ಮನೆಯಲ್ಲಿ ತಂದೆ ತಾಯಿಗಳು, ಶಾಲೆಯಲ್ಲಿ ಶಿಕ್ಷಕರು ತಮ್ಮ ಮಕ್ಕಳಿಗೆ ( ವಿದ್ಯಾರ್ಥಿಗಳಿಗೆ) ವರ್ತನಾ ಪಾಠಗಳನ್ನು ಹೇಳಿಕೊಡುವಾಗ ಸಮಯೋಚಿತ ದಂಡೋಪಾಯ (ಶಿಕ್ಷೆ) ಗಳನ್ನು ಬಳಸಿಕೊಳ್ಳುವುದು ಸಹಜ ಸಾಮಾನ್ಯ.

ಇತ್ತಿತ್ತಲಾಗಿ ಶಾಲೆಗಳಲ್ಲಿ ಶಿಕ್ಷಕರು, ಮಕ್ಕಳನ್ನು ಶಿಸ್ತಿನ ವಿಷಯದಲ್ಲಿ ದಂಡಿಸುವ ನೈತಿಕ ಬಲವನ್ನೇ ಕಳೆದುಕೊಂಡಿದ್ದಾರೆ. ಹಾಗೆಯೇ ಕೆಲ ಪಾಲಕರು ತಮ್ಮ ಮನೆಯಲ್ಲಿ……
ಅದೇನೇ ಇರಲಿ, ನೀತಿ ನಿಯಮಗಳ
ಪಾಲನೆಯ ವಿಚಾರದಲ್ಲಿ ಮಾನವರೇ ಚರ್ಚಾ ವಸ್ತು ಆಗಬೇಕೆಂದೇನೂ ಇಲ್ಲ . ಅಥವಾ ಶಿಸ್ತು ಮಾನವರಷ್ಟೇ ಗುತ್ತಿಗೆ ಹಿಡಿದ ಸಂಗತಿಯಲ್ಲ. ಇದರ ಸ್ವಾರಸ್ಚಕರ ಚರ್ಚೆಯು ಇಲ್ಲಿಯ ವಸ್ತು……
.
ಜಲ ದೈತ್ಯ ತಿಮಿಂಗಲು ಶಿಸ್ತಿನ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು. ಅದು ತನ್ನ ಮರಿಗಳನ್ನು ಸಾಕಷ್ಟು ಪೌಷ್ಠಿಕ ಆಹಾರ ನೀಡಿ ಉತ್ತಮ ರೀತಿಯಲ್ಲಿ ಬೆಳೆಸಿ ದೊಡ್ಡವುಗಳನ್ನಾಗಿ ಮಾಡುವ ಜವಾಬ್ದಾರಿ ಪೋಷಕತನದೊಂದಿಗೆ ಅಷ್ಟೇ ಬಿಗುವಾಗಿ ಶಿಕ್ಷಣ ನೀಡುವಲ್ಲಿಯೂ ಅದು ಹಿಂದೆ ಮುಂದೆ ನೋಡುವುದಿಲ್ಲ. ತಿಂದು ಉಂಡು ಬೆಳೆದು ಕೊಬ್ಬೇರಿದ ಕೋಣನಂತೆ ಎಲ್ಲೆಂದರಲ್ಲಿ ನುಗ್ಗುವ (ಮದ ಮನುಷ್ಯ) ಪ್ರವೃತ್ತಿಯನ್ನೆಂದೂ ಮರಿಗಳ ವಿಷಯದಲ್ಲಿ ಅದು ಸಹಿಸುವುದಿಲ್ಲ.( ಮಗು ಬೇಡಿದನ್ನೆಲ್ಲ ವಿವೇಚನೆ ಇಲ್ಲದೆ ನಡೆಸಿಕೊಟ್ಟು ಧೃತರಾಷ್ಟ್ರನ ಗತಿ ಏನಾಯಿತೆಂಬ ಕಥೆಯನ್ನು ಈ ತಿಮಿಂಗಲು ಕದ್ದು ಕೇಳಿಸಿಕೊಂಡಿರಬಹುದು)

ಕೆಲವೊಮ್ಮೆ ಮರಿ ತಿಮಿಂಗಲುಗಳು ಉದ್ಧಟತನದಿಂದ ರಕ್ಷಿತ ವಲಯವನ್ನು ಬಿಟ್ಟು ಹಡಗುಗಳು ಬರುವ ದಾರಿಗೆ ಅಡ್ಡ ಬಂದು ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸಂಭವಿಸಿದಾಗ ಅಲ್ಲಿಗೆ ಒಡನೆ ಧಾವಿಸಿ ಬರುವ ತಾಯಿ ತಿಮಿಂಗಲು ಅಪಾಯದಿಂದ ಅದನ್ನು ರಕ್ಷಿಸುತ್ತದೆ…ಮಾತ್ರವಲ್ಲ ಮಗುವಿನ ತುಂಟತನಕ್ಕೆ ಬೇಸರಿಸಿಕೊಂಡೋ ಮುನಿಸಿಕೊಂಡೋ ಇತ್ತ ಕರೆದುಕೊಂಡು ಬಂದು ಬಾಲದಿಂದ ಅದಕ್ಕೆ ಬಲವಾದ ಪೆಟ್ಟುಕೊಟ್ಟು “ಹುಷಾರ್” ಎಂದು ಎಚ್ಚರಿಕೆಯನ್ನು ನೀಡುತ್ತದೆ.


One thought on “

Leave a Reply

Back To Top