ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ
 ಹರಣ ಹಾರಿಹೋದ ತೆರನಂತಾಯಿತ್ತು.

 ನೀ ಕಾಡಿ ಕಾಡಿ ನೋಡುವನ್ನಬರ,
 ಎನಗಿದು ವಿಧಿಯೇ ಹೇಳಾ ತಂದೆ ?

 ಮುರುವಾರುವನ್ನಬರ, ಎಮ್ಮೆ
 ಗಾಳಿಗೆ ಹಾರಿಹೋದ ತೆರನಂತಾಯಿತ್ತು
.

ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?


ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ
ಹರಣ ಹಾರಿಹೋದ ತೆರನಂತಾಯಿತ್ತು.

(ಹಗೆ ಎಂದ ತಕ್ಷಣ ನನಗೆ ನೆನಪು ಆಗುವುದು ನಮ್ಮ ಮನೆಯಲ್ಲಿ ಬಿಳಿ ಜೋಳದ ರಾಶಿಗಟ್ಟಲೇ ಚೀಲಗಳನ್ನು ತಂದು .ನೆಲದ ಒಳಗಡೆಯೇ ಆಳವಾದ ತಗ್ಗು ತೆಗೆದ ಬಾವಿಯಂತೆ ಕಂಡು ಬರುವ  ಒಂದು ಹಗೆಯನ್ನು ಕಂಡಿರುವೆ .ಈಗ ಆ ಹಗೆಯನ್ನು ಮುಚ್ಚಿ ಬಿಟ್ಟಿದ್ದಾರೆ .ಆ ಹಗೆಯಿಂದ ನಮಗೆ ಬೇಕಾದಾಗ ನಮ್ಮ ತಂದೆಯವರು ಹಗೆಯ ಒಳಗೆ ಇಳಿದು ಜೋಳವನ್ನು ಹಗ್ಗಕ್ಕೆ ಬುಟ್ಟಿ ಕಟ್ಟಿ ತೆಗೆದುಕೊಡುತ್ತಿದ್ದರು. )

ಅಕ್ಕಮಹಾದೇವಿಯವರು ಹೇಳುವ ಈ ಒಂದು ವಚನದಲ್ಲಿ ಬಲ್ಲಿದ ಎಂದರೆ ಶ್ರೀಮಂತ ರೈತ ತಾನು ಬೆಳೆದ ಕಾಳುಗಳನ್ನು ಹಗೆಯಲ್ಲಿ ಹಾಕಿ ಕೂಡಿಡುವ .ಆ ಹಗೆಯಿಂದ ತೆಗೆಯುವ ಕಾಳುಗಳಿಂದ ಹಸಿವನ್ನು  ನೀಗಿಸಿಕೊಳ್ಳುವ ಬಡವರು ಕಾದು ಕಾದು ಹಸಿವನ್ನು ನೀಗಿಸಿಕೊಳ್ಳದೇ ಪ್ರಾಣವೇ ಹೋದಂತೆ ಆಗಿದೆ ನನ್ನ ಬದುಕು ಎನ್ನುವರು ಅಕ್ಕ .

ನೀ ಕಾಡಿ ಕಾಡಿ ನೋಡುವನ್ನಬರ,
ಎನಗಿದು ವಿಧಿಯೇ ಹೇಳಾ ತಂದೆ ?

