ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಅವಳ ಆಸೆ

ಮರುಗಲಿಲ್ಲ ಅವರು ಆ ಕ್ಷಣ
ನಮಗೆ ಹೆಣ್ಣು ಮಗು ಹುಟ್ಟಿತೆಂದು
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ
ಲಾಲನೆ ಪಾಲನೆ ಮುದ್ದಿಸುವ ಹೊತ್ತು
ಚಂದಮಾಮನ ತೋರಿಸಿ ಬಾಯಿಗೆ ತುತ್ತು
ಬೆಳೆದು ಶಾಲೆ ಮೆಟ್ಟಿಲು ತುಳಿದಳು
ವಿದ್ಯೆಗೆ ಪೂರ್ಣ ಗಮನ ಕೊಟ್ಟಳು

ಶಿಕ್ಷಣದಲಿ ಪರಿಪೂರ್ಣ ಸಾಧಕಿ
ಅಪ್ಪ ಅಮ್ಮನ ಕಷ್ಟಕ್ಕೆ ಸೇವಕಿ
ಅವರು ತನಗೆ ನೀಡಿದ ರಕುತದ ಋಣ
ನಾ ಹೇಗೆ ಮರೆಯಲಿ ಪ್ರತಿಕ್ಷಣ
ನಾ ಅಪ್ಪ ಅಮ್ಮನ ಜಗದ ಕಣ್ಣಾಗಿ
ಅಣ್ಣ-ತಮ್ಮಂದಿರ ಪ್ರೀತಿಯ ಸಹೋದರಿಯಾಗಿ
ಗಂಡನ ಕೆಲಸ ಕಾರ್ಯಕ್ಕೆ ಜೊತೆಯಾಗಿ
ಬಾಳಬೇಕೆಂಬ ನನ್ನ ನಿತ್ಯದ ಆಸೆ
——————————————
ಸತೀಶ್ ಬಿಳಿಯೂರು
