ಡಾ. ಲೀಲಾ ಗುರುರಾಜ್, ಮಳೆಬಿಲ್ಲು ಅವರ ಕವಿತೆ-ಆಸೆ

ಆಸೆಯೇ ದುಃಖಕ್ಕೆ ಮೂಲವು
ಗೌತಮ ಬುದ್ಧನ ನುಡಿಯವು
ಅದರ ಮೇಲೆಯೇ ನಮ್ಮೊಲವು
ಆಸೆ ನಮ್ಮದಾದರೆ ಅದೇ ಜಯವು

ಚಿಕ್ಕಂದಿನಲ್ಲಿ ಆಟ ಆಡುವಾಸೆ
ಹರೆಯದಲ್ಲಿ ಗೆಳೆತನದಾಸೆ
ವಯಸ್ಕರಾದಾಗ ಹಣದಾಸೆ
ಮುಪ್ಪಿನಲಿ ಮಕ್ಕಳೊಂದಿಗೆ ಮಗುವಾಗುವಾಸೆ

ಯೌವನದಿ ಪ್ರಿಯಕರನ ಕನಸು
ಈಡೇರಿಸಿಕೊಳ್ಳಲಾತುರ ನೂರಾರು ನನಸು
ಆದಾಗದಿದ್ದರೆ ಅವನೊಡನೆ ಮುನಿಸು
ದೂರಾದರೆ ಸದಾ ಅವನ ನಾಮ ಜಪಿಸು

ಹೀಗೆ ಆಸೆಗೆ ಎಲ್ಲೆ ಇದ್ದರಲ್ಲವೆ
ಬದುಕಿಗೆ ಬೆಲೆಯಿದೆಯಲ್ಲವೆ
ಅದರ ಹಿಂದೆ ಓಡಬಾರದಲ್ಲವೆ
ನಾವಿರುವೆಡೆಯೇ ಪೂರೈಸಿ ಕೊಳ್ಳಬೇಕಲ್ಲವೆ


Leave a Reply

Back To Top