ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼವಿದಾಯʼ

ಕಣ್ಣು ಮಂಜಾಗುತ್ತಿವೆ
ಒಡೆದ ಕನ್ನಡಕ
ಜೋಲಿ ಹೋಗದಿರಲು
ಕೈಗೆ ಊರುಗೋಲು
ಕೂದಲು ನೆರೆಯುತ್ತಿವೆ
ಹಲ್ಲು ಉದುರಿ ಬಿಳುತ್ತಲಿವೆ
ಅರಳು ಮರಳು
ಮಾತು ತಡವರಿಕೆ
ದಣಿವು ಬಾಯಾರಿಕೆ
ಸಿಡುಕು ಮುನಿಸು
ಅದಮ್ಯ ಪ್ರೀತಿ
ಭಾವ ತೀವ್ರತೆಗೆ ಕಣ್ಣೀರು
ಒಂಟಿತನದ ಕಾಟ
ಅಧ್ಯಾತ್ಮದ ಗೀಳು
ನನ್ನ ನೆರಳು
ಒಮ್ಮೆ ಹಿಂದೆ ಒಮ್ಮೆ ಮುಂದೆ
ಮುದಿ ಭಾವ ನನ್ನೆಡೆಗೆ
ಇಣುಕಿ ಅಣುಕಿಸುತಿದೆ
ಕುಹಕವಿರದ ಮುಗ್ಧತನ
ಎಲೆ ಜೀವವೆ
ಸಾವು ನನ್ನ
ಅಪ್ಪಿಕೊಳ್ಳುವ ಮುನ್ನ
ನನಗೆ ತಿಳಿಸಿ ಬಿಡು
ಒಮ್ಮೆ ಮನಸಾರೆ ನಕ್ಕು
ಜಗದ ಜೀವ ಜಾಲಕ್ಕೆ
ವಿದಾಯ ಹೇಳುತ್ತೇನೆ
ಋಣ ತೀರಿಸುವ ಬಯಕೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Excellent poem Sir
ಭಾವಪೂರ್ಣ ಕವನ
ಎಷ್ಟು ಸುಂದರ. ಭಾವ ಪರವಶ ಕವನ ಸರ್
Very beautiful poem Sir
ವಿದಾಯದಲ್ಲಿ ಋಣ ತೀರಿಸುವ ಬಯಕೆಯನ್ನು ಓದಿ ಧನ್ಯತಾ ಭಾವ ಮೂಡಿತು ಸರ್… ಒಂದೊಳ್ಳೆಯ ಹೃದಯವಂತಿಕೆಯ
ಮನಮಿಡಿಯುವ ಆಂತರ್ಯದ ಕನವರಿಕೆಗಳು ಕವನವಾಗಿ ಹರಿದಾಗ ಎಲ್ಲರ ಮನವನ್ನು ಅವು ಸರಳವಾಗಿ ತಲುಪುತ್ತಾ ಹೋಗುತ್ತವೆ.
ಸುತೇಜ
Beautiful poem Sir
ತುಂಬಾ ಚೆನ್ನಾಗಿದೆ ಸರ್
S0….nice….. poem…..Sir….
Akka mahadevi
ಜನ್ಮ ತಾಳಿದ ನಂತರ ಸಾವು ಖಚಿತ ಆದರೆ ಇರುವ ನಮ್ಮ ಜೀವನವನ್ನು ಇದ್ದಷ್ಟು ದಿನ ಸಾರ್ಥಕ ಪಡಿಸಿಕೊಂಡು ನೆಮ್ಮದಿಯಿಂದ ಜೀವನಕ್ಕೆ ವಿದಾಯ ಹೇಳುವುದು ಎಲ್ಲ ಜೀವಿಗಳಿಗೂ ಸಾಧ್ಯವಿಲ್ಲ ಆದರೆ ಕೆಲವೇ ಕೆಲವು ಜೀವಾತ್ಮಗಳಿಗೆ ಸಾಧ್ಯ ತುಂಬಾ ಭಾವಪೂರ್ಣವಾದ ಕವಿತೆ