ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯ
ಬಾಂದಳದಲ್ಲಿ
ಅನಿರೀಕ್ಷಿತವಾಗಿ
ಅರಳುವ
ಹೂವು
ನಾನು;

ಮನದ
ಗುಡಿಯಲಿ
ಮನೆಯ ಮಾಡಿ
ಬದುಕಿನ
ಹಾದಿಗೆ
ಎದೆಯ
ಬಂಧಿಸುವ
ಸೇತುವೆ
ನಾನು;

ಮಾತು
ಮೌನ ಗಳು
ಬಲಿತು
ಫಸಲಾಗಿ
ಬೆಳೆದು
ಭವಿಷ್ಯದ
ಜೀವನಕೆ
ಹೆಗಲಾಗಿ
ಬೆಸೆಯುವ
ಗೋಡೆಯು
ನಾನು;

ಹೃದಯ ಬಡಿತವ
ಅರಿತು
ನಗು ,ಕಾಳಜಿಯ
ಹೆಗ್ಗುರುತು
ಮೂಡಿಸುವ
ಕೆಂಗುಲಾಬಿ
ನಾನು;

ಜಾತಿ ಧರ್ಮದ
ಸೊಂಕು ತಾಕದ
ವಿರೋಧಿಸುವ
ಮನದ
ಮಾತಿಗೂ
ಬಗ್ಗದ ಜಗ್ಗದ
ಉಕ್ಕು
ನಾನು;

ಬಡತನ
ಸಿರಿತನದ
ಅಹಂ ಭಾವವ
ತೊರೆದ
ಒಲವಿನ ಹೃನ್ಮನಗಳ
ಮೃದವಾಗಿಸುವ
ನವನೀತವು
ನಾನು;

ಭಾವನೆಗಳು
ಬೆರೆತು
ವಾಸ್ತವತೆಯ
ಅರಿತು
ಭ್ರಮಲೋಕದ
ಮುಖವಾಡವ
ಕಳಚುವ
ನಿಸರ್ಗ
ನಾನು;

ಜಗದಲಿ
ಎಂದೂ
ಬಾಡದ
ಸದಾ ಹಸಿರು
ಹೆಸರಾಗಿರುವ
ಪ್ರೀತಿ
ನಾನು


About The Author

Leave a Reply

You cannot copy content of this page

Scroll to Top