ನು ಕೊಡಬೇಕು”….ಎಂದರು. ಮಾಲೀಕರ ಮುಂದೆ ಕೈ ಕಟ್ಟಿ ನಿಂತಿದ್ದ ಮಾಲಿ…”ಆಗಲಿ ದಣಿ ನೀವು ಹೇಳಿದಂತೆ ಮಾಡಿ ಕೊಡುತ್ತೇವೆ”….ಎನ್ನುತ್ತಾ ಚೀಪಿನಿಂದ ಗೋಧಿಯ ತರಿಯನ್ನು ಇಳಿಸಿ ಬೆನ್ನ ಮೇಲೆ ಹೊತ್ತುಕೊಂಡು ಹೋದನು. ಮಾಲೀಕರು ಸುಮತಿಗೆ ವಂದಿಸಿ….”ಮಕ್ಕಳೇ….ಟೀಚರಮ್ಮ ತುಂಬಾ ಒಳ್ಳೆಯವರು….ನಿಮಗೆ ಓದು ಬರಹವನ್ನು ಹಾಗೂ ಉತ್ತಮ ನಡತೆಯನ್ನು ಕಲಿಸುತ್ತಾರೆ….ಅವರು ಹೇಳಿಕೊಟ್ಟ ಪಾಠವನ್ನು ಕಲಿತು ಒಳ್ಳೆಯ ಮಕ್ಕಳು ಆಗಬೇಕು….ಟೀಚರಮ್ಮ ಹೇಳಿದ್ದನ್ನು ಅನುಸರಿಸಬೇಕು….ನಾನು ಆಗಾಗ ಇಲ್ಲಿ ಬರುತ್ತೇನೆ….ಉಳಿದಂತೆ ರೈಟರ್ ಬಂದು ನಿಮ್ಮನ್ನು ದಿನವೂ ಗಮನಿಸುತ್ತಾರೆ….ಎಂದು ಹೇಳಿ ಮಕ್ಕಳೆಡೆಗೆ ಕೈ ಬೀಸಿ, ಸುಮತಿಯನ್ನು ಉದ್ದೇಶಿಸಿ….”ಸುಮತಿಯವರೆ ಮಕ್ಕಳಿಗೆ ಕಲಿಕೆಗೆ ಏನೇನು ಅಗತ್ಯವೋ ಅವುಗಳನ್ನು ಪಟ್ಟಿ ಮಾಡಿ ರೈಟರ್ ರವರಿಗೆ ತಿಳಿಸಿ”….ಎಂದಾಗ ಸುಮತಿ ಮಾಲೀಕರಿಗೆ ವಂದಿಸುತ್ತಾ…..” ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಇಲ್ಲಿ ಒಂದು ಕಪ್ಪು ಹಲಗೆ ಹಾಗೂ ಚಾಕ್ಪೀಸ್ ಮತ್ತು ಸ್ಲೇಟು ಬಳಪಗಳು ದೊರೆತರೆ ತುಂಬಾ ಅನುಕೂಲವಾಗುತ್ತಿತ್ತು”… ಎಂದಳು….”ನಾಳೆಯೇ ಇಲ್ಲಿ ಒಂದು ಕಪ್ಪು ಹಲಗೆಯನ್ನು ಮಾಡಿಸಿ ನಿಮಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ನಮ್ಮ ಮ್ಯಾನೇಜರ್ ರವರಿಗೆ ಹೇಳಿ ಖರೀದಿಸಿ ಕಳುಹಿಸಿ ಕೊಡುತ್ತೇನೆ”…ಎಂದು ಹೇಳುತ್ತಾ ಜೀಪು ಹತ್ತಿ ಅಲ್ಲಿಂದ ಹೊರಟರು.
