ವ್ಯಾಸ ಜೋಶಿ ಅವರ ತನಗಗಳು

ಭೂತಾಯಿ ಕೊಟ್ಟ ಅನ್ನ
ಎಡೆ ಮಾಡೋ ಭಕ್ತರು,
ಉಣ್ಣದ ದೇವಗೇಕೆ
ಎನ್ನುವರು ಮೌಢ್ಯರು.
**
ಜಾತ್ರೆಲಿ ಎಳೀತಾರೆ
ಸಂಭ್ರಮದಿಂದ ತೇರು
ತುಳಿತಕ್ಕೆ ಸಿಕ್ಕಾಗ
ಜಾತ್ರೆ ಮೌಢ್ಯವೆಂದರು
*
ಹೆತ್ತು ಹೊತ್ತವರಿಗೆ
ಪ್ರೀತಿಯಿಂದ ಸಲುಹಿ
ಸತ್ತಮೇಲೂ ಶ್ರಾದ್ಧವ
ಮಾಡುವುದು ಮೌಢ್ಯವಾ?
**
ಪಶುವಿಗಿಂತ ಹೆಚ್ಚು
ಬುದ್ಧಿ ಕೊಟ್ಟ ದೇವಗೆ
ಭಜಸಿ ಪೂಜಿಸೋದು
ಮೌಢ್ಯವೆಂದರೆ ಹೇಗೆ?


ದೂರದ ದೇವರಿಗೆ
ಪಾದಯಾತ್ರೆ ಸೇವೆಯು,
ಮೌಢ್ಯ ಎನ್ನುವವರು
ಭಾಳ ಬುದ್ಧಿವಂತರು
**
ಮೌಢ್ಯವೆಂಬ ಇದ್ದಿಲು
ನಂಬಿಕೆಯ ನೀರಲ್ಲಿ
ಅಭ್ಯಂಗ ಮಾಡಿದರೂ
ಪ್ರಯೋಜನವೇನಿಲ್ಲ


ಉಯ್ಯಾಲೆಯ ಮನಸು
ನಮ್ಮೇಲೆಯೇ ಜಿಗುಪ್ಸೆ,
ಎರಡೆರಡು ಮತಿ
ತ್ರಿಶಂಖು ಸ್ವರ್ಗ ಸ್ಥಿತಿ


Leave a Reply

Back To Top