ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಕಾಫಿಯಾನಾ ಗಜಲ್ (ಮಾತ್ರೆಗಳು೨೬)

ಗುಳಿಕೆನ್ನೆಯ ಮೇಲಿನ ಮುಂಗುರುಳ ತುಂಟತನ ತಡೆಯಲಾರೆ
ಮಿಂಚು ಕಣ್ಣಲಿ ಮಾಡಿದ ಸನ್ನೆಯ ಆಜ್ಞೆಯನು ಮೀರಲಾರೆ
ಕಾಮನ ಬಿಲ್ಲಿನ ಬಣ್ಣ ಬಳಿದು ಪ್ರೇಮ ಓಲೆ ಕಳೆಸಿರುವೆ
ಮುನಿದು ಮೌನದಿ ದೂರಾದರೆ ಅಗಲಿಕೆ ನೋವು ಸಹಿಸಲಾರೆ
ದೇವಲೋಕದ ಮಂದಾರ ಹೂಮಾಲೆ ಒಲವಿಂದ ಮುಡಿಸಿದೆ
ಇರುಳು ಹೀರಿದ ಅವಳ ಕೆಂದುಟಿಯ ಜೇನ ಸವಿ ಮರೆಯಲಾರೆ
ಸಪ್ತ ಸಾಗರದಲ್ಲಿ ಜಲಕ್ರೀಡೆ ಆಡಿಸಿ ಸುಖ ಪಡಿಸಿದೆ
ಏಳು ಜನುಮದಲಿ ಉಸಿರಾಗಿ ಬದುಕಾದವಳ ತೊರೆಯಲಾರೆ
ವ್ಯಾಮೋಹದ ಬೆಳಕನು ರಂಗಿನ ಚಿಟ್ಟೆಯಂತೆ ಹುಡುಕುತಿರುವೆ
ಅಮಲಿನಲ್ಲಿ ಈ ಅನುರಾಗದ “ಪ್ರಭೆ”ಯನು ನಂದಿಸಲಾರೆ
ಪ್ರಭಾವತಿ ಎಸ್ ದೇಸಾಯಿ

ಸುಂದರ ಭಾವ ಮ್ಯಾಡಂ
ಚೆಂದ ಪ್ರೀತಿ ಅಭಿವ್ಯಕ್ತಿ ಗಜಲ್ ಮೇಡಮ್.