ಕಾವ್ಯ ಸಂಗಾತಿ
ಬಿ.ಶ್ರೀನಿವಾಸ
ಹ್ಯಾಕ್ ಆಗುವುದೆಂದರೆ..

ಮೊದಮೊದಲಿಗೆ ಇಟ್ಟಿಗೆ
ನಂತರ ಮಂದಿರ-ಮಸೀದಿ
ಆಗಾಗ ಚರ್ಚುಗಳೂ
ಆಮೇಲೆ
ಇ.ವಿ.ಎಂ…..
ಈಗೀಗ
ಗಂಗೆ
ಯಮುನೆ
ಕಣ್ಣಿಗೆ ಕಾಣದ ಸರಸ್ವತಿಯೂ…
ಹ್ಯಾಕ್ ಆಗುವುದೆಂದರೆ…
ಕುಂಭಮೇಳದಲ್ಲಿ
ಮುಳುಗಿದಷ್ಟೇ ವೇಗವಾಗಿ
ಹೊರಚೆಲ್ಲುವುದು
ಮನುಷ್ಯರ ಪಾಪ ಮತ್ತು ಪ್ರಜ್ಞೆ !
———————————————-
ಬಿ.ಶ್ರೀನಿವಾಸ. ಸೊಂಡೂರು
