ಅನಿಸಿಕೆ
ವಾಯುವೇಗದ ಮನಸ್ಸು
ಶಾಂತಾ ಕುಂಟಿನಿ.

ನಮ್ಮನ್ನು ನಾವು ಎಷ್ಟು ದೂರದವರೆಗೆ ಎಳೆದೊಯ್ಯುತ್ತೇವೆಯೋ ಅಷ್ಟು ಜಾಸ್ತಿ ದೀರ್ಘ ಉಸಿರಾಟ ಹೊಂದುವ ವಿಶಾಲತೆ ಇರಬೇಕಾಗುತ್ತದೆ.ಎಷ್ಟು ದೂರದವರೆಗೆ ದೃಷ್ಟಿಯೋ ಅಷ್ಟು ಬೆಳವಣಿಗೆ ಹೊಂದಲು ತಯಾರಿರಬೇಕಾಗುತ್ತದೆ.ಇಲ್ಲದಿದ್ದರೆ, ಅರ್ಧ ದಾರಿಯಲ್ಲಿ ಕೂರಬೇಕಾದೀತು..ದೃಷ್ಟಿ ಮಾತ್ರ ಇಟ್ಟು ಮನಸ್ಸು ಹಾಗೂ ಶರೀರವ ಏನೊಂದೂ ಪ್ರಯತ್ನವೂ ಇಲ್ಲದೆ, ಸುಮ್ಮನೆ ಬಿಟ್ಟು ಬಿಟ್ಟರೆ ದೃಷ್ಟಿ ಕೂಡಾ ನಿಂತಲ್ಲಿಯೇ ನಿಲ್ಲಬಹುದು.
ಕೆಲವರೇನು ಮಾಡುತ್ತಾರೆ ಎಂದರೆ ಈ ದೃಷ್ಟಿ ನೆಡಲು ಸಹಾಯಕರಾದವರ ಫಲ ಕೈಗೆಟುಕಿದಾಗ ನನ್ನ ಸ್ವ ಪ್ರಯತ್ನದಿಂದ ಎಲ್ಲವೂ ಆಗಿದೆ ಎಂದು ಪರೋಕ್ಷವಾಗಿ ದೃಷ್ಟಿ
ನೆಡಲು ಸಹಾಯಕರಾದವರ ಮರೆತು ಬಿಡುತ್ತಾರೆ… ಆವಾಗ
ಶುರುವಾಗುತ್ತದೆ ಎಲ್ಲಿ ಹೋಗಿ ತೋರಿಸಿದರೂ ದೃಷ್ಟಿ ದೋಷ
ಒಂದು ಅಹಂ ಎಲ್ಲಿಯವರೆಗೆ ನಮ್ಮ ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದರೆ, ಹಣ ಮಾಡಿ ಅದನ್ನು
ಖಾಲಿ ಮಾಡಿಸುವವರೆಗೆ, ಸಂಪತ್ತನ್ನು ತುಂಬುವಂತೆ ಮಾಡಿ
ಅದನ್ನು ಖಾಲಿ ಮಾಡಿಸುವವರೆಗೆ, ಸಿಕ್ಕ ಸಿಕ್ಕ ಕ್ಷೇತ್ರಗಳಿಗೆಲ್ಲ
ನಲಿದಾಡಿ ಶರೀರದ ಕೊಬ್ಬು ಕರಗಿ ಹುಂಡಿಯ ಗುಂಡಿಗೆ ಹಣ
ಪಾವತಿಸುವವರೆಗೆ, ಕೊನೇಗೆ ದೇವರ ಬಳಿ ಬಂದು ದೇವರೇ
ಇದೆಲ್ಲವೂ ನೀನೇ ಮಾಡಿಸಿದ್ದು ತಗೋ ಕುಂಕುಮಾರ್ಚನೆ,
ಅನ್ನುವಲ್ಲಿಯತನಕ… ಆವಾಗ ಎಲ್ಲದಕ್ಕೂ ಕಾರಣರಾದ
ಅವ್ಯಕ್ತ ಶಕ್ತಿಯ ಬಗ್ಗೆ ಗೋಚರವಾಗುತ್ತದೆ..
ಶಾಂತಾ ಕುಂಟಿನಿ