ಹೇ ಚೆನ್ನಮಲ್ಲಿಕಾರ್ಜುನಾ ನೀನೇ ನನ್ನನ್ನು ಹೀಗೆ ಕಾಡಿ ಕಾಡಿ ನನ್ನನ್ನು ಪರೀಕ್ಷಿಸುವ ಪರಿ ನಿಜಕ್ಕೂ ಘೋರವಾಗಿದೆ .
ಅದಾವ ವಿಧಿಯು ನನಗಿದು  ಪರಮಾತ್ಮ. ಸಹಿಸದ ನೋವು ತಾಳಲಾರದು ಮನ .ಅದೆಷ್ಟು ಕಾಡುವೆ, ಅದೆಷ್ಟು ಪರೀಕ್ಷೆ ,ಭಕ್ತಿ ಭಾವದಲ್ಲಿ ಕುಂದುಂಟಾಯಿತೆ?
ಹೇಳು ಚೆನ್ನಮಲ್ಲಿಕಾರ್ಜುನಾ ಮಾತನಾಡು .ಅದಾವ ದೋಷ ನನ್ನಲ್ಲಿ ಕಂಡೆ .ಅದಾವ ತೆರನಿಂದ ನನ್ನನ್ನು ಈ ರೀತಿ ಕಾಡುತ್ತಿರುವೆ. ಸಹಿಸಲಾಗುತ್ತಿಲ್ಲ ಸಂಕಟ ,ಸಹಿಸಲಾಗುತ್ತಿಲ್ಲ ನೋವು .ಹೇಳು ತಂದೆ ಎನ್ನುವೆ ಬಂದು ಎನ್ನುವೆ ಬಳಗ ಎನ್ನುವೆ ಹೇಳಾ ತಂದೆ ಮಾತನಾಡು .ಶಿಕ್ಷಿಸದಿರು ಶಿಕ್ಷೆಯ ಅಪರಾಧದ ಕುಣಿಕೆಗೆ ಕೊರಳು ವಡ್ಡಿದಂತಾದ ಈ ನೋವು ನನಗೇತಕೆ ಪ್ರಭುವೇ ?
ತಾಳದು ಮನ, ಸಹಿಸದು ಮನ ,
ಹಸಿವಾದರೇನು ? ಬಳಲಿ ಬಳಲಿ ಬೆಂಡಾಗಿದೆ ತನು. ನಿಜವನರಿಯದಾದೇಯಾ ತಂದೆ .
ಅಯ್ಯೋ ಅದಾವ ವಿಧಿಯ ಸಂಕಟವಿದು ಪರಮಾತ್ಮ.

ಮುರುವಾರುವನ್ನಬರ, ಎಮ್ಮೆ
ಗಾಳಿಗೆ ಹಾರಿಹೋದ ತೆರನಂತಾಯಿತ್ತು
.

ಕಾಯಾ ವಾಚಾ ಮನಸ್ಸಿನಿಂದ ಆರು ಅರಿಷಡ್ವರ್ಗಗಳನ್ನು ಗೆಲ್ಲಲಾರದೇ ಏನೂ ಅರಿಯದ ಎಮ್ಮೆಗಾಳಿಗೆ  ಹಾರಿ ಹೋದಂತಾಗಿದೆ .

 ಷಟ್ಸ್ಥಲದ ಆರು ಮೂರಿನ ಈ ಪಟವು ಮೇಲೇರಿ .ಸೊರಗಿ ಸೊರಗಿ ಸಣಕಲು ಕಡ್ಡಿಯಂತೆ ಆಗಿದೆ ಈ ತನು. ಕುಂದಿದೆ ತನು .ಸೊರಗಿದೆ ಅದು ,ಗಾಳಿ ಬಿಟ್ಟರೆ ಸಾಕು  ಹಾರಿ ಹೋಗುವ ಮನಸ್ಥಿತಿಯಾಗಿದೆ. ಎಂದೆನ್ನುವರು ಅಕ್ಕ.

ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?

ಅದಾವ ಪರಿಯಲ್ಲಿ ಪರೀಕ್ಷಿಸುವೆ ಹೇಳು ಪರಮಾತ್ಮ. ಅದಾವ ಪರಿಯಲ್ಲಿ ನನ್ನನ್ನು ಕರುಣಿಸುವೆ ಹೇ ದೇವಾ ಚೆನ್ನಮಲ್ಲಿಕಾರ್ಜುನಾ .
ಮಿತ್ಯ ಅಲ್ಲವಿದು ಇದು ನೋವು .
ಸತ್ಯವಾಗಲೂ ಉಸುರುತ್ತಿರುವೆ .
ನೀ ಪರೀಕ್ಷಿಸುವ ಈ ಕಾಟಕ್ಕೆ ಕೊನೆ ಯಾವಾಗ ಪ್ರಭು .
ಹಸಿವು ನೀಗಿಸದೇ ,ಬಡವನನ್ನು ಕಾಡುವ ಪರಿ ,ದಿನನಿತ್ಯ ನಿನ್ನದೇ ಧ್ಯಾನ ಭಕ್ತಿಯಲ್ಲೇ ಕಾಲ ಕಳೆಯುವ ಭಕ್ತನನ್ನು ಪರಿ
 ಪರಿಯಾಗಿ ಪರೀಕ್ಷಿಸುವ ನೀನು ಮತ್ತಾವ ರೀತಿಯಲ್ಲಿ ಪರೀಕ್ಷಿಸುವೆ ಚನ್ನಮಲ್ಲಿಕಾರ್ಜುನಾ ಎನ್ನುವರು ಅಕ್ಕ .

Leave a Reply

Back To Top