ಮಕ್ಕಳೆಲ್ಲರೂ ಅಜ್ಜನಿಗೆ ಟಾಟಾ ಬೈ ಬೈ ಹೇಳಿ ಕೈ ಬೀಸಿದರು. ಅಂದು ಬಂದ ಕೆಲವೇ ಮಕ್ಕಳಿಗೆ ತಮ್ಮೆಲ್ಲರ ಹೆಸರು ಹಾಗೂ ಅವರ ಅಪ್ಪ ಅಮ್ಮನ ಹೆಸರು ಹೇಳುತ್ತಾ ಒಬ್ಬೊಬ್ಬರೇ ಪರಿಚಯ ಮಾಡಿಕೊಡಲು ಸುಮತಿ ತಿಳಿಸಿದಳು. ಮಕ್ಕಳು ಅದರಂತೆ ಒಬ್ಬೊಬ್ಬರೇ ತಮ್ಮ ಪರಿಚಯವನ್ನು ಮಾಡಿಕೊಟ್ಟರು. ನಂತರ ಗುರು ಶಿಷ್ಯರ ನಡುವಿನ ಒಡನಾಟದ ಬಗ್ಗೆ ಮಕ್ಕಳಿಗೆ ವಿವರಿಸಿ, ಕಲಿಕೆಯ ಮಹತ್ವವನ್ನೂ ತಿಳಿಸಿದಳು. ಕೋತಿ ಹಾಗೂ ಮೊಸಳೆಯ ಗೆಳೆತನದ ಕಥೆಯನ್ನು ಹಾಡಿನ ಮೂಲಕ ಮಕ್ಕಳಿಗೆ ಹೇಳಿ ರಂಜಿಸಿ, ಕಥೆಯ ನೀತಿಯನ್ನು ವಿವರಿಸಿದಳು. ಮಕ್ಕಳಿಗೆ ಟೀಚರಮ್ಮ ಹೇಳಿದ ಕಥೆಯು ಬಹಳ ಇಷ್ಟವಾಯಿತು. ಅಷ್ಟು ಹೊತ್ತಿಗೆ ಮಾಲಿ ಮತ್ತು ಆತನ ಪತ್ನಿ ಮಕ್ಕಳಿಗೆ ರುಚಿಯಾದ ಘಮ ಘಮಿಸುವ ಗೋಧಿಯ ಬಿಸಿ ಉಪ್ಪಿಟ್ಟನ್ನು ತಂದರು. ಜೊತೆಗೆ ಅಲ್ಲಿಯೇ ಇದ್ದ ಗಿಡಗಳಿಂದ ಅಗಲವಾದ ಎಲೆಯನ್ನು ಕಿತ್ತುತಂದು, ಮಕ್ಕಳಿಗೆ ಸಾಲಾಗಿ ಕುಳಿತುಕೊಳ್ಳುವಂತೆ ಹೇಳಿ ಎಲೆಯಲ್ಲಿ ಉಪ್ಪಿಟ್ಟನ್ನು ಹಾಕಿ ಮೊದಲು ಸುಮತಿಗೆ ಕೊಡಲು ಹೋದರು…. “ಮೊದಲು ಮಕ್ಕಳಿಗೆ ಕೊಡಿ”… ಎಂದು ಹೇಳಿದ ಸುಮತಿ ಕೊನೆಗೆ ತಾನು ಕೂಡಾ ಉಪ್ಪಿಟ್ಟನ್ನು ಪಡೆದು ಮಕ್ಕಳ ಜೊತೆಯಲ್ಲಿಯೇ ಕುಳಿತು ತಿಂದಳು. ಮಾಲಿಯನ್ನು ಕರೆದು…”ಬಹಳ ರುಚಿಕರವಾಗಿದೆ ಉಪ್ಪಿಟ್ಟು”…. ಎಂದಳು.
ಎಲ್ಲರೂ ಮಾಲಿ ಹಾಗೂ ಆತನ ಪತ್ನಿಗೆ ಧನ್ಯವಾದಗಳನ್ನು ತಿಳಿಸಲು ಹೇಳಿದಳು. ಮಕ್ಕಳೆಲ್ಲರೂ ಅವರವರ ಮಾತೃಭಾಷೆಯಲ್ಲಿ ಮಾಲಿಗೆ ಧನ್ಯವಾದ ತಿಳಿಸಿದರು. ಮಾಲಿ ಹಾಗೂ ಆತನ ಪತ್ನಿ ಅಲ್ಲಿಂದ ಹೊರಟು ಹೋದರು. ನಂತರ ಸ್ವಲ್ಪ ಸಮಯ ಮಕ್ಕಳ ಜೊತೆ ಮಾತನಾಡಿ, ಇಂದು ಬಂದ ಅದೇ ಸಮಯಕ್ಕೆ ನಾಳೆ ಬೆಳಗ್ಗೆ ಬರುವಂತೆ ಹೇಳಿ ಜೊತೆಗೆ ಇತರೇ ಮಕ್ಕಳನ್ನೂ ತಮ್ಮ ಜೊತೆ ಕರೆದುಕೊಂಡು ಬರುವಂತೆ ತಿಳಿಸಿ ಅವರೆಲ್ಲರನ್ನೂ ಮನೆಗೆ ಕಳುಹಿಸಿದಳು.
