ಖ್ಯಾತ ಕಾದಂಬರಿಕಾರರೂ, ಆಧುನಿಕ ವಚನಗಾರರೂ, ಕವಿಗಳೂ,ಆಗಿರುವಂತಹ ಎಂ.ಬಿ.ಸಂತೋಷ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ

ಖ್ಯಾತ ಕಾದಂಬರಿಕಾರರೂ, ಆಧುನಿಕ ವಚನಗಾರರೂ, ಕವಿಗಳೂ,ಆಗಿರುವಂತಹ ಶ್ರೀ ಎಂ.ಬಿ.ಸಂತೋಷ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಕೃತಿಗಳ ಲೋಕಾರ್ಪಣೆ  ಕಾರ್ಯಕ್ರಮ

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ )ಮೈಸೂರು, ವತಿಯಿಂದ ಪ್ರತಿಷ್ಠಾನದ ಅಧ್ಯಕ್ಷರಾದಂತಹ ಶ್ರೀ ಎಂ. ಬಿ. ಸಂತೋಷ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ವಚನ ಮಾಧುರ್ಯ ಆಧುನಿಕ ವಚನಗಳ ಸಂಕಲನ ಹಾಗೂ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿರುವಂತಹ ಶೋಭಾ ಬಿ ಅವರ ಮನದ ಹಾಯ್ಕುಗಳು  ಕೃತಿಗಳು ಇದೇ ಮಾರ್ಚ್ 9 ರಂದು ಲೋಕಾರ್ಪಣೆಗೊಳ್ಳುತ್ತಿವೆ.

ಈ ಕಾರ್ಯಕ್ರಮವನ್ನು ಶ್ರೀ ಕುಂದೂರು ಮಠದ ಅಧ್ಯಕ್ಷರಾದಂತಹ ಡಾ. ಶ್ರೀ ಶರತ್ ಚಂದ್ರ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಶ್ರೀ ಎಂ ಚಂದ್ರಶೇಖರ್ ಅವರು ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮತ್ತೊಬ್ಬರು ಮುಖ್ಯ ಅತಿಥಿಗಳು ಸನ್ಮಾನ್ಯ ಡಾ. ಮಲ್ಲಿನಾಥ ತಳವಾರ ಅವರು ಖ್ಯಾತ ಗಜಲ್ ಕರರು ಹಾಗೂ ಕನ್ನಡ ಪ್ರಾಧ್ಯಾಪಕರು ಆಗಿದ್ದು ಎಸ್ ವಿ ಡಿಗ್ರಿ ಕಾಲೇಜ್ ಕಲಬುರ್ಗಿಯಿಂದ ಆಗಮಿಸುತ್ತಿದ್ದು ಇವರು ಶೋಭಾ ಅವರ ಮನದ ಹಕ್ಕುಗಳು ಕೃತಿಯನ್ನು ಕುರಿತು ಮಾತನಾಡುತ್ತಿದ್ದಾರೆ.

ಶ್ರೀ ಎಂಬಿ ಸಂತೋಷ್ ರವರ ಕೃತಿಯನ್ನು ಕುರಿತು ಶಿಕ್ಷಕಿ, ಕವಯಿತ್ರಿ  ಹಾಗೂ ನಿರೂಪಕಿಯೂ ಆಗಿರುವಂತಹ ಶ್ರೀಮತಿ ಶೋಭಾ ಬಿ ಅವರು ಮಾತನಾಡಲಿದ್ದಾರೆ.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದಂತಹ ಶ್ರೀ ಎಂ ಬಿ ಸಂತೋಷ್ ಅವರು ವಹಿಸಿಕೊಂಡಿದ್ದು,ಪ್ರತಿಷ್ಠಾನದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮತಿ ಸಿ ವಾಣಿ ರಾಘವೇಂದ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿರುತ್ತಾರೆ.

 ಅಂದಿನ ಕಾರ್ಯಕ್ರಮದಲ್ಲಿ ಎಂಟು ಸಾಧಕರುಗಳಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಸನ್ಮಾನ್ಯ ಶ್ರೀ ಮಹಿಪಾಲ ರೆಡ್ಡಿ ಮುನ್ನೂರ ಅವರಿಗೆ ಕರುನಾಡ ಸಾಧನ ರತ್ನ ಪ್ರಶಸ್ತಿ,
 ಸನ್ಮಾನ್ಯ ಡಾ. ಮಲ್ಲಿನಾಥ ತಳವಾರ್ ಅವರಿಗೆ ಕರುನಾಡ ಸಾಹಿತ್ಯ ರತ್ನ ಪ್ರಶಸ್ತಿ,
ಡಾ. ಸೋಮಶೇಖರ್ ಅವರಿಗೆ ವಿದ್ಯಾ ವಾರಿಧಿ ಪ್ರಶಸ್ತಿ, ಶ್ರೀಮತಿ ಉಳುವಂಡ  ಕಾವೇರಿ ಉದಯ ಅವರಿಗೆ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ,
ಚಿ. ಹಿತೈಷ್ ಭೂಷಣ್ ಕೆ.ಎನ್. ಅವರಿಗೆ ಬಾಲ ಶ್ರೀ ಪ್ರಶಸ್ತಿ,
ಚಿ. ರೋಹಿತ್ ಟಿ ಗಿರೀಶ್ ಅವರಿಗೆ ಬಾಲ ಶ್ರೀ ಪ್ರಶಸ್ತಿ
,

 ಕು. ನಾಗಸಿರಿ ಹೆಚ್.ಎನ್. ಅವರಿಗೆ ಯುವಶ್ರೀ ಪ್ರಶಸ್ತಿ ಹಾಗೂ ಚಿ.ಭುವಂತ್ ಅವರಿಗೆ ಯುವ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಹಾಗೆಯೇ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿದ್ದು, 15 ಕವಿಗಳಿಗೆ ಸ್ವರಚಿತ ಕಾವ್ಯ ವಾಚನ ಮಾಡಲು ಅವಕಾಶ ಕಲ್ಪಿಸಲಾಗಿದೆ.


Leave a Reply

Back To Top