ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಸಮಾಧಾನ

ಕಾದು ಕುಳಿತೆ
ಬದುಕಲ್ಲಿ ಗೆಳತಿಗಾಗಿ
ಒಂದಲ್ಲ ಒಂದು ದಿನ
ಬಂದೇ ಬರುವಳೆಂದು
ಅವಳೆನ್ನ ಪ್ರೀತಿಸುವಳೆಂದು
ಆದರೆ…….
ಅವಳೆನ್ನ ತಿರುಗಿ
ನೋಡಲೇ ಇಲ್ಲ
ಅವಳೆದೆಯ ಪ್ರೀತಿ ಕುಂಡದಲಿ
ಕೊನೆಗೂ ನಾ ಹೂವಾಗಿ
ಅರಳಲೇಯಿಲ್ಲ
ಅವಳಿಂದ
ಬೇಸರ, ದುಃಖ
ನೋವು ನನಗಾಗಲಿಲ್ಲ
ಬದಲಾಗಿ ಅವಳ
ನಾ ನೆನೆದಾಗಲೆಲ್ಲ
ಕಾವ್ಯ ಕ್ರಿಯೆ ನಡೆಯುವುದಲ್ಲ
ನನಗದುವೇ “ಸಮಾಧಾನ “
——————————————————
ಎಂ. ಬಿ. ಸಂತೋಷ್,