ಮನೆಯಲ್ಲಿ ತನ್ನ ಹಿರಿಯ ಹಾಗೂ ಕಿರಿಯ ಮಗಳನ್ನು ಬಿಟ್ಟು ಶಾಲೆಗೆ ಬಂದಿದ್ದಳು. ಅಮ್ಮ ಮನೆಗೆ ಬಂದ ಕೂಡಲೇ….” ಮೊದಲ ದಿನದ ಶಾಲೆಯ ಅನುಭವ ಹೇಗಿತ್ತು?… ಎಂದು ಹಿರಿಯ ಮಗಳು ಅಮ್ಮನನ್ನು ಕೇಳಿದಳು. ಸುಮತಿ ನಗುತ್ತಾ…”ತುಂಬಾ ಚೆನ್ನಾಗಿತ್ತು ಮಗಳೇ”…. ಎಂದು ಹೇಳುತ್ತಾ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ತನ್ನ ಅನುಭವವನ್ನು ವಿವರಿಸಿದಳು. ತಾನು ಶಾಲೆಯಲ್ಲಿ ಗೋಧಿ ಉಪ್ಪಿಟ್ಟು ತಿಂದಿದ್ದೇನೆ. ಮಕ್ಕಳಿಗೆ ಹಸಿವೆ ಆಗಿರಬಹುದು ಎಂದುಕೊಳ್ಳುತ್ತಾ ಅಡುಗೆ ಮನೆಗೆ ಹೋದಳು. ಮಕ್ಕಳಿಗೆ ಊಟವನ್ನು ಬಡಿಸಿದಳು. ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಹೇಗೆ ಮಾಡಿಸುವುದು? ಹಾಗೂ ಅವರನ್ನು ಶಾಲೆಯತ್ತ ಬರುವಂತೆ ಅವರ ಮನವನ್ನು ಹೇಗೆ ಸೆಳೆಯುವುದು? ಎಂದೆಲ್ಲಾ ಯೋಚಿಸುತ್ತಾ ಅಂದಿನ ರಾತ್ರಿ ಕಳೆದಳು. ಮಾರನೇ ದಿನದಿಂದ ಶಾಲೆಯ ದೈನಂದಿನ ದಿನಚರಿ ಪ್ರಾರಂಭವಾಯಿತು. ಪ್ರಾರಂಭದ ದಿನಗಳಲ್ಲಿ ಕೆಲವು ಪೋಷಕರು ರೈಟರ್ ರವರ ಆಜ್ಞೆಯ ಮೇರೆಗೆ ಮಕ್ಕಳನ್ನು ಬಿಡಲು ಬರುತ್ತಿದ್ದರು. ನಂತರದ ದಿನಗಳಲ್ಲಿ ಮಕ್ಕಳು ಸ್ವತಃ ಅವರೇ ಬರುತ್ತಿದ್ದರು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿರಲಿಲ್ಲ. ತೋಟದಲ್ಲಿ ಇರುವ ಹದಿನೈದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆಲ್ಲಾ ಖಡ್ಡಾಯವಾಗಿ ಅಕ್ಷರಾಭ್ಯಾಸ ಮಾಡಿಸಬೇಕು ಎಂಬ ವಿಚಾರವನ್ನು ಮಾಲೀಕರು ತಿಳಿಸಿದ್ದರು. ಹಾಗಿದ್ದರೆ ಮಾತ್ರ ನಿಮಗೆ ಸರಿಯಾದ ಸಂಬಳವನ್ನು ಕೊಡಲು ಸಾಧ್ಯ ಎಂದಿದ್ದರು. ಹಾಗಾಗಿ ಸುಮತಿ ಶಾಲೆ ಮುಗಿದ ನಂತರ ಮಕ್ಕಳ ಪೋಷಕರು ಬರುವವರೆಗೂ ಕಾಯ್ದು ಸಂಜೆ ಅವರ ಮನೆಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸದ ಮಹತ್ವವನ್ನು ಹಾಗೂ ಅವರ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವುದರ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಳು. ಆದರೆ ಪೋಷಕರಿಂದ ನೀರಸ ಪ್ರತಿಕ್ರಿಯೆ ಬರುತ್ತಿದ್ದವು.
ಆದರೂ ತನ್ನ ಪ್ರಯತ್ನ ಮಾಡುವುದನ್ನು ಸುಮತಿ ಬಿಡಲಿಲ್ಲ.
