ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಜೀವ ಜೀವನ ಅಮೂಲ್ಯ

ನೀವಿರುವಂತೆ ಇರುತಲಿರಿ
ಮುಜುಗರವ ಪಡದಲೆ||
ನಿಮ್ಮಿರುವಿಕೆಯೆ ಸೃಷ್ಟಿ ಸ್ಪೂರ್ತಿ
ಮೆರೆಯುತಿರಿ ಅಳುಕದಲೆ||
ನಮ್ಮೊಳಗಿನ ಸಂಶಯವದು
ನಿಮ್ಮ ಕಾಡಿದರೆ ದೂರುತಲೆ||
ತಮ್ಮೊಳಗಿನ ವಿಶ್ವಾಸವದು
ಕಾಣೆಯಾಗದಿರಲಿ ಕೊರಗಿನಲೆ||
ಅವರಿವರ ಜತನ ಮಾಡುವ
ಹೊಣೆಗೆ ಸುಮ್ಮನೆ ಸಿಲುಕದಲೆ||
ತಮ್ಮವರ ಕಾಯ್ದು ನಿಷ್ಠೆಯಲಿ
ಮಾಡಿ ಪರ ಸೇವೆ ನ್ಯಾಯದಲೆ||
ಯಾರಿಗೆ ನಿಮ್ಮಾವಭಾವ
ಪ್ರಚೋದಿಸಿತೋ ಅರಿಯದಲೆ||
ಸರಿತಪ್ಪುಗಳೊಳಗೆ ಮರೆಯಾಗದಿರಿ
ಕುಚೋದ್ಯಕೆ ನಲ್ನುಡಿಯದೆಲೆ||
ಜೀವನ ಎಲ್ಲರಿಗೂ ಅಮೂಲ್ಯ
ಮುನ್ನಡೆಯಿರಿ ಜೀವಮೌಲ್ಯ ಕಾಣುತಲೆ||
ಬದುಕಲು ಎಂದು ಹಿಂಜರಿಯದಿರಿ
ಭೂಮಿ ಎಲ್ಲರಿಗಾಗಿದೆ ತಿಳಿಯದಲೆ||
———————————————————————————————————-
ಮಾಳೇಟಿರ ಸೀತಮ್ಮ ವಿವೇಕ್
