ಕಾವ್ಯ ಸಂಗಾತಿ
ಅರುಣ್ ಕೊಪ್ಪ
ನೆಮ್ಮದಿಯ ಜಾಗ

(ಕಾಲ್ಪನಿಕ ಕವಿತೆ)
ಎಲ್ಲಿ ಸಿಗ್ವದೋ ನೆಮ್ಮದಿ ಗೋ ಗರೆವ ಮಳೆಯ ಸಮಯ
ಮಳೆಯ ಹನಿಗಳು ತೊಟ್ಟು ಇಕ್ಕುವ ಸೂರುಗಳಲ್ಲೊ!
ವಯಸ್ಸಾದರೂ ಹಸಿರು ನೆರೆಯುವ
ಲಡ್ಡು ಮರದ ಕೊಂಬೆಗಳ ನೆರಳಲ್ಲೊ
ನಗುವ ನಲಿವ ಜನಕೀಗ ಜಾತ್ರೆ!
ಸಿಕ್ಕಾಗ ಮುಖದ ಗಂಟು ಬಿಚ್ಚುವದೆ ಇಲ್ಲ!
ಆದರೆ ಒಂದೆಡೆ ಆಕಸ್ಮಿಕ ಪಂಕ್ತಿಯ ಊಟ, ಕವಳ, ಹರಟೆ
ಮತ್ತದೇ ಕ್ರೋಧ! ನಾನ್ಯಾರೋ ಅವನ್ಯಾರೋ ?
ಮತ್ತೆ ಅದೊಂದು ದಿನ ಲಗ್ನ!ಲವ -ಲವಿಕೆ,
ಹಂದರದ ದಿನ ಹಬ್ಬ ಒಂದೇ ತಾಟಲ್ಲಿ ತಾಂಬೂಲ
ನಾನು ಮತ್ತು ಅವನು ಊಟವಲ್ಲ ನೋಟ ಅಂತರ
ನನಗೂ ಅವಗೂ…
ಪ್ರೀತಿಗೆ ದ್ವೇಷಕೆ ಇಲ್ಲಿ ಕಾರಣವಿರದೋ..
ನಂಬಿಕೆ ನಶೆ ರೂಪ ಪಡೆಯದಿರಲಿ
ಅತಿಯಾದರೂ ಅಮೃತ ವಿಷದಂತೆ!
ಆಪತ್ತಿಗೆ ಬರುವ ಆತ್ಮೀಯತೆ ಹಿತದ ಬಂಧ ಬಂದ್!ಆಗುವವರೆಗೂ….
ಮತ್ತೊಂದು ದಿನ ಜಾತ್ರೆ?! ಮೌನ ಮುರಿದ ಮನೆ ಊರ ಕೇರಿ ಗಲ್ಲಿ ಗಲ್ಲಿ ಆಸೆ ತೀರದವ ತೀರಿದ ಸುದ್ದಿ!
ಊರೆ ಉಪವಾಸ! ನಿಶಬ್ಧ, ಎಲ್ಲಿ ಬಂತು ಕ್ರೋಧ, ದ್ವೇಷ, ಅಸೂಯೆ, ಹತ್ತಾರು…. ನೆಮ್ಮದಿ ಜಾಗಕೆ ಹೊರಟ ಚಟ್ಟದ ನಾಲ್ಕು ದಿಕ್ಕುಗಳಲ್ಲೊ!
——————————————————————–
ಅರುಣ್ ಕೊಪ್ಪ.

ಸೊಗಸಾಗಿದೆ ಅರುಣ್ ಕೊಪ್ಪ ಅವರ ಕವಿತೆ
ಥ್ಯಾಂಕ್ಸ್