ಪ್ರತೀ ದಿನವೂ ತನಗೆ ಸಾಧ್ಯವಾದಷ್ಟು ಕೂಲಿ ಕಾರ್ಮಿಕರ ಮನೆಗೆ ಭೇಟಿ ನೀಡುತ್ತಿದ್ದಳು. ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವತ್ತ ಅವರ ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಳು. ಆಗೆಲ್ಲಾ ಅವರಿಂದ ಬರುವ ಒಂದೇ ಪ್ರಶ್ನೆಯೆಂದರೆ….”ಟೀಚರಮ್ಮ ನೀವು ಕಲಿತವರು. ಹಾಗಿದ್ದರೆ ಹೆಚ್ಚು ಸಂಬಳ ಸಿಗುವ ಕೆಲಸಕ್ಕೆ ಸೇರಿ ಚೆನ್ನಾಗಿ ಬದುಕಬಹುದಿತ್ತು. ಮತ್ತೆ ನಿಮ್ಮ ಜೀವನ ಹೀಗೇಕೆ? ನೀವು ಏಕೆ ಇಷ್ಟು ಕಷ್ಟದಲ್ಲಿ ಇದ್ದೀರಿ? ಅದೂ ನಮಗಿಂತ ತುಚ್ಛ ಸಂಬಳವನ್ನು ಪಡೆದುಕೊಂಡು”…ಎಂದು ಕೇಳುತ್ತಿದ್ದರು. ಆಗ ಸುಮತಿ ತನ್ನ ಕಥೆಯನ್ನು ಚುಟುಕಾಗಿ ಹೇಳಿ ತನ್ನಂತೆ ಎಲ್ಲರೂ ಆಗುವುದಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ ಅವರಲ್ಲಿ ಲೋಕಜ್ಞಾನವು ಹೆಚ್ಚುತ್ತದೆ ಹಾಗೂ ತಿಳುವಳಿಕೆ ಉಳ್ಳವರು ಆಗುತ್ತಾರೆ ಎಂದು ವಿವರಿಸಿ, ತೋಟದ ಆಫೀಸ್ ನಲ್ಲಿ ಕೆಲಸ ಮಾಡುವ ಇತರರ ಉದಾಹರಣೆಯನ್ನು ಕೊಡುತ್ತಿದ್ದಳು. ಆಗ ಅವರಿಂದ ಬರುವ ಉತ್ತರ ಅವಳನ್ನು ದಂಗುಬಡಿಸುವಂತೆ ಮಾಡುತ್ತಿತ್ತು…. “ಟೀಚರಮ್ಮಾ ವಿದ್ಯಾಭ್ಯಾಸದ ಅರಿವು ಹಾಗೂ ಕಲಿಕೆ ಎನ್ನುವುದು ಮೇಲ್ಜಾತಿಯ ಮಕ್ಕಳಿಗೆ ಇರುವುದು…. ನಮ್ಮ ಮಕ್ಕಳ ತಲೆಗೆ ಇವೆಲ್ಲಾ ಹತ್ತದು….ಅವರ ನಾಲಿಗೆ ಕ್ಲಿಷ್ಟಕರವಾದ ಪದಗಳನ್ನು ಉಚ್ಚರಿಸಲು ಹೊರಳದು….ನಾವು ಏನಿದ್ದರೂ ರಟ್ಟೆ ಮುರಿದು ದುಡಿದು ದಿನಗೂಲಿ ಪಡೆದು ಹೊಟ್ಟೆ ಹೊರೆದು ಕೊಳ್ಳುವವರು….ನಮ್ಮ ಮಕ್ಕಳಿಗೆ ಏಕೆ ವಿದ್ಯಾಭ್ಯಾಸ? ಅದೂ ಅಲ್ಲದೇ ಅಕ್ಷರಾಭ್ಯಾಸ ಕಲಿತ ನಂತರ ಪಟ್ಟಣದಲ್ಲಿ ಬಿಟ್ಟು ಓದಿಸುವಷ್ಟು ನಾವು ಶಕ್ತರಲ್ಲ…. ಅವರಿಗೆ ಅಲ್ಪ ಸ್ವಲ್ಪ ಬಟ್ಟೆ ಹಾಗೂ ಅವರ ಹೊಟ್ಟೆಯನ್ನು ಅರೆಬರೆ ತುಂಬಿಸಲು ಮಾತ್ರ ನಮ್ಮಿಂದ ಸಾಧ್ಯ. ಇನ್ನೆಲ್ಲಿ ನೀವು ಹೇಳಿದಂತೆ ಈ ನಮ್ಮ ಮಕ್ಕಳು ಅಕ್ಷರ ಕಲಿತು ಓದಿ ಪಟ್ಟಣದಲ್ಲಿ ಕೆಲಸ ಮಾಡಿ ಬದುಕಲು ಸಾಧ್ಯ!!!. ನಿಮಗೆ ಬೇರೆ ಕೆಲಸವಿಲ್ಲ ನಮ್ಮ ಮಕ್ಕಳು ಶಾಲೆಗೆ ಬರದಿದ್ದರೆ ನಿಮಗೆ ಕೆಲಸ ಹಾಗೂ ಸಂಬಳ ಎರಡೂ ಇರುವುದಿಲ್ಲ ಹಾಗಾಗಿ ಇಲ್ಲಿ ನಮ್ಮ ಮನೆಗಳಿಗೆ ಬಂದು ಪುಸಲಾಯಿಸಿ ಮಕ್ಕಳನ್ನು ಶಾಲೆಗೆ ಸೇರಿಸಲು ಹೇಳುತ್ತಿದ್ದೀರಿ ಎಂದು ಉತ್ತರ ಕೊಡುತ್ತಿದ್ದರು.
ರುತ್ತಿದ್ದವು.

ರುಕ್ಮಿಣಿ ನಾಯರ್

——————————————————–